Times of ಕರ್ನಾಟಕ
ಸುದ್ದಿಗಳು
ಬಿಡಿಸಿಸಿ ಬ್ಯಾಂಕಿನಿಂದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪತ್ತು ಮಂಜೂರು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಕಳ್ಳಿಗುದ್ದಿ ಪಿಕೆಪಿಎಸ್ ಸಂಘದ ಎರಡನೇ ಮಹಡಿಯ ಉದ್ಘಾಟನೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ಬಿಡಿಸಿಸಿ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತಗಳನ್ನು ಮಂಜೂರು ಮಾಡಿಸಲಾಗುತ್ತಿದ್ದು, ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕಿನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಇತ್ತಿಚೇಗೆ ತಾಲೂಕಿನ ಕಳ್ಳಿಗುದ್ದಿ...
ಸುದ್ದಿಗಳು
ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಸವಸುದ್ದಿ ಆಗ್ರಹ
ಮೂಡಲಗಿ - ರಾಯಬಾಗದ ಮಲ್ಟಿಸ್ಟೇಟ್ ಕೃಷ್ಣಾ ಗೋದಾವರಿ ಸೊಸಾಯಿಟಿ ಲಿಮಿಟೆಡ್ ಹಾಗೂ ಘಟಪ್ರಭಾ ಫರ್ಟಿಲೈಜರ್ಸ, ರಾಯಬಾಗ ಇವರು ಅಪಾರ ಪ್ರಮಾಣದಲ್ಲಿ ಗೊಬ್ಬರ ಸ್ಟಾಕ್ ಮಾಡಿಕೊಂಡು ಅಭಾವ ಸೃಷ್ಟಿ ಮಾಡುತ್ತಿದ್ದಾರಲ್ಲದೆ ಗೊಬ್ಬರ ಬೇಡಿದವರಿಗೆ ತಾವೇ ತಯಾರಿಸಿದ ಕೆಲವು ಗೊಬ್ಬರಗಳನ್ನು ಲಿಂಕ್ ಮಾಡುತ್ತಿದ್ದಾರೆ ಎಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಲಕ್ಕಣ್ಣ ಸವಸುದ್ದಿ ಆರೋಪಿಸಿದರು.ನಗರದ ಕಾರ್ಯನಿರತ ಪತ್ರಕರ್ತರ...
ಸುದ್ದಿಗಳು
ಕಿತ್ತೂರು ಚನ್ನಮ್ಮನವರ 195ನೇ ಪುಣ್ಯಸ್ಮರಣೆ
ಮೂಡಲಗಿ: ವೀರ ರಾಣಿ ಕಿತ್ತೂರು ಚನ್ನಮ್ಮನವರ 195ನೇ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದಲ್ಲಿ ಚನ್ನಮ್ಮನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಚನ್ನಮ್ಮ ಯುವಕ ಸಂಘ ಮೂಡಲಗಿ ವತಿಯಿಂದ ಶಾಲಾ ಮಕ್ಕಳಿಗೆ ನೋಟ್‍ಬುಕ್ ಹಾಗೂ ಪೆನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಗಜಾನನನ ಯುವಕ ಮಂಡಳಿ ಹಾಗೂ ಚನ್ನಮ್ಮ ಯುವಕ ಸಂಘದ ಸಮಸ್ತ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು,...
ಸುದ್ದಿಗಳು
ಶಿಕ್ಷಣ ಇಲಾಖೆಯ ಯೋಜನೆಗಳೇ ಶಾಲಾಭಿವೃದ್ಧಿಗೆ ಪೂರಕ: ಅಜಿತ್ ಮನ್ನಿಕೇರಿ
ಮೂಡಲಗಿ: ಶಿಕ್ಷಣ ಇಲಾಖೆಯ ಎಲ್ಲ ಯೋಜನೆಗಳ ಉದ್ದೇಶಗಳನ್ನು ತಿಳಿದುಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಾಗ ಎಲ್ಲ ಸರಕಾರಿ ಶಾಲೆಗಳ ಅಭಿವೃದ್ಧಿ ಸಾದ್ಯ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹೇಳಿದರು.ಅವರು ತಾಲೂಕಿನ ತುಕ್ಕಾನಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ವಿದ್ಯಾರ್ಥಿಗಳಿಗೆ ಸಂಕ್ರಮಣದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಭೋಜನಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅದರಂತೆ ಎಲ್ಲ ಯೋಜನೆಗಳ...
ಸುದ್ದಿಗಳು
ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ
ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.ಫೆ.5ರಂದು ಈ ಚಿಕಿತ್ಸಾ ಕೇಂದ್ರ ಉದ್ಘಾಟನೆಗೊಳ್ಳಲಿದೆ.ನಗರದ ಖಾಸಗಿ ಹೊಟೇಲ್‍ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಗಿರಿ ಮಠದ...
ಸುದ್ದಿಗಳು
ಗುರ್ಲಾಪೂರ ಗ್ರಾಮಕ್ಕೆ ಶಾಸಕರ ಭೇಟಿ
ಗುರ್ಲಾಪೂರ - ಸಮೀಪದ ಗುರ್ಲಾಪೂರ ಗ್ರಾಮಕ್ಕೆ ಅರಭಾಂವಿ ಶಾಸಕರು ಹಾಗು ರಾಜ್ಯ ಕೆ ಎಮ್ ಎಪ್.ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಬುಧವಾರರಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಸದಸ್ಯರಾದ ಶ್ರೀಮತಿ ಯಲವ್ವ ಪರಪ್ಪ ಗಡ್ಡೆಕಾರ ಇವರ ನಿವಾಸದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು. ನಂತರ ಶಾಸಕರು ಗ್ರಾಮದ ಅಬಿವೃದ್ದಿಯ ಕುರಿತು ಮಾತನಾಡುತ್ತಾ, ಅತಿ...
