Times of ಕರ್ನಾಟಕ

ವಚನಗಳು

೧ ಕೆಂಡದನುಭವ ಮೈಯ ಬೇಯಿಸಿತ್ತು ಉಂಡನುಭವ ಉದರ ಹೊರೆಯಿತ್ತು ಗಂಡನುಭವ ರಣದಿ ಜಯವ ತಂದಿತ್ತು ಮಂಡನುಭವ ಜೀವನ್ಮುಕ್ತಿಯ ಕೆಡಿಸಿತ್ತು ಅತಿಗೊಳಿಸಿದನುಭವ ತೃಪ್ತಿಗೆ ಕಪ್ಪಿಟ್ಟಿತ್ತು ಹಿತಮಿತದನುಭವ ಭವವ ಗೆಲಿಸಿತ್ತಯ್ಯ ಸೊಗಲ ಸೋಮೇಶ್ವರ ೨ ಸತ್ಯವಂತರೇ ನುಡಿಯಲಿ ಎಡುವುತಿಹರಯ್ಯ ಆಚರಿಪರೇ ನಡೆಯಲಿ ದುರಾಚಾರಿಗಳಾಗಿಹರಯ್ಯ ವಿಚಾರಿಗಳೇ ವಾದದಿ ಕುಯುಕ್ತಿಗಿಳಿದಿಹರಯ್ಯ ದಾರಿತೋರ್ವ ಗುರುವೇ ಬಟ್ಟೆಗೆಟ್ಟಿಹರಯ್ಯ ಪಾಲಿಸಬೇಕಾದವರೇ ನೇಮ ಮುರಿಯುತಿಹರಯ್ಯ ಪೋಷಣೆ ಮಾಡಬೇಕಾದಾವರೇ ಆಪೋಷಿಸುತಿಹರಯ್ಯ ದಾನಿಸಬೇಕಿದ್ದ ದಾಸೋಹಿಗಳೇ ದರವೇಸಿಗಳಾಗಿಹರಯ್ಯ ಇಂತ ತನು ಮನ ಧನಗೆಟ್ಟಿಹ ಕಲಿಗಾಲದ ಕೆಸರಲಿ ಸಿಕ್ಕು ಹಲುಬಿ ಭವವ ನೀಗಲು ಒದ್ದಾಡುತಿಹ ಬಡಜೀವವನೆಂತು ಪೊರೆವೆಯಯ್ಯ ಸೊಗಲ ಸೋಮೇಶ್ವರ ೩ ಕಣ್ಸೆಳೆವ ಸೌಂದರ್ಯ ಸೃಜಿಸಿದೆ ಅನುಭವಿಸುವಲ್ಲಿ ಜಿಪುಣನಾಗಿಬಿಟ್ಟೆ ಸುಗಂಧ ಪರಿಮಳವ...

ವೃಕ್ಷ ಬೀಜಾರೋಪನದಲ್ಲಿ ಪಾಲ್ಗೊಳ್ಳಿ

ವನಮಹೋತ್ಸವದ ಅಂಗವಾಗಿ ಇದೆ ಮಂಗಳವಾರ ೧೪.೦೭.೨೦೨೦ ಬೆಳಿಗ್ಗೆ ೭ ಘಂಟೆಗೆ ಸವದತ್ತಿ ತಾಲೂಕು ಗೊರವನಕೊಳ್ಳದ ನವಿಲು ತೀರ್ಥದ ಕೆಳಗಿನ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಸೀಡಾ ಥಾನ್ ಬೀಜ ಹಚ್ಚುವ/ ಹಾಕುವ ಕಾರ್ಯಕ್ರಮವಿದ್ದು. ಈಗಾಗಲೇ ಸವದತ್ತಿಯ "ವೃಕ್ಷ ಭಾರತ ಸೈನಿಕರು" ಸುಮಾರು ೧೨ ಲಕ್ಷ ಬೀಜಗಳನ್ನು ಸಂಗ್ರಹಣೆ ಮಾಡಿದ್ದು ಉಚಿತವಾಗಿ ಹಂಚಲಿದ್ದಾರೆ.ಈ ನಿಸರ್ಗ ಸೇವೆಗಾಗಿ ಆಸಕ್ತರು...

