spot_img
spot_img

ಕಣಚೂರು ಆಯುರ್ವೇದ ಮತ್ತು ಆಂಗ್ಲ ಚಿಕಿತ್ಸಾ ಶಿಬಿರ

Must Read

spot_img
- Advertisement -

ಮಂಗಳೂರು –   ದಿ. ೨೦ ರಂದು ಲಯನ್ ಕದ್ರಿಹಿಲ್ಸ್ ಮಂಗಳೂರು ಶ್ರೀರಾಮ ಭಕ್ತಾಂಜನೇಯ ಭಜನಾ ಮಂಡಳಿ ಪಲ್ಲ ಮಜಲು ಇಂಡಿಯನ್ ಕಾನ್ಸರ್ ಸೊಸೈಟಿ ಮಂಗಳೂರು ಆಶ್ರಯದಲ್ಲಿ ಕಣಚೂರು ವೈದ್ಯಕೀಯ ಕಾಲೇಜಿನ ನುರಿತ ವೈದ್ಯರಿಂದ ಬಿ.ಸಿ.ರೋಡು ಪಲ್ಲ ಮಜಲು ಎಂಬಲ್ಲಿ ಆಯುರ್ವೇದ ಹಾಗೂ ಆಂಗ್ಲ ಪದ್ಧತಿಯ ಚಿಕಿತ್ಸಾ ಶಿಬಿರ ನಡೆಯಿತು

ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಖ್ಯ ಕ್ಯಾನ್ಸರ್ ತಜ್ಞ ಡಾ. ನಜೀಬ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಅರ್ಬುದ ರೋಗದ ಪೂರ್ವ ತಪಾಸಣೆಯ ಮಹತ್ವವನ್ನು ವಿವರಿಸಿದರು. ಈ ತಿಂಗಳನ್ನು ಕ್ಯಾನ್ಸರ್ ತಪಾಸಣಾ ಮಾಸವನ್ನಾಗಿ ಆಚರಿಸುತ್ತಿದ್ದೇವೆ. ಶ್ವಾಸ ಕೋಶ ಹಾಗೂ ಸ್ತನದ ಕ್ಯಾನ್ಸರ್ ಗಳು ಅತೀವವಾಗಿ ಇರುವ ಕಾರಣ ಕಾಲಕಾಲಕ್ಕೆ ಅರ್ಬುದ ಪೂರ್ವ ತಪಾಸಣೆ ಮಾಡಿಸಿ ಕೊಳ್ಳಬೇಕು ಹಾಗೂ ಈಗ ಹಲವಾರು
ರೀತಿಯ ತಂತ್ರಜ್ಞಾನಗಳಿರುವ ಕಾರಣ ಕ್ಯಾನ್ಸರ್ ನಿಯಂತ್ರಣ ಸುಲಭವಾಗಿದೆ ಎಂದರು.

ಕದ್ರಿ ಹಿಲ್ಸ್ ಲಯನ್ ಕ್ಲಬ್ ನ ಅಧ್ಯಕ್ಷ ಲ. ಪ್ರಕಾಶನ್ ಮಾತನಾಡುತ್ತಾ, ಕದ್ರಿಹಿಲ್ಸ್ ಲಯನ್ಸ್ ಘಟಕವು ಪದೇ ಪದೇ ಇತರೇತರ ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬರುತ್ತಿದ್ದು ಹಲವಾರು ರೋಗಿಗಳಿಗೆ ವರದಾನವಾಗಿದೆ ಹಾಗೂ ಸಕಲರೂ ಈ ಸೌಲಭ್ಯವನ್ನು ಬಳಸಿಕೊಳ್ಳ ಬೇಕೆಂದು ಕರೆನೀಡುತ್ತಾ ಈ ಶಿಬಿರದ ವ್ಯವಸ್ಥಾಪಕರಾಗಿ ಶ್ರಮಿಸಿದ ಲ.ಎನ್ ಟಿ.ರಾಜ, ಲ.ಗೋವಿಂದ ಶರ್ಮ, ಕಣಚೂರು ವೈದ್ಯಕೀಯ ಸಂಸ್ಥೆಯ ಸಂಪರ್ಕಾಧಿಕಾರಿ ರಶೀದ್, ರಾಮ‌ ಭಕ್ತಾಂಜನೇಯ ಭಜನಾ ಮಂಡಳಿಯ ಅಧ್ಯಕ್ಷ  ಗಣೇಶ ದಾಸ್ ಲ. ಪ್ರವೀಣ ಶೆಟ್ಡಿ ಕಣಚೂರಿನ ಇ.ಎನ್.ಡಿ ತಜ್ಞ ಡಾ ಅಶೋಕ್ ಮತ್ತಿತರರನ್ನು ಅಭಿನಂದಿಸಿದರು.

- Advertisement -

ಸುಮಾರು ಇನ್ನೂರಕ್ಕೂ ಹೆಚ್ಚಿನ ವಿವಿಧ ಪ್ರಕಾರದ ರೋಗಿಗಳನ್ನು ಯಥಾ ಪ್ರಕಾರ ಔ಼ಷಧಿ, ಸ್ತ್ರೀರೋಗ, ಕಿವಿ ಕಣ್ಣು ಕುತ್ತಿಗೆ , ಶಸ್ತ್ರ ಚಿಕಿತ್ಸಾ , ಕ್ಯಾನ್ಸರ್ ತಪಾಸಣಾ ಹಾಗೂ ಚರ್ಮರೋಗ ವಿಭಾಗ ಗಳಲ್ಲದೆ ಆಯುರ್ವೇದದ ಎಲ್ಲ ವಿಭಾಗದ ನುರಿತ ವೈದ್ಯರು ಪರೀಕ್ಷೆ ಮಾಡಿ ಔಷಧಿ ನೀಡಿದರು.

ಇದಲ್ಲದೆ ಕಣಚೂರು ವೈದ್ಯಕೀಯ ಸಂಸ್ಥೆಯ ಆರೋಗ್ಯ ಕಾರ್ಡ್ ನ್ನು ಮುಂದಿನ ಬಳಕೆಗಾಗಿ ನೀಡಲಾಯಿತು.

ವಿಟ್ಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕಿ ಸವಿತಾ ನಾಗರಾಜ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಡಾ ಸುರೇಶ ನೆಗಳಗುಳಿ ಹಾಗೂ ಹಲವಾರು‌ ಲಯನ್ ಸದಸ್ಯರೂ ಆಸ್ಪತ್ರೆಯ ವೈದ್ಯ ಡಾ ಕಾರ್ತಿಕ್ ಡಾ ಜೈನುದ್ದೀನ್ ಡಾ ಸಲೀಮಾ, ಡಾ ಮೇಘಾ ,ಡಾ ಅತೀರಾ ಸಹಿತ ಮತ್ತಿತರ ವೈದ್ಯಕೇತರರೂ ಉಪಸ್ಥಿತರಿದ್ದರು

- Advertisement -

ಶ್ರೀ ರಾಮಾಂಜನೇಯ ಭಜನಾ ಮಂಡಳಿ ಕಾರ್ಯದರ್ಶಿ ಸತೀಶ ಪಲ್ಲ‌ಮಜಲು ಧನ್ಯವಾದ ಸಮರ್ಪಿಸಿದರು

ಡಾ.ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ
ಮಂಗಳೂರು 575009
9448216674

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group