Times of ಕರ್ನಾಟಕ
ಸುದ್ದಿಗಳು
ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ
ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸರಕಾರಿ ಉರ್ದು ಹಿರಿಯ ಪ್ರಾರ್ಥಮಿಕ ಶಾಲೆ ಹಿರೇರೂಗಿ ಶಾಲೆಯ ಶಿಕ್ಷಕ ಸಂತೋಷ ಎಸ್ ಬಂಡೆ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಪೂರ್ವ...
ಸುದ್ದಿಗಳು
ಯಾದವಾಡದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತಿ ಆಚರಣೆ
ಮೂಡಲಗಿ:- ಯಾದವಾಡ ಗ್ರಾಮದಲ್ಲಿ ಶಿರಸಂಗಿ ತ್ಯಾಗವೀರ ಲಿಂಗರಾಜ ದೇಸಾಯಿ ಅವರ ಮೂರ್ತಿಗೆ ಪೂಜೆಮಾಡಿ 165ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀ ಅಭಿನವ ಚೌಕೇಶ್ವರ ದೇವರು ತ್ಯಾಗವೀರ ಲಿಂಗರಾಜರ ಮೂರ್ತಿಗೆ ಪುಷ್ಪಾರ್ಚಣೆ ಮಾಡಿ ಲಿಂಗರಾಜರ ತ್ಯಾಗ ಮತ್ತು ಔದಾರದ ಕುರಿತು ಎಷ್ಟು ಹೇಳಿದರು ಕಡಿಮೆ. ಲಿಂಗರಾಜರು ತಮ್ಮ ಇಚ್ಚಾಪತ್ರದಲ್ಲಿ ತಮ್ಮ ಎಲ್ಲ ಆಸ್ತಿ ಮತ್ತು...
ಕವನ
ಕವನ : ಪ್ರೀತಿಸಿದ ತಪ್ಪಿಗೆ
ಪ್ರೀತಿಸಿದ ತಪ್ಪಿಗೆ...
ಇಂದು ಈ ಮುಸ್ಸಂಜೆಯಲಿ....
ಯಾರೋ ಎಲ್ಲೋ
ಪ್ರೀತಿಸುವ ಹೃದಯಕೆ
ನೋವುಣಿಸಿರಬೇಕು...
ಅಕಾಲದಲ್ಲಿ ಆಕಾಶ
ಆರ್ಭಟಿಸಿ ಭೋರ್ಗರೆದು
ಹೀಗೆ ಸುರಿಯಬೇಕಾದರೆ...
ಸದ್ದಿಲ್ಲದೇ ಒಡೆದ
ಎದೆ ತುಣುಕುಗಳು
ಮುಗಿಲಲಿ ಶೋಕಗೀತೆ
ನುಡಿಸುತಿವೆ....ಯಾರೋ ಎಲ್ಲೋ
ಹೂವಂತ ಮನಸನು
ಮಾತಿನ ಮುಳ್ಳುಗಳಿಂದ
ಚುಚ್ಚಿ ನೋಯಿಸಿರಬೇಕು...
ಹೆಪ್ಪುಗಟ್ಟಿದ ದುಃಖ
ಕಪ್ಪು ಮೋಡದ ಒಡಲ
ಬಗೆದು ಭೋರೆಂದು
ಭುವಿಯ ಅಪ್ಪುತಿದೆ...ಯಾರೋ ಎಲ್ಲೋ
ಸ್ನೇಹ ತುಂಬಿದ ಕಂಗಳಿಗೆ
ಅಪಮಾನ ಆಪಾದನೆ
ಪಟ್ಟಿ ಕಟ್ಟಿರಬೇಕು....
ಗರಬಡಿದ ಮುಗಿಲು ದುಃಖಿಸಿ
ಬಿಕ್ಕಿಅಳುತ ಮುತ್ತುಮಳೆ
ಸುತ್ತ ಸುರಿಸುತಿದೆ ನೋಡು..ತಪ್ಪು ಮಾಡದ ಜೀವ
ಬಿಟ್ಟ ಬಿಸಿಯುಸಿರ ಕಾವಿಗೆ
ಸುಟ್ಟು ಸುಡುವ ಸೂರ್ಯನೇ
ನಲುಗಿ ಮರೆಯಾಗಿ ಹೋದ....
ಹೂಹೃದಯ...
ಕವನ
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ, ನೋವಿನಲ್ಲೂ
ಉಸಿರಾಡುವ ನಂಟು.
ತಾಯಿ–ಮಗುವಿನ
ಹಸಿರು ಪ್ರೀತಿಯಂತೆ
ಸ್ನೇಹಿತರ ನಿಷ್ಕಪಟ ನಗು,
ಗುರುವಿನ ಮಾರ್ಗದರ್ಶನ,
ಅಸ್ಪಷ್ಟ ಮೌನ
ಅನುಬಂಧದ ಬೇರೆ ಬೇರೆ
ರೂಪಗಳು ಒಂದೇ
ಕಾಲ ದೂರಿರಿಸಿದರೂ,
ಸ್ಮೃತಿ ಪಟದಲ್ಲಿ ಹತ್ತಿರ.
