Times of ಕರ್ನಾಟಕ

ಕಿವುಡು, ಮೂಕರ ವಸತಿ ಶಾಲೆಯಲ್ಲಿ ಪಾಲಕರ ಸಭೆ

ಮುನವಳ್ಳಿ : ಪಟ್ಟಣದ ಶ್ರೀ ವ್ಹಿ ಪಿ ಜೇವೂರ ಸ್ಮಾರಕ ಕಿವುಡು ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಪಾಲಕರ ಪೋಷಕರ ಸಭೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ನಾಮದೇವ ಬಿಲಕರ ರವರು ಪಾಲಕರಿಗೆ ಮಕ್ಕಳ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.ಸಂಸ್ಥೆಯ ಅಧ್ಯಕ್ಷರಾದ ಪಂಚಪ್ಪ...

ಎರಡು ಕವನಗಳು : ಪಾರ್ವತಿದೇವಿ ತುಪ್ಪದ

ಜೀವನದ ಪಾಠ ಸಣ್ಣವರು, ಬಡವರು ಎಂದು ನಿಕೃಷ್ಟ ಮಾಡದಿರಿ ಕಸ ದೂಳು ಎಂದು ತಿಳಿಯದಿರಿ ಅಹಂಕಾರದಿಂದ ತುಳಿದು ಹೋಗದಿರಿ ಅದು ನಿನ್ನನೇ ಅಳಿಸುತ್ತದೆ ಒಂದು ದಿನ ಗೊತ್ತಾಗುವುದು ಧೂಳು ಕಣ್ಣುಗಳಿಗೆ ಬಿದ್ದ ದಿನಗೌರವ ಕೇಳಿ ಪಡೆಯುವುದಲ್ಲರೀ ಬದಲಾಗಿ ಅದು ತಾನಾಗಿಯೆ ಬರಬೇಕರೀ ನಾವು ಯಾರನ್ನೂ ಕೀಳಾಗಿ ನೋಡಬಾರದು ರೀ ಪ್ರತಿಯೊಬ್ಬರಿಗೂ ಗೌರವ ಕೊಡಬೇಕರೀನಿರ್ಮಲ ಮನದ ಮಾತು ಕೇಳಿ ನಡೆಯೋಣ ಸಮಾಜದಲ್ಲಿ ಶಾಂತಿ ಮತ್ತು ಸುಖವನ್ನು ತರೋಣ ಗೌರವ ಮತ್ತು...

ಅಭಿಪ್ರಾಯ : ಪ್ರಸಕ್ತ ಇರುವುದು ಕೆಟ್ಟ ಭ್ರಷ್ಟ ಸರಕಾರ

ಸಮಾಜವಾದ ಬುದ್ಧ ಬಸವ ಬಾಬಾಸಾಹೇಬ ಅವರ ಚಿಂತನೆ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳ ಹೆಸರಿನಲ್ಲಿ ಮುಖ್ಯಮಂತ್ರಿ ಪದವಿ ಸ್ವೀಕರಿಸಿ ಮುಂದೆ ಇಡೀ ಕರ್ನಾಟಕದ ಜನತೆಗೆ ಮೋಸ ಮಾಡಿದ ಅತ್ಯಂತ ಕೆಟ್ಟ ಭ್ರಷ್ಟ ಸರಕಾರ ಇದೆ ಎನ್ನುವುದು ದುರಂತದ ಸಂಗತಿಯಾಗಿದೆ.ಮಿತಿ ಮೀರಿದ ಭ್ರಷ್ಟಾಚಾರವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಹಗರಣಗಳು ಸೇರಿದಂತೆ ನೂರಾರು ಹಗರಣಗಳು ಬಯಲಿಗೆ ಬರುತ್ತಿವೆ. ದುಡ್ಡು...

