ತಿಮ್ಮಾಪುರ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಲಿಂಗೈಕ್ಯ ವಿಜಯ ಮಹಾಂತೇಶ್ವರ ಶಿವಯೋಗಿಗಳವರ ಜಾತ್ರೆಯ ಅಂಗವಾಗಿ ದಿ. ೧೫ ರಂದು ಶುಕ್ರವಾರ ಗೌರಿ ಹುಣ್ಣಿಮೆಯಂದು ಅಡ್ಡ ಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಡಗರದಿಂದ ಜರುಗಿತು
ಅಂದು ಮುಂಜಾನೆ 12ಕ್ಕೆ ಶ್ರೀಮಠ ದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀಮಠ...
ಮೂಡಲಗಿ: ಮೂಡಲಗಿ ನಗರದ ಅತ್ತಾರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ತಾಲೂಕಾ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಂಘದ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹಾಗೂ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ತಾಲೂಕು ಯೋಜನಾಧಿಕಾರಿಗಳಾದ ರಾಜು ನಾಯಕ ರವರು ಸರ್ವರಿಗೂ ಸ್ವಾಗತ ಕೋರಿ, ಕಾರ್ಯಕ್ರಮದ ಪ್ರಾಸ್ತಾವಿಕತೆ ಹಾಗೂ ಮೂಡಲಗಿ ತಾಲೂಕಿನ...
ಮೂಡಲಗಿ - ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು ಎಂದು ಘಟಪ್ರಭಾ ಪೋಲಿಸ್ ಠಾಣೆಯ ಪಿಎಸ್ಆಯ್...
ರಾಜಕಾರಣವೆಂಬುದು ಹೊಲಸಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದರಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವವರ ಸಂಖ್ಯೆಯೇ ಜಾಸ್ತಿ ಇರುತ್ತದೆ. ನೈತಿಕತೆ ಎಂಬುದು ರಾಜಕಾರಣದಿಂದ ಮಾರು ದೂರ. ಆತ್ಮಾವಲೋಕನ ಎಂಬುದೂ ಕೂಡ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ. ರಾಜಕಾರಣ ಮಾಡುವವರು ಆತ್ಮಾವಲೋಕನದಂಥ ಅಪಾಯಕಾರಿ ಕೆಲಸಕ್ಕೆ ಕೈ ಹಾಕಬಾರದು. ಬೇರೆಯವರಿಗೆ ಮಾತ್ರ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಉಪದೇಶ ನೀಡಬಹುದು ! ಇತ್ತೀಚೆಗೆ...
ಹೃದಯ ಮಾತು ಕೇಳಿ
ಮಿಡಿವ ಹೃದಯ
ನಿಲ್ಲುವುದು ಗೊತ್ತಿಲ್ಲ
ದುಡಿವ ಜೀವ
ಮಣ್ಣಾಗುವುದು ತಿಳಿದಿಲ್ಲ.
ಬಣ್ಣನೆಗೆ ನಿಲುಕದ ಜೀವ
ಬಣ್ಣದ ಮಾತಿಗೆ ಮರುಳಾಯಿತಲ್ಲ
ಒಮ್ಮೆ ಕಣ್ಣ ಬೆಳಕು
ಮಗದೊಮ್ಮೆ ಮಸುಕು.
ಅದರ ಸಿಹಿ ಮಾತು
ಉದರ ಕಹಿ ಸಂಪತ್ತು
ತಿರುಗಣಿಯ ಬದುಕು
ಉಬ್ಬು ತಬ್ಬುಗಳಲಿ ಜೀಕು.
ಆವೇಗದ ಸನ್ನೆ
ಮರೆತ ನನ್ನನ್ನೇ
ಕಲಿತು ಬಿಡಬೇಕು
ಅನುಭವಿಸುತ ನೂಕು.
ಕೆರಳಿ ಕೆಂಡವೇಕೆ
ಬೆರಳೆಣಿಕೆಯ ಜೀವನಕೆ
ನೆರಳು ಬೆಳಕಿನ ಆಟಕೆ
ಕೊರಳು ಹಿಸುಕುವುದೇಕೆ.
ತೆರಳುವುದು ನಿಶ್ಚಿತ
ನಂಬಿಕೆಯೇ ಭಗವಂತ
ನೆಮ್ಮದಿಯ ನಿಟ್ಟುಸಿರಾಗಲಿ
ಸಾಧನೆಯ ಪಥವಾಗಲಿ.
ಸದ್ದಿಲ್ಲದೇ ಬಾನೆತ್ತರಕ್ಕೆ ಏರು
ಸುದ್ದಿ ಬಿತ್ತರವಾಗಲಿ
ಬಿದ್ದೆ ಎಂದು ಕುಗ್ಗದೇ
ಶೋಧನೆಯ...
