- Advertisement -
ಬೀದರ: ತಾವು ಕೇಳಿದ ಮಾಹಿತಿಯನ್ನು ಪೂರೈಸಲು ವಿಳಂಬ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿಯನ್ನು ಕಚೇರಿಯ ಒಳಗೆ ಹಾಕಿ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಮೂವರು ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬೀದರ ಪೊಲೀಸರು ಬಂಧಿಸಿದ್ದಾರೆ.
ದಿಲೀಪ ದೊಡಮನಿ, ಸಂಜು ಹಾಗೂ ಗಣೇಶ ಎಂಬ ಮೂವರು RTI ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನುಗ್ಗಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದಾಗ ತಮ್ಮ ಕೆಲಸಕ್ಕೆ ಅಡ್ಡಿ ಪಡಿಸಿದ್ದು ಬಿಇಓ ಅವರು ಕಚೇರಿಯಲ್ಲಿ ಇಲ್ಲ ಎಂದರೂ ಕೇಳದೆ ತಮ್ಮನ್ನು ಒಳಗೆ ಹಾಕಿ ಕಚೇರಿಗೆ ಬೀಗ ಹಾಕಲು ಹೊರಟಿದ್ದರೆಂಬುದಾಗಿ ಪತ್ರಾಂಕಿತ ವ್ಯವಸ್ಥಾಪಕ ಪ್ರಕಾಶ ಟಾಳೆ ಎಂಬುವವರ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಎಂಟು ಜನರು ಇದ್ದು ಸದರಿ ಮೂವರು ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸದ್ದಾರೆ. ಬೀದರ ಪೊಲೀಸರು ಎಫ್ ಆಯ್ ಆರ್ ದಾಖಲಿಸಿ ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