ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಗುರುವಾರ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನಾಚರಣೆಯನ್ನು ಆಚರಿಸಿದರು.
ಮೂಡಲಗಿಯ ಬಸ್ ನಿಲ್ದಾಣದಲ್ಲಿ ಶ್ವಾಸಕೋಶ ಕ್ಯಾನ್ಸರ್ ಕುರಿತು ಮುಂಜಾಗೃತ ಕ್ರಮದ ಬಗ್ಗೆ ಕರಪತ್ರಗಳನ್ನು ಬಿಡುಗಡೆ ಮಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿ ‘ಧೂಮಪಾನ ಮತ್ತು ಧೂಮಪಾನಿಗಳ ಹೊಗೆಯನ್ನು ಸೇವಿಸುವುದರಿಂದ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆ ವ್ಯಾಪಿಸುತ್ತದೆ. ಜನರು ಧೂಮಪಾನದಿಂದ ದೂರವಿರಬೇಕು’ ಎಂದರು.
ಬಾಲಶೇಖರ ಬಂದಿ ಮಾತನಾಡಿ ‘ಜಗತ್ತಿನಲ್ಲಿ ಪ್ರತಿ ವರ್ಷ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆ ಪೀಡಿತರಾಗುತ್ತಿದ್ದಾರೆ. ನಿರಂತರ ಕೆಮ್ಮು, ಎದೆ ನೋವು, ತೀವ್ರ ತೂಕ ಕಡಿಮೆಯಾಗುವುದು ಶ್ವಾಸಕೋಶ ಕ್ಯಾನ್ಸರ್‌ದ ಲಕ್ಷಣಗಳಾಗಿವೆ. ಅಂಥ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದರು.
‘ಧೂಮಪಾನದಿಂದ ದೂರ ಇರಿ, ಕ್ಯಾನ್ಸರ್ ದಿಂದ ಮುಕ್ತರಾಗಿರಿ’ ಎಂದು ಘೋಷಣೆಗಳನ್ನು ಹಾಕಿದರು. ಶ್ವಾಸಕೋಶ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಬಸ್ ನಿಲ್ದಾಣದಲ್ಲಿ ಜನರಿಗೆ ಹಂಚಿದರು.
ಲಯನ್ಸ್ ಗ್ಲೋಬಲ್ ಸರ್ವಿಸ್ ಟೀಮ್ ಸದಸ್ಯ ವೆಂಕಟೇಶ ಸೋನವಾಲಕರ, ಸಂಗಮೇಶ ಕೌಜಲಗಿ, ಮಹಾವೀರ ಸಲ್ಲಾಗೋಳ, ಡಾ. ಸಂಜಯ ಶಿಂಧಿಹಟ್ಟಿ, ಶ್ರೀಶೈಲ ಲೋಕನ್ನವರ, ಶಿವಾನಂದ ಕಿತ್ತೂರ, ಬಸ್ ನಿಲ್ದಾಣ ಸಾರಿಗೆ ನಿಯಂತ್ರಕ ಶ್ರೀಶೈಲ ಇದ್ದರು.