ದೇಹಗಳು ದೂರವಾದರೂ,
ಮನಗಳು ಒಡಲಿನಂತೆ
ಬಿರುಗಾಳಿಯಲ್ಲಿ ಮರವನ್ನೆತ್ತಿದ
ಬೇರುಗಳಂತೆ, ಗಟ್ಟಿ
ಎತ್ತುವ ಶಕ್ತಿಯೇ ಅನುಬಂಧ.
ಜಗತ್ತು ಕೈಬಿಟ್ಟ...
ಕವನ
ಕವನ : ಭಯದ ಬಾಹುಗಳು
ಭಯದ ಬಾಹುಗಳು
ಕಂದು ಕಂಗಳ ಮುದ್ದು ಮಗಳು
ಬಂದೆನ್ನ ತಬ್ಬಿ, ಮತ್ತೆ ಮಲಗುವ
ಗುಂಗಿನಲ್ಲಿದ್ದಾಳೆ
ಅರೆಮುಚ್ಚಿದ ಕಣ್ಣ ಬಣ್ಣ ನನ್ನನ್ನೇ
ಹೋಲುತ್ತದೆ
ತುಸು ಹೆಚ್ಚಿಗೆ ಮಿಂಚಿದೆಯಷ್ಟೇ.
ಮೆದು ಮೈಯ್ಯ ಸ್ಪರ್ಶ, ಮೆಲ್ಲುಸಿರ
ಬಿಸಿ, ಗುಟ್ಟಿನ್ನೂ ರಟ್ಟಾಗದ ಹೃದಯ
ಬಡಿತ
ಎದೆಯ ಕಸಿವಿಸಿ ಮರೆಸಿ
ರೆಪ್ಪೆಗಳ ದಪ್ಪಗಾಗಿಸಿ
ನಿದ್ರಾಲೋಕದ ಅತಿಥಿಯಾಗಿಸಿ
ಸಮಾಧಾನಿಸುವುದರಲ್ಲಿ
ಫಕ್ಕನೆ ಎಚ್ಚರ !ನೆನ್ನೆ ನೋಡಿದ ಸುದ್ದಿ
ತರಳೆಯ ಕಗ್ಗೊಲೆ
ಮೊನ್ನೆ ಕೇಳಿದ್ದು
ಬಾಲೆಯ ಬಲಾತ್ಕಾರ
ಇಲ್ಲೇನೋ ಜಿಹಾದ ಅಲ್ಲೇನೋ ಜಾತಿ ವಿವಾದ
ಹೆಣ್ತನಕ್ಕೆ ಹೇಸಿಗೆ ಪಡುವ ಸಂವಾದ
ನಾಲಿಗೆಯ ನರ ಕಸಿಯುತ್ತಿರುವ...
ಲೇಖನ
ಅಜಾತಶತ್ರು ಸ್ನೇಹಪರ ರಾಜಕಾರಣಿ ವಿ. ಸೋಮಣ್ಣ
ಅತ್ಯಂತ ಬಡತನದಲ್ಲಿ ಕಷ್ಟ ಪಟ್ಟು ಮುಂದೆ ಬಂದು ಬೆಂಗಳೂರು ಎನ್ನುವ ಮಾಯಾನಗರಿಯಲ್ಲಿ ಕಾರ್ಮಿಕನಾಗಿ ಮುಂದೆ ಮಹಾನಗರ ಪಾಲಿಕೆ ಸದಸ್ಯ ಶಾಸಕ ರಾಜ್ಯ ಸರ್ಕಾರ ಮಂತ್ರಿ ಸಂಸದ ಕೇಂದ್ರೀಯ ಮಂತ್ರಿ ಹೀಗೆ ವಿ ಸೋಮಣ್ಣ ಅವರ ಬದುಕಿನ ಯಶೋಗಾಥೆಯನ್ನು ಒಮ್ಮೆ ಅವಲೋಕಿಸೋಣ.ವೀರಣ್ಣ ಸೋಮಣ್ಣ ಒಬ್ಬ ಕರ್ನಾಟಕದ ಪ್ರಬುದ್ಧ ರಾಜಕಾರಣಿಯಾಗಿದ್ದು, ಪ್ರಸ್ತುತ ಭಾರತ ಸರ್ಕಾರದ ರೈಲ್ವೆ ಸಚಿವಾಲಯ...
ಸುದ್ದಿಗಳು
ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ
ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ ಅಧ್ಯಯನ ವಿಷಯದಲ್ಲಿ ಸಲ್ಲಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ದೊರೆತ ಪ್ರಯುಕ್ತ ಬಾಗಲಕೋಟೆಯ
ಡಾ.ಪ್ರಹ್ಲಾದ್ ಬಸಪ್ಪ ಬೋವಿ. ಬದಾಮಿಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶಿವಾನಂದ ಹಿರೇಮಠ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಂಗೀತಾ...