ಬೆಳಗಾವಿ - ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಷಾನ ವಿಭಾಗದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಆಚರಿಸಲಾಯಿತು.
ಕಾರ‍್ಯಕ್ರಮದ ಅಂಗವಾಗಿ ದಿನಾಂಕ:೧೪/೧೧/೨೦೨೪ ರಂದು ಉಪ ನಿರ‍್ದೇಶಕರು,ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ. ರಾಮಯ್ಯ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪುಸ್ತಕ ಪ್ರದರ್ಶನ ಉದ್ಘಾಟಿಸುವ ಮೂಲಕ “Read...
ಬಟ್ಟೆಯಲಿ ಬೆಟ್ಟವನು ಕಟ್ಟಿಡಲು ಸಾಧ್ಯವೇ ?
ಕಡಲ ತುಂಬಿಡಬಹುದೆ ಗಡಿಗೆಯಲ್ಲಿ ?
ಆಕಾಶವನು ಹಿಡಿದು ಬಂಧಿಸಿಡಲಾದೀತೆ ?
ದೇವನಿಗೆ ದೇಗುಲವೆ ? - ಎಮ್ಮೆತಮ್ಮ
ಶಬ್ಧಾರ್ಥ
ದೇಗುಲ = ದೇವಾಲಯ
ತಾತ್ಪರ್ಯ
ಕಲ್ಲುಗುಂಡುಗಳಿಂದ ಕೂಡಿದ ಬೆಟ್ಟಗುಡ್ಡಗಳನ್ನು ಒಂದು
ಬಟ್ಟೆಯಲ್ಲಿ ಕಟ್ಟಿಡಲಿಕ್ಕೆ ಸಾಧ್ಯವಾಗುವುದಿಲ್ಲ. ಅಷ್ಟು ದೊಡ್ಡದಾದ ಬಟ್ಟೆ ಸಿಕ್ಕುವುದಿಲ್ಲ. ಒಂದು ವೇಳೆ ಸಿಕ್ಕರು
ಬೆಟ್ಟವನ್ನು ಕಿತ್ತಿಟ್ಟು ಸುತ್ತಿಡಲಾಗುವುದಿಲ್ಲ. ಹಾಗೆ ಸದಾ
ಕಾಲ ತುಂಬಿ ತುಳುಕಾಡುವ ಸಮುದ್ರದ ಸಮಗ್ರ ನೀರನ್ನು
ಒಂದು ಮಣ್ಣಿನ...
ಸಿಂದಗಿ; ಭಾರತದಲ್ಲಿ ಪ್ರತಿವರ್ಷ ನವೆಂಬರ್ ೧೪ ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಮಕ್ಕಳ ದಿನಾಚರಣೆ ಮಾಡುವ ಮೂಲಕ ಅವರ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ ೧೪ ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದು...
ಬೆಳಗಾವಿ: ಬುಡಕಟ್ಟು ಜನಾಂಗದ ಆದರ್ಶ ಪುರುಷ ಭಗವಾನ ಶ್ರೀ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಅವರ ಸ್ಮರಣೆಗಾಗಿ ಜಿಲ್ಲೆಯ 51 ಗ್ರಾಮಗಳನ್ನು ಪ್ರಧಾನ ಮಂತ್ರಿ ಜನ ಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದರು.
ಪತ್ರಿಕಾ ಹೇಳಿಕೆ ನೀಡಿದ ಅವರು ನವೆಂಬರ...
ಮೂಡಲಗಿ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಅತ್ಯಂತ ದೊಡ್ಡ ಗ್ರಾಮವಾಗಿದ್ದು, ಕಲ್ಲೋಳಿ ಇಂದು ಪಟ್ಟಣವಾಗಿ ಬೆಳೆದು ನಿಂತಿದೆ. ಈ ಪಟ್ಟಣಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಜವಾಬ್ದಾರಿ ಎಲ್ಲ ಚುನಾಯಿತ ಪ್ರತಿನಿಧಿಗಳ ಮೇಲಿದೆ ಅದರ ಭಾಗವಾಗಿ ಪಟ್ಟಣದ ಸಾಂಸ್ಕೃತಿಕ, ಸಾಮಾಜಿಕ, ವೈವಾಹಿಕ, ಇನ್ನಿತರ ಚಟುವಟಿಕೆಗೆ ಉಪಯೋಗಿಸಿಕೊಳ್ಳಲು ಒಂದು ಸುಸಜ್ಜಿತವಾದ ಸಮುದಾಯ ಭವನದ ಅವಶ್ಯಕತೆಯನ್ನು...
ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...