ಲೇಖನ : ಕುರುಡರ ಬಾಳಿನ ಬೆಳಕು ಡಾ ಪುಟ್ಟರಾಜ ಗವಾಯಿಗಳು

ಅನಾಥರು ಅಬಲರು ಕುರುಡರು ಏನಿಲ್ಲದೆ ಬಳಲಿದ ಕಂದಮ್ಮಗಳು ಮುಂದೆ ಭಾರತದ ಸರ್ವ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯ ದಿಗ್ಗಜರೆನಿಸಿಕೊಳ್ಳುತ್ತಾರೆ ಎಂದು ಯಾರೂ ಅಂದು ಕೊಂಡಿರಲಿಲ್ಲ. ನನ್ನ ಲೇಖನದ ಕಥಾನಾಯಕ ಪರಮಪೂಜ್ಯ ಡಾ ಪುಟ್ಟರಾಜ ಗವಾಯಿಗಳ ಜೀವನ ಸಂಘರ್ಷ ನಿಜಕ್ಕೂ ನಮಗೆಲ್ಲ ಅಚ್ಚರಿ ಮೂಡಿಸುತ್ತದೆ.ಎರಡು ವರುಷದ ಕಂದಮ್ಮ ಎಲ್ಲವನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿರುವಾಗ ಅವರ ಪಾಲಿಗೆ ದೊರೆತವರೇ...

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು – ರಾಮಚಂದ್ರ ಕಾಕಡೆ

ಮೂಡಲಗಿ- ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುವುದರೊಂದಿಗೆ ಗುಣ ಮಟ್ಟದ ಶಿಕ್ಷಣ ಪಡೆದು ಮಾನವೀಯ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಸ್ಥಾನ ಪಡೆಯಲು ಸಾಧ್ಯ ಅಕ್ಷರದ ಜ್ಞಾನ ಗುರು ನೀಡಿದರೆ, ಸಂಸ್ಕಾರ ಹೆತ್ತವರು ನೀಡುತ್ತಾರೆ. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೆಯ ಪ್ರಜೆಯಾದರೆ ಮಾತ್ರ ಗುರು,...

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ ಉದಯವಾಯಿತು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ ಸ್ಥಾನ ಸಿಗಬೇಕೆಂಬ ಹೋರಾಟದಲ್ಲಿ ಡಾ. ರಾಜಕುಮಾರ್ ಅವರೂ ಭಾಗವಹಿಸಿದ್ದರು. ನಂತರ ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ವಿರುದ್ಧ ನಡೆದ ಉಗ್ರ...

ಡಾ. ರವೀಂದ್ರ ಎ. ಕುಷ್ಟಗಿ : ವೃತ್ತಿ–ವಿರಕ್ತಿ–ವಿಚಾರಗಳ ಸಂಗಮವಾದ ಒಂದು ಜೀವನಯಾನ

      ಡಾ.ರವೀಂದ್ರ ಎ. ಕುಷ್ಟಗಿ ಅವರ  ಜೀವನವು  ವೃತ್ತಿ ಮತ್ತುವಿರಕ್ತಿಯ ನಡುವಿನ ಸಂಘರ್ಷವಲ್ಲ, ಸಂಯೋಜನೆಯ ಕಥೆ. ಯಾಂತ್ರಿಕ ಲೋಕದಲ್ಲಿ ಕಾರ್ಯನಿರ್ವಹಿಸಿದ ಮನಸ್ಸು, ಆತ್ಮಲೋಕದಲ್ಲಿ ಆಳವಾಗಿ ನೆಲೆಗೊಂಡದ್ದುಅವರ ಜೀವನದ ವಿಶೇಷತೆ. ಅವರು  ಬರೆದ ಕೃತಿಗಳು ಮಾತ್ರವಲ್ಲ, ಅವರು ಬದುಕಿದ ರೀತಿಯೇ ಮುಂದಿನ  ತಲೆಮಾರಿಗೆ ಪ್ರೇರಣೆಯಾಗಿ  ಉಳಿಯಲಿದೆ. ಯಂತ್ರಗಳ ನಿಖರತೆಯ ಲೋಕದಿಂದ ಗ್ರಂಥಗಳ ಆಳವಾದ ಆತ್ಮಲೋಕದವರೆಗೆ ನಡೆದ ಅಪರೂಪದ ಬೌದ್ಧಿಕ ಪಯಣದ ಹೆಸರು ಡಾ. ರವೀಂದ್ರ ಎ. ಕುಷ್ಟಗಿ. ಇಂಜಿನಿಯರಿಂಗ್ ಎಂಬ ತಾಂತ್ರಿಕ ಶಿಸ್ತು ಮತ್ತು ಭಾಗವತಾಧಾರಿತ ಆಧ್ಯಾತ್ಮಿಕ ಚಿಂತನೆ ಈ ಎರಡರ ನಡುವಿನ ಸಮನ್ವಯವನ್ನು ತಮ್ಮ ಜೀವನದಲ್ಲಿ ಸಾಧಿಸಿದ...