ಕವನ
ಕವನ : ಶ್ರದ್ಧೆ
ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ,
ಸಾಧನೆಯ ಕೀಲಿ ಕೈ ಆಗಿದೆಯಲ್ಲ
ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ
ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ
ಹೆಜ್ಜೆಗೆ ದಿಕ್ಕು ತೋರುವ ಬೆಳಕ
ಸಾಧನೆಯ ಹಾದಿಯ ದೀಪಿಕೆಶ್ರದ್ಧೆಯೇ ಧೈರ್ಯದ ನೆರಳು.
ಸೋಲಿನ ಕ್ಷಣದಲ್ಲಿ ಕುಗ್ಗದ ಹೊನಲು
ಅದು ಹೊಸ ಪ್ರೇರಣೆ
ಮಣ್ಣಿನಲ್ಲಿ ಯಶಸ್ಸಿನ ಬೀಜ
ಫಲದ ನಿರೀಕ್ಷೆ ಇಲ್ಲದ ನಂಬಿಕೆ
ಶ್ರಮದ ಜೊತೆಗಿನ ಶಕ್ತಿ
ಕಾಲದಲ್ಲಿ ಸುವರ್ಣ ಫಲಶ್ರದ್ಧೆಯಿಲ್ಲದ ಜ್ಞಾನ ನಿರ್ಜೀವ,
ಸಾಧನೆಗೂ ಕರ್ಮ...
ಸುದ್ದಿಗಳು
ಯುವಕರ ಜ್ಞಾನ ಸದ್ಬಳಕೆಯಾಗಲಿ: ಎಸ್.ಬಿ. ಕಾಳೆ
ಜಮಖಂಡಿ: ತಂತ್ರಜ್ಞಾನದ ದುರ್ಬಳಕೆಯಿಂದ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಆದ್ದರಿಂದ ಯುವಜನತೆ ಮೊಬೈಲ್‌ನಿಂದ ದೂರವಿದ್ದು ರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ. ಕಾಳೆ ಹೇಳಿದರು.ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಜ್ಯೋತಿ ಪದವಿಪೂರ್ವ ಕಾಲೇಜು...
ಸುದ್ದಿಗಳು
ಕವಿ ದೀಪಕ ಬಿಳ್ಳೂರ ಅವರಿಗೆ “ಕಾವ್ಯಶ್ರೀಧರ” ಪ್ರಶಸ್ತಿ.
ಶ್ರೀ. ಶ್ರೀಧರಾಚಾರ್ಯ ಕಟ್ಟಿಯವರ ಸ್ಮರಣಾರ್ಥ ನವ ಕವಿಗಳ ಕಾವ್ಯ ಪ್ರೋತ್ಸಾಹನಾರ್ಥ ಕೊಡುವ 2025ರ ಸಾಲಿನ "ಕಾವ್ಯಶ್ರೀಧರ" ಪ್ರಶಸ್ತಿಗೆ ಹೊಸಪೇಟೆಯ ದೀಪಕ ಬಿಳ್ಳೂರ ಅವರು ಭಾಜನರಾಗಿದ್ದು, ದಿನಾಂಕ 11-01 -2026 ರವಿವಾರ ಕಟ್ಟಿ ದಂಪತಿಗಳು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಕಥೆಯ ಮೂಲ ವಿಶೇಷಗಳೊಂದಿಗೆ ಭಾವವನ್ನು ಉತ್ತಮವಾಗಿ ಅಭಿವ್ಯಕ್ತಿಸಿದ, ಕವಿ ದೀಪಕ ಬಿಳ್ಳೂರ ರವರ "ದೀಪಗಳು" ಕವನ...
About Me
12189 POSTS
1 COMMENTS
Latest News
ಕವನ : ಹೃದಯ ವೀಣೆ
ಹೃದಯ ವೀಣೆಶುರುವಾಗಿದೆ
ಆಸೆಗಳ ಆಂದೋಲನ
ಅತಿಯಾಗಿ
ಹೇಳಲಾಗದೆ
ಉಳಿದಿವೆ ಅದೆಷ್ಟೋ
ಮಾತುಗಳು
ಮುದುರಿ ಹೋಗಿವೆ
ಎದೆಯ ಗೂಡೊಳಗೆ
ಬಂದೊಮ್ಮೆ ಮೀಟು
ಹೃದಯ ವೀಣೆ
ಕಾಯುತಿವೆ ನಿನ್ನ
ಬರುವಿಗಾಗಿ ಭಾವಲತೆಗಳು
ನೀ ಬಂದು ಸಂತೈಸು
ಮಿಡಿಯುವ ಮನವ
ಬಂದುಬಿಡೊಮ್ಮೆ
ಅಂತರಂಗದ ಹೂ ಬನಕೆ
ಮಧುವರಿಸಿ ಬರುವ
ದುಂಬಿಯಂತೆ
ಮಿಲನವಾಗಲಿ
ಮಧುರ ಪ್ರೇಮಕಾವ್ಯ
ಕಾಯುತಿದೆ ಮನವು
ಬಾಹುಬಂಧನದ ಬೆಸುಗೆ
ತವಕದ...