ಅಮಿತಾಭ ಬಚ್ಚನ್ ಗೆ ಕೊರೋನಾ ; ಆಸ್ಪತ್ರೆಗೆ ದಾಖಲು

ಖ್ಯಾತ ಬಾಲಿವುಡ್ ನಟ ಅಮಿತಾಭ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.ಸಂಜೆಗೆ ತಮಗೆ ಕೊರೋನಾ ಇರುವುದಾಗಿ ಬಿಗ್ ಬಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.ಎಪ್ರಿಲ್ ನಲ್ಲಿ ಅವರೇ ಒಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದೃಷ್ಟಿ ಮಂಜಾಗಿರುವ ಬಗ್ಗೆ ಬರೆದುಕೊಂಡಿದ್ದರು. ಆದರೆ ನಾನೇನು ಕುರುಡನಾಗಿಲ್ಲ...

ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ನಮಸ್ಕಾರ, ಕೊರೋನಾ ಸೋಂಕಿತನಾಗಿ ಮೂರನೇ ದಿವಸದ ಚಿಕಿತ್ಸೆ ಪಡೀತಾ ಇರೋ ನಾನು ಇಲ್ಲಿ ನನಗನಿಸಿದ ಕೆಲ ಅನಿಸಿಕೆಗಳನ್ನು ಹಂಚಿಕೊಳ್ತಾ ಇದ್ದೀನಿ.1) ಕೊರೊನಾ ಇದು ಒಬ್ಬ ಸಾಮಾನ್ಯ ಆರೋಗ್ಯವಂತನ ಒಂದು ಸಣ್ಣ ರೋಮವನ್ನೂ ಅಲುಗಾಡಿಸಲು ಆಗದ ನಿಷ್ಕೃಷ್ಠ , ದುರ್ಬಲ ವೈರಾಣು.2) ಈಗಾಗಲೇ ಎಷ್ಟೋ ಜನರ ದೇಹವನ್ನು ಹೊಕ್ಕು ಅವರ ಅರಿವಿಗೆ ಬಾರದೆ ಹೊರಟು ಹೋಗಿರಬಹುದಾದ...

ಮಾಸ್ಕ್ ಧರಿಸುವ ಮೊದಲು ಈ ಆಂಶಗಳನ್ನು ತಿಳಿಯಿರಿ

ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಡಲು ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಇವು ವೈರಾಣು ಒಬ್ಬರಿಗೆ ಹರಡದಂತೆ ಸಹಕಾರಿಯಾಗುತ್ತವೆ. ಆದರೆ ಎಲ್ಲ ಮಾಸ್ಕ್ ಗಳು ಹಾಗಲ್ಲ.ಪ್ರತಿದಿನ ನೀವು ಮನೆಯಿಂದ ಹೊರಬರಬೇಕಾದರೆ ಮಾಸ್ಕ್ ಧರಿಸಲೇಬೇಕು. ಪೊಲೀಸರು ಕೂಡ ಮಾಸ್ಕನ್ನು ಕಡ್ಡಾಯ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಮಾಸ್ಕ್...

