ಆಡು ಮುಟ್ಟದ ಸೊಪ್ಪಿಲ್ಲ ಅಶ್ವತ್ ರವರು
ಮಾಡದ ಪಾತ್ರಗಳಿಲ್ಲ. ತಂದೆ,ಸಹೋದರ,ಪತಿ, ತಾತ, ವೈದ್ಯ, ನಾರದರು, ಪುರಂದರದಾಸರು, ಹಳ್ಳಿಗ, ಪಟ್ಟಣಿಗ, ಗುರು, ಸೇವಕ, ನ್ಯಾಯಾಧೀಶರಾಗಿ,ಆಳಾಗಿ ಅರಸಾಗಿ ಮನೋಜ್ಞ ಅಭಿನಯ.
ಕರಗನಹಳ್ಳಿ ಅಶ್ವತ್ಥನಾರಾಯಣ ಉರುಫ್
ಕೆ. ಎಸ್. ಅಶ್ವತ್ ಅಭಿಜಾತ ಕಲಾವಿದ, ಕಷ್ಟದ ಬೆಂಕಿಯಲ್ಲಿ ಬೆಂದ ಪುಟಕಿಟ್ಟ ಚಿನ್ನ. ಸರಳತೆಯೇ ಮೈವೆತ್ತ ಮೂರ್ತಿ, ನೀತಿ ನಿಯಮ, ಸಂಯಮ, ಶಿಸ್ತು ಪಾಲನೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರು.
ಅಭಿನಯವೇ ನಿಮ್ಮ ಉಸಿರು.
ಕಪಟವರಿಯದ ನೇರ ನಡೆ ನುಡಿಯ ವ್ಯಕ್ತಿತ್ವ. ಕರ್ಮಯೋಗಿ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ರಾಜಯೋಗಿ. ಸಹಜ ಅಭಿನಯದಿಂದಲೇ ಅಭಿಮಾನಿಗಳ ಮನಸೂರೆಗೊಂಡ ನಟನಾಚತುರ, ಲಕ್ಷ್ಮೀ ಪುತ್ರನಲ್ಲದಿದ್ದರೂ, ಕಲಾ ಸರಸ್ವತಿಯ ಹೆಮ್ಮೆಯ ಪುತ್ರ. ಎಲ್ಲರ ಮೆಚ್ಚುಗೆಗೆ ಪಾತ್ರ, ಈ ಮೈಸೂರಿನ ಮುಕುಟ.ಚಾಮುಂಡಿ ತಾಯಿಯ ಪರಮ ಭಕ್ತ.
ಕಸ್ತೂರಿನಿವಾಸ,ಮುತ್ತಿನಹಾರ,ಗೆಜ್ಜೆಪೂಜೆ, ಶರಪಂಜರ, ಬಯಲುದಾರಿ,ಬಂಗಾರದ ಪಂಜರ, ಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ, ವೈವಿದ್ಯಮಯ ಪಾತ್ರಗಳಲ್ಲಿ ನಟಸಿದರೂ ನಾಗರಹಾವಿನ ರಾಮಾಚಾರಿಯ ಪ್ರೀತಿಯ ಚಾಮಯ್ಯ ಮೇಷ್ಟರಾಗಿ ಜನಜನಿತ. ಸಾವಿರ ವರುಷ ಕಳೆದರೂ ಅಭಿಮಾನಿಗಳ ಎದೆಯ ರಜತಪರದೆಯ ಮೇಲೆ ಚಿರಶಾಶ್ವತ.
ಈ ಶತಮಾನದ ಶಕ ಪುರುಷ,
ನಿನ್ನ ಜನ್ಮ ಶತಾಬ್ದಿಯಂದು
ಇದೋ ನಿಮಗೆ ನಮ್ಮೆಲ್ಲರ
ಪ್ರೀತಿ ಅಭಿಮಾನದ ಅಭಿಷೇಕ.
****************
ಕೆ.ವಿ. ರಮೇಶ್ ಕಟ್ಟೆಪುರ

