ಸಿಲಿಕಾನ್ ಸಿಟಿಯ ಕುಮಾರ ಸ್ವಾಮಿ ದೇವಾಲಯದಲ್ಲಿ ಆಡಿ ಕೃತಿಕೆ ಹಬ್ಬದ ಸಂಭ್ರಮ

Must Read

ಬೆಂಗಳೂರು: ನಗರದಲ್ಲಿ ಆಡಿ ಕೃತಿಕೆ ಹಬ್ಬದ ಪ್ರಯುಕ್ತ ಹನುಮಂತ ನಗರದ ಕುಮಾರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಸಲ್ಲಿಸುವ ಸಲುವಾಗಿ ಬನಶಂಕರಿ 3 ನೇ ಹಂತದ ಇಟ್ಟಮಡುವಿನಿಂದ ಭಕ್ತರು ಹಾಗೂ ಅವರ ಜೊತೆ ಪುಟ್ಟ ಹುಡುಗಿ ಕಾವಡಿ ಹೊತ್ತು ಕೊಂಡು ಸಾಗುತ್ತಿದ್ದ ದೃಶ್ಯ ಜುಲೈ 23 ರಂದು ಕಂಡು ಬಂತು.

ನಗರದ ಹಲವೆಡೆ ಆಡಿ ಕೃತಿಕೆ ಹಬ್ಬದ ಪ್ರಯುಕ್ತ ಕಾವಡಿ ಉತ್ಸವ ಅದ್ದೂರಿಯಾಗಿ ಜರುಗಿತು.ಹನುಮಂತ ನಗರದ ಹರಿಹರ (ಸುಬ್ರಹ್ಮಣ್ಯ) ದೇವಾಲಯದಲ್ಲಿ ನಡೆದ ಕಾವಡಿ ಉತ್ಸವದಲ್ಲಿ ಭಕ್ತರು ಹಳದಿ ವಸ್ತ್ರ ಧರಿಸಿ ಕಾವಡಿ ಹೊತ್ತು ಹರಕೆ ತೀರಿಸಿದರು.

ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ ,ಮೆರವಣಿಗೆ ನಡೆಯಿತು.

ಆರಾಧನೆ: ಕುಮಾರಸ್ವಾಮಿ , ಮುರುಗ , ಕಾರ್ತೀಕೆಯನ್ ಎಂಬ ಹಲವು ನಾಮಗಳಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಕಾವಡಿ ಹಬ್ಬದಲ್ಲಿ ಆರಾಧಿಸುತ್ತಾರೆ. ಅದೇ ರೀತಿ ಬನಶಂಕರಿ 3 ನೇ ಹಂತದ ಇಟ್ಟಮಡುವಿನಿಂದ ಕಾವಡಿ ಹೊತ್ತು ಹೊರಟ ಭಕ್ತರು ಸಂಭ್ರಮ ಸಡಗರಗಳಿಂದ ಕುಮಾರಸ್ವಾಮಿಯ ಆರಾಧನೆ ಮಾಡಿದರು

ಆಚರಣೆ: ಶಿವಮೊಗ್ಗದ ಗುಡ್ಡೆ ಕಲ್ಲಿನಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ , ಬೆಂಗಳೂರಿನ ಹನುಮಂತ ನಗರದಲ್ಲಿರುವ ಶ್ರೀ ಕುಮಾರ ಸ್ವಾಮಿ ದೇವಾಲಯ , ತಮಿಳುನಾಡು , ಭಾರತದಲ್ಲಷ್ಟೇ ಅಲ್ಲದೇ ಸಿಂಗಪೂರ , ಮಲೇಷಿಯಾ ದೇಶಗಳಲ್ಲೂ ಕಾವಡಿ ಹಬ್ಬವನ್ನು ಆಚರಿಸುತ್ತಾರೆ.

ಕಾವಡಿ ವಿಶೇಷತೆ: ಬಣ್ಣ ಬಣ್ಣದ ಹೂವಿನಿಂದ ಅಲಂಕಾರ ಮಾಡಿದ ಪುಷ್ಪ ಕಾವಡಿ , ನವಿಲು ಗರಿಗಳಿಂದ ಅಲಂಕಾರ ಮಾಡಿದ ಕಾವಡಿ , ರಥದ ಮಾದರಿಯ ಕಾವಡಿ ಹೀಗೆ ಹಲವು ಬಗೆಯ ಕಾವಡಿಗಳನ್ನು ಹೊತ್ತು ಭಕ್ತರು ದೇವಾಲಯ ಕ್ಕೆ ಬಂದು ಭಗವಂತನ ದರ್ಶನ ಪಡೆದು ಪಾವನರಾಗುತ್ತಾರೆ. ಬೆಂಗಳೂರಿನ ಹನುಮಂತ ನಗರದ ಕುಮಾರ ಸ್ವಾಮಿ ದೇವಾಲಯ ದಲ್ಲಿ ಆಡಿ ಕೃತಿಕೆ ಹಬ್ಬದ ಆಚರಣೆ ಸಮಯದಲ್ಲಿ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.


ಚಿತ್ರ: ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group