ಡಾ. ಭೀಮಣ್ಣ ಖಂಡ್ರೆಯವರಿಗೆ ಶೃದ್ಧಾಂಜಲಿ

   ಸಿಂದಗಿ- ಡಾ.ಭೀಮಣ್ಣ ಖಂಡ್ರೆ ಅವರನ್ನು ಕಳೆದುಕೊಂಡ ಈ ನಾಡು ಬಡವಾಗಿದೆ ಅವರ ಬದುಕು ಅತ್ಯಂತ ದಕ್ಷತೆಯಿಂದ ಕೂಡಿತ್ತು ಅವರೊಬ್ಬರು ಅಜಾತಶತ್ರುವಾಗಿದ್ದರು ಎಂದು ನಗರದ ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.   ಅವರು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿ ಶಿಕ್ಷಣ ಸಂಸ್ಥೆ ಶನಿವಾರ ಬೀದರನ ಲೋಕನಾಯಕ ಮಾಜಿ ಸಚಿವ ಅಖಿಲ ಭಾರತ ವೀರಶೈವ ಮಹಾಸಭಾದ...

ಸೂರ ಕಾ ಬಾದಷಾಹ ಪಂಡಿತ ಬಸವರಾಜ ರಾಜಗುರು

ರಾಜಗುರು ಎಂದಾಕ್ಷಣ ಇವರಿಗೂ ಅರಸು ಮನೆತನಕ್ಕೂ ಏನು ಸಂಬಂಧ ಎನ್ನುವ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ .ಹೌದು ಇವರ ಹಿರಿಯರು ಕೆಳದಿ ಅರಸು ಮನೆತನದ ರಾಜಗುರುಗಳಾಗಿದ್ದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ದೊರೆ ಎಂದೆನಿಸಿಕೊಂಡ ಬಸವರಾಜ ರಾಜಗುರು ಅವರು ದೇಶವು ಕಂಡ ಅಪ್ರತಿಮ ಸಂಗೀತಗಾರ ಮತ್ತು ಗಾಯಕರುಸೂರ ಕಾ ಬಾದಶಾಹ ಎಂದು ಖ್ಯಾತರಾದ ಬಸವರಾಜ ಮಹಾಂತಸ್ವಾಮಿ...

‘ನೃತ್ಯ ಸಂಭ್ರಮ’: ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಸಂಭ್ರಮೋತ್ಸವ

ಖ್ಯಾತ ನೃತ್ಯಕಲಾವಿದ ಹಾಗೂ ನೃತ್ಯ ನಿರ್ದೇಶಕರಾದ ಸೋಮಶೇಖರ ಚೂಡಾನಾಥ ಮತ್ತು ಶ್ರೀಮತಿ ಸೌಮ್ಯಾ ಸೋಮಶೇಖರ ಅವರ ನೇತೃತ್ವದ ನಿರಂತರ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್, ಅವರು ರೂಪಿಸಿ ನಡೆಸಿದ ಶಾಸ್ತ್ರೀಯ ನೃತ್ಯೋತ್ಸವ ‘ನೃತ್ಯ ಸಂಭ್ರಮ’ ಭಾರತೀಯ ನೃತ್ಯ ಪರಂಪರೆಯ ವೈಭವವನ್ನು ಸಂಭ್ರಮದಿಂದ ಆಚರಿಸಿದ ಒಂದು ವಿಶಿಷ್ಟ ಸಾಂಸ್ಕೃತಿಕ ಸಂಜೆ ಆಗಿತ್ತು. ವಿಭಿನ್ನ ಶಾಸ್ತ್ರೀಯ ನೃತ್ಯಶೈಲಿಗಳನ್ನು...

About Me

12189 POSTS
1 COMMENTS
- Advertisement -spot_img

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...
- Advertisement -spot_img
error: Content is protected !!
Join WhatsApp Group