spot_img
spot_img

2 ಕೋಟಿ ರೂ ವೆಚ್ಚದ ಪ್ರಭಾ ಶುಗರ್ಸ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಅಶೋಕ ಪಾಟೀಲ

Must Read

- Advertisement -

ಘಟಪ್ರಭಾ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನಾಯಕತ್ವದಲ್ಲಿ ಅರಭಾವಿ ಮತಕ್ಷೇತ್ರ ಸರ್ವಾಂಗೀಣ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಅದರಂತೆ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಸಹಕಾರದೊಂದಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ ಹೇಳಿದರು.

ಇಲ್ಲಿಗೆ ಸಮೀಪದ ಅರಭಾವಿ-ಚಳ್ಳಿಕೇರಿ ರಾಹೆ-೪೫ ಯಿಂದ ಪ್ರಭಾಶುಗರವರೆಗಿನ ಲೋಕೋಪಯೋಗಿ ಇಲಾಖೆಯ ಅನುದಾನದಡಿ 2 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಭಾಶುಗರ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಈಗಾಗಲೇ ಶಾಸಕ ಹಾಗೂ ರೈತಸ್ನೇಹಿ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ನಮ್ಮ ಕಾರ್ಖಾನೆಗೆ ಬರುವ ರಸ್ತೆಯೂ ಕೂಡ ಹದಗೆಟ್ಟಿದ್ದು, ಇದನ್ನು ಬಾಲಚಂದ್ರ ಜಾರಕಿಹೊಳಿ ಅವರ ಗಮನಕ್ಕೆ ತಂದಾಗ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆಯ ಯೋಜನೆಯಲ್ಲಿ ಪ್ರಭಾಶುಗರ ಕ್ರಾಸ್‌ದಿಂದ ಕಾರ್ಖಾನೆಯವರೆಗೆ ರಸ್ತೆಯ ಸುಧಾರಣೆಗಾಗಿ ಅನುದಾನವನ್ನೂ ಸಹ ಮಂಜೂರು ಮಾಡಿಸಿದರು ಎಂದು ಅವರು ಹೇಳಿದರು.

- Advertisement -

ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನೋಪಯೋಗಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿದರು. ಕಾರ್ಖಾನೆಯ ಕಾರ್ಮಿಕರು, ರೈತರು ಹಾಗೂ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರಭಾಶುಗರ ರಸ್ತೆಗೆ ಅನುದಾನ ಬಿಡುಗಡೆ ಮಾಡಿಸಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಾರ್ವಜನಿಕರಿಂದ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಅರ್ಪಿಸುವುದಾಗಿ ಗದಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತಿನಕುಮಾರ ಪಾಟೀಲ, ಸಿ.ಬಿ. ಪಾಶ್ಚಾಪೂರಿ, ಆಯ್.ಎ. ಜಂಬಗಿ, ಎಸ್.ಜಿ. ಗೌಡರ, ಎಂ.ಎ. ಪವಾರ, ವಿನಾಯಕ ಧರ್ಮಶಾಲಿ, ರಮೇಶ ಈರಪ್ಪಗೋಳ, ಅಣ್ಣಪ್ಪ ಮಾಳಂಗಿ, ಗುತ್ತಿಗೆದಾರ ಹನಮಂತ ದಾಸನವರ ಮುಂತಾದ ಗಣ್ಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group