ಬೆಂಗಳೂರು- ಓರಿಯೆಂಟಲ್ ಪೌಂಡೇಶನ (ರಿ) ಕನ್ನಡ ಸಾಹಿತ್ಯ ಪರಿಷತ್ 2024-25 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 103 ಸಾಧಕರಿಗೆ ಇಂಡಿಯನ್ ಐಕಾನ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭವು ದಿ. 15 ರವಿವಾರದಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ ಬೆಂಗಳೂರು ಕೃಷ್ಣ ರಾಜ ಪರಿಷತ್ ಮಂದಿರದಲ್ಲಿ ಜರುಗುವುದು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಚಲನ ಚಿತ್ರ ನಟ ರಾಮಕೃಷ್ಣ, ಚಲನಚಿತ್ರ ನಟಿ ಅಭಿನಯ, ರಂಗಭೂಮಿ ಕಲಾವಿದೆ ಚಿತ್ರನಟಿ ಡಾ.ಕಾಮನಿಧರನ್, ಜೀ ಕನ್ನಡದ ಖ್ಯಾತ ನಿರೂಪಕ ಮಾಸ್ಟರ್ ಆನಂದ ಇವರ ಅಧ್ಯಕ್ಷತೆಯಲ್ಲಿ ಜರುಗುವುದು ಎಂದು ಓರಿಯೆಂಟಲ್ ಪೌಂಡೇಶನ್ ಸಂಸ್ಥಾಪಕ ರವಿಕುಮಾರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.