Bidar- ತಹಶೀಲ್ದಾರ ಮೇಲೆ ಹಲ್ಲೆ ಪ್ರಕರಣ; ಇಪ್ಪತ್ತು ಜನರ ವಿರುದ್ಧ ಪ್ರಕರಣ ದಾಖಲು

Must Read

ಬೀದರ – ಪ್ರತಿಭಟನೆಯ ನೆಪದಲ್ಲಿ ಕರ್ತವ್ಯನಿರತ ತಹಶೀಲ್ದಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಗುಪ್ತಾಂಗದ ಮೇಲೆ ಹಲ್ಲೆ ಮಾಡಿದ ಪ್ರತಿಭಟನೆ ಕಾರರು ಅಕ್ಷರಶಃ ಕ್ರೂರತ್ವ ಮೆರೆದಿದ್ದು ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

ಹಲ್ಲೆ ಮಾಡಿದ ಇಪ್ಪತ್ತು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ನಡೆದ ಈ ನಾಚಿಕೆಗೇಡಿನ ಘಟನೆ ರಾಜ್ಯದಲ್ಲಿ ಒಂದು ಕಪ್ಪು ಚುಕ್ಕೆ ಆಗಿದೆ ಎಂದು ಹೇಳಬಹುದು.

ಕರ್ತವ್ಯ ನಿರ್ವಹಿಸುತ್ತಿದ್ದ ಒಂದು ತಾಲ್ಲೂಕು ದಂಡಾಧಿಕಾರಿ ಮೇಲೆಯೇ ನಿರ್ದಯವಾಗಿ ಹಲ್ಲೆ ಮಾಡುತ್ತಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಅಂದರೆ ಜನ ಸಾಮಾನ್ಯರ ಗತಿ ಏನು ಎಂಬುದೀಗ ಚರ್ಚೆಗೆ ಗ್ರಾಸವಾಗಿದೆ.

ಸಾರ್ವಜನಿಕರಲ್ಲಿ ಒಂದು ಅನುಮಾನ ಏನೆಂದರೆ, ಪ್ರತಿಯೊಂದು ಪ್ರತಿಭಟನೆ ಮಾಡಬೇಕೆಂದರೆ ಪೊಲೀಸ್ ಇಲಾಖೆಯ ಅಪ್ಪಣೆ ಪಡೆಯಬೇಕು ಆದರೆ ಕೋವಿಡ್ ಸಂದರ್ಭದಲ್ಲಿ ರ್ಯಾಲಿ ಮತ್ತು ಪ್ರತಿಭಟನೆಗಳ ಮೇಲೆ ನಿಷೇಧವಿದೆ ಆದರೂ ಇಲ್ಲಿ ಪೋಲಿಸ್ ಇಲಾಖೆ ಒಬ್ಭ ತಾಲ್ಲೂಕು ದಂಡಾಧಿಕಾರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಬಹುದು. ಈ ಘಟನೆ ನಡೆದ ನಂತರ ಹಲ್ಲೆ ಪ್ರಕರಣದಲ್ಲಿ ಹುಮನಾಬಾದ ಪೋಲೀಸರು ಅಂಕುಶ ಗೋಖಲೆ ಸೇರಿ 20ಮಂದಿ ವಿರುದ್ಧ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯಾವ ಕಾರಣಕ್ಕಾಗಿ ಈ ಹಲ್ಲೆ ನಡೆದಿದೆ ಎಂದರೆ, ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ ಭಾವಚಿತ್ರ ತೆಗೆಸಿ, ಅವಮಾನಗೈದರೆಂಬುದು ಪ್ರತಿಭಟನಾಕಾರರ ಹೇಳಿಕೆ. ಪ್ರಕರಣ ಸಂಬಂಧ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಲು ಆಗಮಿಸಿದ್ದರು.

ಈ ವೇಳೆ ಮನವಿ ಪತ್ರ ಸ್ವೀಕರಿಸಲು ತಕ್ಷಣ ಬರುವಂತೆ ಒತ್ತಾಯಿಸಿದರು ಪ್ರತಿಭಟನೆ ಕಾರರು. ತಹಶಿಲ್ದಾರರು ಕಚೇರಿಯಲ್ಲಿ ಸದ್ಯ ಸಭೆ ನಡೆಯುತ್ತಿದೆ ಅದು ಮುಗಿದ ಬಳಿಕ ಬರುತ್ತೇನೆ ಸ್ವಲ್ಪ ತಾಳಿ ಎಂದಿದ್ದಕ್ಕೆ ಪ್ರತಿಭಟನ ಕಾರರು ಕೋಪಗೊಂಡು ಸಭಾಂಗಣಕ್ಕೆ ನುಗ್ಗಿ ಪೀಠೋಪಕರಣ ಚೆಲ್ಲಾಪಿಲ್ಲಿಗೊಳಿಸಿದ್ದಲ್ಲದೇ ಅವರ ಗುಪ್ತಾಂಗದ ಮೇಲೆ ಒದ್ದು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ತಹಸೀಲ್ದಾರ ಹೇಳಿಕೆ ನೀಡಿದ್ದಾರೆ.

ತಹಶಿಲ್ದಾರರ ಅವರು ನೀಡಿದ ದೂರು ಆಧರಿಸಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಂಕುಶ ಗೋಖಲೆ ಸೇರಿ 20ಮಂದಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ವಿಷಯ ತಿಳಿದ ಶಾಸಕ ರಾಜಶೇಖರ ಬಿ.ಪಾಟೀಲ, ಎಂ.ಎಲ್.ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ, ಭೀಮರಾವ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ, ತಹಶೀಲ್ದಾರ ಪ್ರದೀಪಕುಮಾರಗೆ ಧೈರ್ಯ ತುಂಬಿದ್ದಲ್ಲದೇ ತಪ್ಪಿತಸ್ಥ ಆರೋಪಿಗಳು ಯಾರಾದರೂ ಸರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಸಂಘಟನೆ ಹಾಗೂ ಪ್ರತಿಭಟನೆಯ ಹೆಸರಿನಲ್ಲಿ ಒಬ್ಬ ಅಧಿಕಾರಿಯ ವಿರುದ್ಧ ಇದು ನಡೆದದ್ದು ದೌರ್ಜನ್ಯದ ಪರಮಾವಧಿ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಒಂದೇ ಹಕ್ಕು ಒಂದೇ ಕಾನೂನು ಇದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಯಾವ ರೀತಿಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಜಾನಪದದಿಂದ ಮಾನವೀಯ ಮೌಲ್ಯ ಹೆಚ್ಚಳ – ಎಸ್ ಆರ್ ಪಿ

ಬಾಗಲಕೋಟೆ- ಎಲ್ಲ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮಥ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು...
- Advertisement -

More Articles Like This

- Advertisement -
close
error: Content is protected !!
Join WhatsApp Group