ಶ್ರೀ ಗುರುಭ್ಯೋ ನಮಃ…..ಕವನಗಳು

ಗುರುವಿಗೆ... ಜಗವ ಕಾಣುವ ಮೊದಲೇ ಅದರರಿವು ಇತ್ತವ ನೀನು... ಹಸಿದಡೆ ಉಣ್ಣುವುದು, ದಣಿದಡೆ ಮಲಗುವುದು, ಸೂರ್ಯ ಚಂದ್ರರ ನೋಡಿ ನಕ್ಕು ನಲಿದಾಡುವುದು ತೊಟ್ಟಿಲಲಿ ಮಲಗಿದವಗೆ ಎಲ್ಲಾ ಪ್ರೀತಿಯನಿತ್ತವ ನೀನು.... ಗುರುವೇ ನಿನಗೆ ಶರಣು.. ಅಮ್ಮನೇ ಮೊದಲಾದ ಬಂಧುಗಳ ತೋರಿದೆ ನೀನು ಗಿಡ ಮರ ಬಳ್ಳಿಗಳ ಕಾಣಲು ಕಲಿಸಿದೆ ನೀನು ಓದು ಬರಹದಲಿ ಬ್ರಹ್ಮಾಂಡವ ತೋರಿದೆ ನೀನು... ನೂರು ದಾರಿಗಳಲ್ಲಿ ಬದುಕನು ಕಲಿಸಿದೆ ನೀನು... ಗುರುವೇ ನಿನಗೆ ಶರಣು.... ನಾನಾರೆಂಬುವ ಮಾತು ಮರೆತು ಸಾಯುವ ಜಗಕೆ ಪರಿಪರಿಯಾಗಿ ಅರುಹುವ ಕರುಣಾಳು ನೀನೇ... ಎಲ್ಲವೂ ನಾನೇ.. ಜಗವೆಲ್ಲವೂ ನನ್ನಿಂದೆ ಎಂಬೀ ಬರೀ ಗುಡುಗಿನ ಸದ್ದಡಗಿಸಿದ...

ಟಂಕಾಗಳು

೧ ಭುಗಿಲೆದ್ದಿದೆ ಜಗವು ಭಯದಲಿ ಮಹಾಮಾರಿಯೇ ನೀ ತಂದ ಫಜೀತಿಗೆ ಸಾವೂ ಹೆದರುತಿದೆ ೨ ಒಕ್ಕಲೆದ್ದಿದೆ ನೆಲೆಯು ಸಿಗದಲೆ ಮಾರಿ ಕೊರೋನಾ ಹೆಚ್ಚುವ ಭೀತಿಯಲಿ ಹುಚ್ಚು ಹಿಡಿಯುತಿದೆ ೩ ಭಯಗೊಂಡಿದೆ ಜಗದ ಜನವಿಂದು ಮಾರಿಗೌಷಧಿ ಸಿಗದ ಕಾರಣಕೆ ಸಾವಿಗೆ ಹೆದರಿದೆ ೪ ದಿಕ್ಕುಗಾಣದೆ ಜನ ಕಂಗಾಲಾಗಿದೆ ಸಾವು ನೋವಿನ ಲೆಕ್ಕ ಸಿಗದುದರ ಭಯಕೆ ಬೆದರಿದೆ ೫ ರೋಗ ಮುಕ್ತಿಗೆ ಭವವು ಬಯಸಿದೆ ಕೈ ಮುಗಿಯತ ಮೊರೆಯನಿಡುತಿದೆ ಧರೆಯ ದೇವರಲಿ. ಡಾ.ಗಜಾನಂದ ಸೊಗಲನ್ನವರ ಚಿಕ್ಕಬಾಗೇವಾಡಿ

ಮೂಗಿನಲ್ಲಿ ತುಪ್ಪ ಹಾಕಿಕೊಳ್ಳಿ ಅನೇಕ ಪ್ರಯೋಜನಗಳುಂಟು !!

ಮಾನವ ಶರೀರದ ದೋಷಗಳಾದ ವಾತ, ಪಿತ್ತ ದೋಷಗಳನ್ನು ಸಮತೋಲಿತವಾಗಿ ಇಡಲು ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆಯೆಂದು ಆಯುರ್ವೇದ ಹೇಳುತ್ತದೆ. ತುಪ್ಪವನ್ನು ಮೂಗಿನಲ್ಲಿ ಹಾಕುವ ನಸ್ಯ ಥೆರಪಿ ಈ ದೋಷಗಳನ್ನು ಸಮತೋಲಿತವಾಗಿ ಕಾಪಾಡುತ್ತವೆ ಎನ್ನಲಾಗಿದೆ.ವಾತ ಹಾಗೂ ಪಿತ್ತ ದೋಷದ ಸಂಕೇತಗಳಾದ ಮೈಗ್ರೇನ್, ಮಾನಸಿಕ ಗೊಂದಲ, ಉದ್ವೇಗ, ಖಿನ್ನತೆ, ಫೋಬಿಯಾ, ನಿದ್ರಾಹೀನತೆ ಇವುಗಳಲ್ಲಿ ತುಪ್ಪವನ್ನು ಮೂಗಿನಲ್ಲಿ ಹಾಕುವ...

