ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ' ವೀರ ' ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ' ವೀರ ' ಇರಲಿಲ್ಲ. ಅದು ಆಮೇಲೆ ಬಂದಿದ್ದು.
ವಿನಾಯಕ ಸಾವರ್ಕರ್, ವೀರ ಸಾವರ್ಕರ್ ಆಗಿರುವುದರ ಹಿಂದೆ ಒಂದು ರೋಚಕ ಕಥೆಯಿದೆ.
ವೀರ ಎಂಬ ಉಪಾಧಿಯನ್ನು...
ನಂಬಿಕೆ
'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ'ದಾಸವಾಣಿಯಂತೆ
ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ
ನಂಬಿಕೆ ನಂಬುವಂತಿರಲಿ ನಾಟುವಂತಿರಲಿ
ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ
ನಂಬಿಕೆ ನಡೆ-ನುಡಿಯಿಂದ ಕೂಡಿರಲಿ
ನಂಬಿಕೆ ನಯ-ವಿನಯದಿಂದ ಕೂಡಿರಲಿ
ನಂಬಿಕೆ ನಂಬಿಕೆದ್ರೋಹವಾಗದಿರಲಿ
ನಂಬಿಕೆ ನಾರದಂತಿರಲಿ
ನಂಬಿಕೆ ನೀರುಪಾಲಾಗದೆ
ಆಗಸದ ನಕ್ಷತ್ರದಂತಿರಲಿ
ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ
ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ
ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ
ನಂಬಿಕೆಯ ನಟ್ಟು ಹರಿಯದಂತಿರಲಿ
ನಂಬಿಕೆಯೇ ಸುಖಜೀವನದ ಸೂತ್ರವಾಗಿಹುದು
ನಂಬಿಕೆಯ ಕಂಬಗಳು ಅಲುಗಾಡದಿರಲಿ
ನಂಬಿಕೆಯಲಿ ನಾನು ಎಂಬುದು ನಶ್ವರವಾಗಿ
ನಂಬಿಕೆ ಸದಾ ನಂದಾದೀಪವಾಗಿರಲಿ
🖋ಬಿ ಡಿ ರಾಜಗೋಳಿ
ಚಿಕ್ಕೋಡಿ
-----------------------------------------------------------------
*ಕೊರೋನಾ ಪಾಠ*
(ಹವ್ಯಕ ಭಾಷೆಯ...
ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ.
ನಿಯಮಗಳು:-
ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ.
1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು...
ಅಪ್ಪ, ಅಮ್ಮಂದಿರಿಗಾಗಿ ಒಂದು ವಿಶೇಷ ದಿನವಿರುವಂತೆ ಸಹೋದರರಿಗಾಗಿಯೂ ಇರುವುದೇ ಇಂದಿನ ದಿನ ಮೇ 24. ಅಣ್ಣ ತಮ್ಮ ಪರಸ್ಪರ ಸಹಬಾಳ್ವೆಯಿಂದ, ಪ್ರೀತಿಯನ್ನು ಹಂಚಿಕೊಂಡು ಬದುಕಬೇಕೆನ್ನುವುದು ಇಂದಿನ ದಿನದ ಸಂದೇಶ.
ಅಲಾಬಾಮಾದ ಸಿ. ಡೇನಿಯಲ್ಲ ರೋಡ್ಸ್ ಎಂಬಾತ ಈ ' ಬ್ರದರ್ಸ್ ಡೇ ' ಕಂಡುಹಿಡಿದಿದ್ದು ನಮಗೆ ಒಬ್ಬರಿರಲಿ ಇಬ್ಬರಿರಲಿ ಅಥವಾ ಸಹೋದರರು ಇಲ್ಲದೇ ಇರಲಿ ಎಲ್ಲರಲ್ಲಿ...
ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣಿನ ಜೊತೆ ಪೈನಾಪಲ್ ಹಣ್ಣಿನ ಸುಗ್ಗಿ !
ಹೊರಮೈಯಲ್ಲಿ ಮುಳ್ಳುಗಳಂತೆ ದಪ್ಪ ಕವಚ ಹೊಂದಿರುವ ಅನಾನಸು ಸಿಪ್ಪೆ ಸುಲಿದು ತಿಂದರೆ ರುಚಿ ಸ್ವರ್ಗ ತೋರಿಸುತ್ತದೆ. ಹುಳಿ, ಸಿಹಿ,ವಗರು ಮಿಶ್ರ ರುಚಿಗಳನ್ನು ಹೊಂದಿರುವ ಪೈನಾಪಲ್ ಚಿಕ್ಕ ಮಕ್ಕಳಾದಿಯಾಗಿ ಎಲ್ಲ ವಯಸಿನವರಿಗೂ ಅಚ್ಚುಮೆಚ್ಚಿನ ತಿನಿಸು.
ವಿಟಮಿನ್ ಸಿ ಇಂದ ತುಂಬಿಕೊಂಡಿರುವ ಈ ಹಣ್ಣು ನೋಡಲು...
ಉತ್ತರ ಕರ್ನಾಟಕದಲ್ಲಿ ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವ ಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ,...
ಆ ಮಹಡಿ,ಮೆಟ್ಟಿಲು,ಎತ್ತರದ ಸೂರು,
ಹೊಳೆವ ಗಾಜು ಒರೆಸಿ ಬಣ್ಣ ಮೆತ್ತಿದ ಕೈ...
ನಲ್ಲಿಗೆ ನೆಲ ಅಗೆದು ಕಟ್ಟಿದ ಮೋರಿಯ ಕೆಸರು ಎತ್ತಿ ಪಾಯ್ ಖಾನೆಯನ್ನೂ ಸ್ವಚ್ಚಗೊಳಿಸಿದರು
ಮತ್ತದೇ ಹಸನಾಗದ ಬದುಕು
ಇಟ್ಟಿಗೆ,ಜಲ್ಲಿ,ಕಬ್ಬಿಣ,ಕಲ್ಲು ಹೊತ್ತ ತಲೆ
ಅದೇ ಮಾಸಿದ ಬಟ್ಟೆ,
ಉಳ್ಳವರಿಗೆ ರೇಜಿಗೆ ಹುಟ್ಟಿಸಿದ ಬೆವರ ಘಮ.
ಛೇ ಕಂದೀಲು,ಕ್ಯಾಂಡಲ್ಲು,ದೀಪ ಹಚ್ಚಿದರೂ ಬದಲಾಗದ ಬದುಕು.
ಗಂಟೆ,ಜಾಗಟೆ,ಹೋಮ ಹವನ
ಯಾವುದೂ ಇಲ್ಲದಿದ್ದರೂ
ಸೈರನ್ನಿನ ಕೂಗಿಗೆ ಮೈ ಬಗ್ಗಿಸಿ ದುಡಿವ ದೇಹ.
ಬೇಲ್ ಪೂರಿ,ಪಾನಿಪೂರಿ,ಹಣ್ಣು-ತರಕಾರಿ...
ಕೊರೋನಾ ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜೀವ - ಜೀವನ ಪಣಕ್ಕಿಟ್ಟು ರೋಗಿಗಳ ಸೇವೆಗೆ ನಿಂತಿರುವ ದಾದಿಯರ ಸೇವೆಗೆ ನಮ್ಮ " Times of ಕರ್ನಾಟಕ " ಬಳಗದ ವತಿಯಿಂದ ಒಂದು ಸೆಲ್ಯೂಟ್.