spot_img
spot_img

ಪಾಟೀಲರ ಸ್ಮರಣೆ: ನುಡಿ ನಮನದಲ್ಲಿ ಕುಮಾರಸ್ವಾಮಿ ಅಭಿವೃದ್ಧಿ ಜಪ

Must Read

spot_img
- Advertisement -

ಸಿಂದಗಿ: ಮಾಜಿ ಸೈನಿಕ ದಿ.ಶಿವಾನಂದ ಪಾಟೀಲರು ಯಾವುದೇ ಫಲಾಪೇಕ್ಷೆಯಿಲ್ಲದೇ ಕರೋನಾ ಸಮಯದಲ್ಲಿ ಸಾವಿರಾರು ಕುಟುಂಬಗಳಿಗೆ ಹಸಿವು ನೀಗಿಸಿದವರು ಅವರು ಜೆಡಿಎಸ್ ಪಕ್ಷಕ್ಕೆ ಹೊಸ ಕಳೆ ತಂದುಕೊಟ್ಟಿದ್ದರು ಅವರ ಅಭಿನಂದನಾ ಕಾರ್ಯಕ್ರಮದ ಬದಲು ಅವರ ಶ್ರದ್ದಾಂಜಲಿಗೆ ಬರುತ್ತೇನೆ ಎಂದು ಅಂದುಕೊಂಡಿರಲ್ಲಿಲ್ಲ. ಅವರು ಕಂಡ ಕನಸು ನನಸಾಗಬೇಕಾದರೆ ಈ ಕ್ಷೇತ್ರವನ್ನು ನಾನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸುವೆ ಅದಕ್ಕೆ ನನ್ನ ತಂಗಿ ವಿಶಾಲಾಕ್ಷಿಯನ್ನು ನಿಮ್ಮ ಮಡಿಲಿಗೆ ಹಾಕುವೆ ಅವರನ್ನು ಹೊತ್ತು ಹರಸಿ ಆಶೀರ್ವದಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿಕೊಂಡರು.

ಪಟ್ಟಣದ ಶಹಾಪುರ ಪೆಟ್ರೋಲ್ ಬಂಕ ಹತ್ತಿರ ಶಿವಾನಂದ ಪಾಟೀಲರ ಅಭಿಮಾನಿ ಬಳಗ ಹಾಗೂ ಜೆಡಿಎಸ್ ವತಿಯಿಂದ ನಡೆದ ದಿ.ಶಿವಾನಂದ ಪಾಟೀಲ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಧಿಕಾರ ಮಾನವೀಯತೆಯನ್ನು ಮರೆಸುತ್ತವೆ ಎನ್ನುವುದಕ್ಕೆ 2018ರ ಚುನಾವಣೆಯಲ್ಲಿ ಮನಗೂಳಿ ಅವರ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿದ್ದವು ಅವುಗಳನ್ನು ಶಮನಗೊಳಿಸಿ ರಾಮ-ಲಕ್ಷ್ಮಣರ ಹಾಗೆ ತಂದೆಗೆ ಹೆಗಲು ಕೊಟ್ಟು ಶ್ರಮಿಸಿ ಅವರಿಗೆ ಮಂತ್ರಿ ಸ್ಥಾನ ನೀಡುತ್ತೇನೆ ಎನ್ನುವ ಮಾತಿನಂತೆ ನಾ ನಡೆದುಕೊಂಡೆ ಆದರೆ ಅವರ ಮರಣಾ ನಂತರ ಆ ಕುಟುಂಬದ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು ಆದಾಗ್ಯೂ ಉಪ ಚುನಾವಣೆಯಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ದೇವೆಗೌಡರಿಂದ ನೀರಾವರಿ ಕಂಡು ಇಂದು ಅವರ ಹೆಸರಿನ ಮೇಲೆ ಅನ್ನ ತಿನ್ನುತ್ತಿದ್ದೇವೆ ಎಂದು ಹೇಳುತ್ತಿದ್ದರು ಆದಾಗ್ಯೂ ಜೆಡಿಎಸ್ ಪಕ್ಷದ ಅಭ್ಯರ್ಥೀ ಹಿನಾಯವಾಗಿ ಸೋಲು ಕಂಡರು. ಅಂದಿನಿಂದ ಪಕ್ಷದ ಸಂಘಟನೆ ನೆಲಕ್ಕಚ್ಚಿತ್ತು. ಅದನ್ನು ಕೆಳಮಟ್ಟದಿಮದ ಸಂಘಟನೆ ಮಾಡಿ ಮೊನ್ನೆ ನಡೆದ ಪಂಚರತ್ನ ಕಾರ್ಯಕ್ರಮ ಅದ್ದೂರಿಗೆ ಸಾಕ್ಷಿಯಾಗಿತ್ತು ಅಂದೆ ದಿ.ಶಿವಾನಂದ ಪಾಟೀಲರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದರು. ಆದರೆ ಆ ದೇವರ ಆಟದಲ್ಲಿ ಆ ಭಾಗ್ಯವನ್ನು ಕಳಕೊಂಡಿದ್ದೇವೆ ಅದು ಪುನ: ನಿರ್ಮಾಣವಾಗಬೇಕಾದರೆ ಪಾಟೀಲ ಕುಟುಂಬಕ್ಕೆ ಶಕ್ತಿ ನೀಡಿದ್ದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ನೀಡಿದಂತಾಗುತ್ತದೆ ಎಂದರು.