ಗುರು ಪೂರ್ಣಿಮಾ ಕವನಗಳು

ಗುರುವಿಗೆ... ಗುರುವೇ...ವರಗುರುವೇ... ಮಹಾಗುರುವೇ...ಪರಮಗುರುವೇ...ಸದ್ಗುರುವೇ... ನಿನಗೆ ಶರಣು,ಸಾವಿರದ ಶರಣು.... ಜಗವ ಕಾಣುವ ಮೊದಲೇ ಅದರರಿವು ಇತ್ತವ ನೀನು... ಹಸಿದಡೆ ಉಣ್ಣುವುದು, ದಣಿದಡೆ ಮಲಗುವುದು, ಸೂರ್ಯ ಚಂದ್ರರ ನೋಡಿ ನಕ್ಕು ನಲಿದಾಡುವುದು ತೊಟ್ಟಿಲಲಿ ಮಲಗಿದವಗೆ ಎಲ್ಲಾ ಪ್ರೀತಿಯನಿತ್ತವ ನೀನು.... ಗುರುವೇ ನಿನಗೆ ಶರಣು.. ಅಮ್ಮನೇ ಮೊದಲಾದ ಬಂಧುಗಳ ತೋರಿದೆ ನೀನು ಗಿಡ ಮರ ಬಳ್ಳಿಗಳ ಕಾಣಲು ಕಲಿಸಿದೆ ನೀನು ಓದು ಬರಹದಲಿ ಬ್ರಹ್ಮಾಂಡವ ತೋರಿದೆ ನೀನು... ನೂರು ದಾರಿಗಳಲ್ಲಿ ಬದುಕನು ಕಲಿಸಿದೆ ನೀನು... ಗುರುವೇ ನಿನಗೆ ಶರಣು.... ನಾನಾರೆಂಬುವ ಮಾತು ಮರೆತು ಸಾಯುವ ಜಗಕೆ ಪರಿಪರಿಯಾಗಿ ಅರುಹುವ ಕರುಣಾಳು ನೀನೇ... ಎಲ್ಲವೂ ನಾನೇ.. ಜಗವೆಲ್ಲವೂ ನನ್ನಿಂದೆ ಎಂಬೀ...

ಕವನಗಳು

💕💭💭 ಮತ್ತದೇ ಕನಸು 💭💭💕 ಹೊಡೆದರೂ ಸಿಡಿದೇಳುತಿದೆ ಆ ಕನಸು ನಾನಾಗಬಾರದೇ "ಭಗವಂತ" ॥ ತಮದೊಳು ಸಿಲುಕಿಹ ಜೀವಿಗಳು "ಬಾ" "ಬಾ" ಎಂದು ಕರೆಯುತಿರುವಾಗ, ತನು~ಮನವೆಲ್ಲಾ ಕಣ್ಣಾಗಿಸಿ ಕಾಯುವೆ, ಕತ್ತಿ ~ಬಾಂಬು~ಚೂರಿ, ಮಾರಕಾಸ್ತ್ರ ನಾಶಗೊಳಿಸಿ ಪ್ರೀತಿ~ಪ್ರೇಮ~ಅಹಿಂಸೆ ಸಿಡಿಸಿ ಆತ್ಮೀಯ ಕಿಡಿಹಚ್ಚಿದ ಕನಸು ಕ್ಷಣವೂ ಏರಲು ಹವಣಿಸುತಿಹುದು । ಅಹಂಕಾರದಲಿ ಬೀಗುತಾ.. ಸಜ್ಜನರಿಗೆ " ಕಣ್ಣು ಕುರುಡು" ದೇವನಿಗೆ " ಬುದ್ಧಿ ಬರಡು" ಎಂದು ಪೇಳುವ ಸಜ್ಜನ ಮೊಗ ಹೊತ್ತ ನಿರಹಂಕಾರಿಗೆ ಪಶ್ಚಾತ್ತಾಪದ ಕೊರಗು ನೀಡಿ...

About Me

12262 POSTS
1 COMMENTS
- Advertisement -spot_img

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...
- Advertisement -spot_img
error: Content is protected !!
Join WhatsApp Group