ಬೀದರ – ಮಾಜಿ ಸಚಿವ, ಹಾಲಿ ಶಾಸಕ ಪ್ರಭು ಚೌಹಾಣ ಅವರ ಪುತ್ರ ಪ್ರತೀಕ ಚೌಹಾಣ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು ಸಂಚಲನ ಸೃಷ್ಟಿಸಿದೆ.
ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿ ಮದುವೆಯಾಗುವುದಾಗುವುದಾಗಿ ನಂಬಿಸಿ ಪ್ರೀತಿ ಹೆಸರಿನಲ್ಲಿ ಲೈಂಗಿಕ ಸಂಬಂಧ ಬೆಳೆಸಿರುವ ಪ್ರತೀಕ ಚೌಹಾಣ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಐಪಿಸಿ ಕಲಂ ೩೭೬(೨)N, ೩೬೬,೩೨೪,೫೦೬ ಅಡಿ ಯುವತಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಪ್ರಭು ಚೌಹಾಣ, ನಮ್ಮ ಕುಟುಂಬವನ್ನು ತೇಜೋವಧೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ, ಔರಾದ ಕ್ಷೇತ್ರ ಅಭಿವೃದ್ಧಿ ಆಗಬಾರದು ಎಂಬ ದುರುದ್ದೇಶ ಇದೆ ಎಂದು ಹೇಳಿ ನನ್ನ ಮಗನ ಹೆಸರು ಕೆಡಿಸಲು ಈ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆರೋಪ ಮಾಡಿದ ಯುವತಿಯ ಚಾಟಿಂಗ್ ಹಿಸ್ಟರಿ ಬಿಡುಗಡೆ ಮಾಡಿದ ಚೌಹಾಣ ಅವರು, ಇವರು ಯಾವ ಟೆಸ್ಟ್ ಬೇಕಾದರೂ ಮಾಡಲಿ. ಅವಳು ಬೇರೆ ಯುವಕನ ಕೂಡ ಚಾಟಿಂಗ್ ಮಾಡಿದ್ದಾಳೆ, ಅವನ ಜೊತೆ ವಿಡಿಯೊ ಇದೆ ಎಂದು ವಿಡಿಯೊ ಬಿಡುಗಡೆ ಮಾಡಿ, ಅವಳು ಕೂಡ ನನ್ನ ಮಗಳು ಇದ್ದ ಹಾಗೆ ಅವಳ ತೇಜೋವಧೆ ಮಾಡಲಾರೆ ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