ದಿ.ಶಿವಾನಂದ ಪಾಟೀಲ ಸೋಮಜ್ಯಾಳ ಅವರ ಪತ್ನಿ ವಿಶಾಲಾಕ್ಷಿ ಪಾಟೀಲ ಮಾತನಾಡಿ, 16 ವರ್ಷ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ್ದಿರಿ ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದ್ದೀರಿ ವಿಶ್ರಾಂತಿ ಜೀವನ ಕಳೆಯಿರಿ ರಾಜಕೀಯ ಬೇಡ ಎಂದು ಕುಟುಂಬದ ಎಲ್ಲರು ವಿರೋಧ ವ್ಯಕ್ತ ಪಡಿಸಿದ್ದೆವು ಆದರು ಸಿಂದಗಿ ಜನಕ್ಕೆ ನಾನೇನಾದರು ಸೇವೆ ಮಾಡಿ ಋಣ ತೀರಿಸಬೇಕು ನಿನಗೆ ಮುಂದೆ ಗೊತ್ತಾಗುತ್ತೆ ಎನ್ನುತ್ತಿದ್ದರು ನಮಗರಿಯದೇ ರಾಜಕೀಯಕ್ಕೆ ಧುಮುಕಿ ಈ ತಾಲೂಕಿನಲ್ಲಿ ಸುಮಾರು 3-4 ವರ್ಷಗಳಲ್ಲಿ ಇಷ್ಟು ಜನಮನ್ನಣೆ ಪಡೆದುಕೊಂಡಿದ್ದು ನಾ ಅರಿತಿರಲ್ಲಿಲ್ಲ. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸ್ಥಾನದಲ್ಲಿ ನಿಂತು ಸೇವೆ ಸಲ್ಲಿಸಿ ಋಣ ತೀರಿಸಲು ಸಿದ್ಧ ಎಂದು ಭಾವುಕರಾದರು. 

- Advertisement -

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮಾಜಿ ಯೋಧ ಶ್ರೀಶೈಲ ಯಳಮೇಲಿ, ನಾಗಠಾಣ    ಶಾಸಕ ದೇವಾನಂದ ಚವ್ಹಾಣ, ಬಿ.ಜಿ.ಪಾಟೀಲ ಹಲಸಂಗಿ, ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ,  ಶರಣಗೌಡ ಪಾಟೀಲ ಮಾತನಾಡಿದರು. 

ಡಾ. ಸುನೀತಾ ಚವ್ಹಾಣ, ಬಿ.ಡಿ.ಪಾಟೀಲ, ಬಸವರಾಜ ಹೊನವಾಡ, ಸಿ.ಎಸ್.ಸೋಲ್ಲಾಪುರ, ಬಂದೇನವಾಜ ಮಹಾಬರಿ, ರಾಜುಗೌಡ ಪಾಟೀಲ, ಬಸವರಾಜ ಟಣಕೇದಾರ, ಮಲ್ಲಿಕಾರ್ಜುನ ಯಂಡಿಗೇರಿ, ಕಲ್ಲಪ್ಪ ಹೊಸಮನಿ, ರಿಯಾಜ್ ಬೀಳವಾರ, ಆರ್.ಕೆ.ಪಾಟೀಲ, ಮಲ್ಲನಗೌಡ ಪಾಟೀಲ, ಮಹಿಳಾ ಘಟಕಾಧ್ಯಕ್ಷೆ ಜ್ಯೋತಿ ಗುಡಿಮನಿ, ದಿ.ಪಾಟೀಲರ ಪತ್ನಿ ವಿಶಾಲಾಕ್ಷಿ ಪಾಟೀಲ, ಪುತ್ರ ರಕ್ಷಿತ, ಮಗಳು ಐಶ್ವರ್ಯ, ಎಂ.ಎನ್.ಪಾಟೀಲ, ಪ್ರಕಾಶ ಹಿರೇಕುರಬರ, ಮಹಾಂತೇಶ ಪರಗೊಂಡ, ಭೀಮನಗೌಡ ಬಿರಾದಾರ, ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

ತಾಲೂಕಾ ಅಧ್ಯಕ್ಷ ದಾನಪ್ಪಗೌಡ ಚನ್ನಗೊಂಡ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗರಾಜ ಬಗಲಿ ಸ್ವಾಗತಿಸಿದರು. ಆಲಮೇಲ ಅಧ್ಯಕ್ಷ ಮೊಮ್ಮದಸಾಬ ಉಸ್ತಾದ ಪ್ರಾಸ್ತಾವಿಕವಾಗಿ ಮಾತನಾಡಿದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group