ಸಿಂದಗಿ; ಸ್ಥಳೀಯ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ ಮತ್ತು ಕೌಶಲ್ಯಾಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಉದ್ಯೋಗ ವಿನಿಮಯ ಕಛೇರಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ಯುವನಿಧಿ ಯೋಜನೆಯ” ಜಾಗೃತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಯೋಜನೆಯ ಕುರಿತು ಮಹೇಶ ಮಾಳವಾಡೇಕರ್ ಜಿಲ್ಲಾ ಉದ್ಯೋಗಾಧಿಕಾರಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ ಇವರು ಮಾತನಾಡಿದರು.
ತಾಲೂಕ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀಶೈಲ ಕವಲಗಿ “ಯುವನಿಧಿ ಯೋಜನೆ” ಕುರಿತು ಮಾತನಾಡಿ ಹಾಗೂ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರದಲ್ಲಿ ನೊಂದಾಯಿಸಲು ಜಿಲ್ಲಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ತೊಂದರೆಯಾಗುತ್ತದೆ ಸ್ಥಳೀಯ ತಾಲೂಕಾ ಪಂಚಾಯತ್ ಕಛೇರಿ ಸಿಂದಗಿಯಲ್ಲಿ ಅರ್ಜಿ ಸಲ್ಲಿಸಲು ಹಾಗೂ ಸ್ವೀಕರಿಸಲು ವ್ಯವಸ್ಥೆ ಸಹ ಮಾಡುತ್ತೇನೆ ಎಂದು ಹೇಳಿದರು.
ಸದಸ್ಯರಾದ ಮಹ್ಮದ ರಜತ್ ತಾಂಬೆ ಮಾತನಾಡಿ, ತಾಲೂಕಿನ ಪ್ರತಿಯೊಬ್ಬ ನಿರುದ್ಯೋಗಿಗೂ ಯುವನಿಧಿಯ ಲಾಭ ತಟ್ಟುವಂತೆ ಮಾಡಲು ಇನ್ನಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಹೇಳಿದರು. ಇನ್ನೋರ್ವ ಸದಸ್ಯರಾದ ಶ್ರೀಮತಿ ಸುನಂದಾ ಯಂಪೂರೆ ಮಾತನಾಡಿ ಕರ್ನಾಟಕ ಘನ ಸರ್ಕಾರದ ಯುವನಿಧಿ ಯೋಜನೆಯ ಲಾಭವನ್ನು ನಿರುದ್ಯೋಗಿ ಯುವಕ/ಯುವತಿಯರು ಪಡೆದುಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಮಾತನಾಡಿ, ಬಡ ನಿರುದ್ಯೋಗ ಯುವಕ/ಯುವತಿಯರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ತಮ್ಮ ಸುತ್ತಮುತ್ತಲಿನ ನಿರುದ್ಯೋಗ ಯುವಕ/ಯುವತಿಯರಿಗೆ ಮಾಹಿತಿ ಕೊಡಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಸದಸ್ಯರಾದ ಶಿವಾನಂದ ಹಡಪದ, .ಮೊಹಸೀನ ಬೀಳಗಿ, ಪರಶುರಾಮ ಉಪ್ಪಾರ, ಇರ್ಫಾನ ವಾಹಿದಿ, ಮಹಿಬೂಬ ಬಾಗೇವಾಡಿ, ಡಾ. ಅರವಿಂದ ಮನಗೂಳಿ, .ಎಸ್.ಎಮ್.ಬಿರಾದಾರ, ಎಸ್.ಕೆ.ಹೂಗಾರ, ಜಿ.ಜಿ.ಕಾಂಬಳೆ, ಬಿ.ಡಿ.ಮಾಸ್ತಿ, ಡಾ.ಅಂಬರೀಶ ಬಿರಾದಾರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಹುಲ ಕಾಂಬಳೆ ಸ್ವಾಗತಿಸಿದರು, ಡಾ.ಚಂದ್ರಶೇಖರ ಪಾಟೀಲ ವಂದಿಸಿದರು.