ಸುದ್ದಿಗಳು
ಪಾಟೀಲರ ಸ್ಮರಣೆ: ನುಡಿ ನಮನದಲ್ಲಿ ಕುಮಾರಸ್ವಾಮಿ ಅಭಿವೃದ್ಧಿ ಜಪ
ಸಿಂದಗಿ: ಮಾಜಿ ಸೈನಿಕ ದಿ.ಶಿವಾನಂದ ಪಾಟೀಲರು ಯಾವುದೇ ಫಲಾಪೇಕ್ಷೆಯಿಲ್ಲದೇ ಕರೋನಾ ಸಮಯದಲ್ಲಿ ಸಾವಿರಾರು ಕುಟುಂಬಗಳಿಗೆ ಹಸಿವು ನೀಗಿಸಿದವರು ಅವರು ಜೆಡಿಎಸ್ ಪಕ್ಷಕ್ಕೆ ಹೊಸ ಕಳೆ ತಂದುಕೊಟ್ಟಿದ್ದರು ಅವರ ಅಭಿನಂದನಾ ಕಾರ್ಯಕ್ರಮದ ಬದಲು ಅವರ ಶ್ರದ್ದಾಂಜಲಿಗೆ ಬರುತ್ತೇನೆ ಎಂದು ಅಂದುಕೊಂಡಿರಲ್ಲಿಲ್ಲ. ಅವರು ಕಂಡ ಕನಸು ನನಸಾಗಬೇಕಾದರೆ ಈ ಕ್ಷೇತ್ರವನ್ನು ನಾನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸುವೆ...
ಸುದ್ದಿಗಳು
ಬೀದರ – ಜಿಲ್ಲಾ ಕಾಂಗ್ರೆಸ್ ಪಕ್ಷದ ಒಳಗಿನವರ ಹೊರಗಿನವರ ಮಧ್ಯೆ ಮಾರಾಮಾರಿ
ವಿಶೇಷ ವರದಿ: ನಂದಕುಮಾರ ಕರಂಜೆ, ಬೀದರ್ಬೀದರ: ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಹೊರಗಿನವರು ಒಳಗಿನವರ ಮಧ್ಯೆ ಅಕ್ಷರಶಃ ಮಾರಾಮಾರಿ ಗಲಾಟೆಯೇ ನಡೆದಿದೆಯೆನ್ನಬಹುದು.ತಮಗೆ ಅಚ್ಚರಿಯಾಗಬಹುದು ಈ ಹೊರಗಿನವರು ಯಾರು, ಒಳಗಿನವರು ಯಾರು ಅಂತ. ಹಾಗೆ ನೋಡಿದರೆ ಇತಿಹಾಸದ ಪುಟಗಳನ್ನು ತಿರುಚಿ ನೋಡಿದಾಗ ಬಸವಣ್ಣನವರನ್ನು ಹೊಡೆದು ಬಸವಕಲ್ಯಾಣದಿಂದ ಹೊರಗೆ ಕಳಿಸಿದರೆಂಬ ಇತಿಹಾಸ ಬಸವಕಲ್ಯಾಣ ನಲ್ಲಿ ನಡೆದ ಬಗ್ಗೆ ಸಾಕ್ಷಿಗಳಿವೆ ಅದು...
ಸುದ್ದಿಗಳು
ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆ ; ಕೈ ನಾಯಕರಲ್ಲಿ ಜಟಾಪಟಿ
ಬೀದರ- ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರ ನಡುವೆಯೇ ಗಲಾಟೆಯಾದ ಬಗ್ಗೆ ವರದಿಯಾಗಿದ್ದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಬಿಸಿ ವಾತಾವರಣ ಉಂಟಾಗಿದೆ.ಈ ಇಬ್ಬರೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದು ಸದ್ಯದಲ್ಲಿಯೇ ಚುನಾವಣೆ ಇರುವುದರಿಂದ ಕ್ಷೇತ್ರದಲ್ಲಿ ಟಿಕೆಟ್ ಕುರಿತಂತೆ ಅಸಮಾಧಾನ ಇದ್ದದ್ದು ಈಗ ಬಹಿರಂಗವಾಗಿದೆಯೆನ್ನಲಾಗಿದೆ.ಕಾಂಗ್ರೆಸ್ ಮುಖಂಡ ಆನಂದ ದೇವಪ್ಪ ಅವರ ಮೇಲೆ ಮಾಜಿ...
ಸುದ್ದಿಗಳು
ಭಾಲ್ಕಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಬೀದರ- ಪುರಸಭೆಯ ವಾಹನವನ್ನು ಪಕ್ಷದ ಕೆಲಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಳಸಿ ಕೊಳ್ಳುತ್ತಿರುವುದನ್ನು ಕಂಡು ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ದೂರು ನೀಡಿದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಮಾತಿನ ಚಕಮಕಿ ನಡೆಯಿತು.ಭಾಲ್ಕಿ ನಗರದಲ್ಲಿ ಶುಕ್ರವಾರ ಸಾಯಂಕಾಲ 4:00 ಗಂಟೆಗೆ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದ್ದು ಕಾಂಗ್ರೆಸ್ ಪಕ್ಷದ ಧ್ವಜ ಮತ್ತು ಫ್ಲೆಕ್ಸ್ ಗಳನ್ನು ಅಳವಡಿಸಲು ಪುರಸಭೆಯ...
About Me
12265 POSTS
1 COMMENTS
Latest News
ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು
ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...



