ಗೊರೂರು ಅನಂತರಾಜು ಅವರಿಗೆ ಬೆಂಗಳೂರು ಗೆಜ್ಜೆ ಹೆಜ್ಜೆ ರಂಗತಂಡದಿಂದ ರಂಗ ಪುರಸ್ಕಾರ

Must Read

ಬೆಂಗಳೂರಿನ ಚಲನಚಿತ್ರ ಹಾಸ್ಯನಟರು ಮೈಸೂರು ರಮಾನಂದ ಸಾರಥ್ಯದ ಹೆಜ್ಜೆ ಗೆಜ್ಜೆ ರಂಗ ತಂಡದ 50ನೇ ವರ್ಷದ ಪಾದಾರ್ಪಣೆಯ ಸಂಭ್ರಮ ಹಾಗೂ ಆಶಾವಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಲೋಕಾರ್ಪಣಿ, ರಂಗ ಸಂಗೀತ, ನಾಟಕ ಪ್ರದರ್ಶನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಹಾಸನದ ಸಾಹಿತಿಗಳು ನಾಟಕಕಾರರು ಗೊರೂರು ಅನಂತರಾಜು ರವರ ಕಲಾ ಸೇವೆ ಸಾಂಸ್ಕೃತಿಕ ಸಂಘಟನೆ, ನಾಟಕ, ಸಾಹಿತ್ಯ ಸೇವೆ ಗುರುತಿಸಿ ರಂಗ ಪುರಸ್ಕಾರವನ್ನು ಹೆಜ್ಜೆ ಗೆಜ್ಜೆ ತಂಡದ ಸಂಸ್ಥಾಪಕ ಅಧ್ಯಕ್ಷರು ಮತ್ತು ಚಲನಚಿತ್ರ ನಟರು ಮೈಸೂರು ರಮಾನಂದ ಅವರು ನೀಡಿ ಸನ್ಮಾನಿದರು.

ಸಾಹಿತ್ಯ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ರಂಗಭೂಮಿ ನಟರು, ಗಾಯಕರು, ನೃತ್ಯ ಚಿತ್ರ ಕಲಾವಿದರು ಮೊದಲಾಗಿ ಪ್ರತಿಭ್ವಾನಿತ ಕಲಾವಿದರನ್ನು ಸಂದರ್ಶಿಸಿ ಪತ್ರಿಕೆಗಳ ಮೂಲಕ ಜನತೆಗೆ ಪರಿಚಯಿಸುವ ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಲೇಖಕರು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಗೌರವ ಅಧ್ಯಕ್ಷರು ಗೊರೂರು ಅನಂತರಾಜು ರವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯು ಸಮಾಜಕ್ಕೆ ಇನ್ನೂ ಹೆಚ್ಚಿನದಾಗಿ ದೊರೆಯಲೆಂದು ಶುಭ ಹಾರೈಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿಯವರು ಅಭಿನಂದಿಸಿದ್ದಾರೆ.

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group