ಮೂಡಲಗಿ: ಪಟ್ಟಣ ಯಲ್ಲಮ್ಮ ದೇವಸ್ಥಾನದ ಹತ್ತಿರ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಪುರಸಭೆ ವಿಶೇಷ ಅನುದಾನದಲ್ಲಿ ಕೊಳವೆ ಬಾವಿ ಕೊರೆಯುವುದಕ್ಕೆ ಶುಕ್ರವಾರದಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರು ಮತ್ತು ಅಯ್ಯಪ್ಪ ಸ್ವಾಮಿ ಮಾಲಾಧಾರಿ ಶ್ರೀ ನಿಂಗಪ್ಪ ಕುರಬೇಟ ಗುರುಸ್ವಾಮಿಜಿ ಪೂಜೆಸಲ್ಲಿಸಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ನಿಂಗಪ್ಪ ಕುರಬೇಟ ಗುರುಸ್ವಾಮಿಗಳು ಮಾತನಾಡಿ, ಮೂಡಲಗಿ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಮಾಲಾಧಾರಿಗಳ ಬೇಡಿಕೆಯಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಮುತ್ತವರ್ಜಿ ವಹಿಸಿ ಅಯ್ಯಪ್ಪ ಸ್ವಾಮಿಗಳ ಅನುಕ್ಕೂಲಕ್ಕಾಗಿ ಕೊಳವೆ ಬಾವಿ ಕೊರೆಯುವದಕ್ಕೆ ಪುರಸಭೆಗೆ ತಿಳಿಸಿದ್ದರಿಂದ ಇಂದು ಚಾಲನೆ ನೀಡಿರುವ ಈ ಕೊಳವೆ ಬಾವಿಯನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶಿವು ಚಂಡಕಿ, ಹುಸೇನಸಾಬ ಶೇಖ, ಮಾಜಿ ಅಧ್ಯಕ್ಷ ರಾಮಣ್ಣಾ ಹಂದಿಗುಂದ, ಅನ್ವರ ನದಾಫ್, ಸನ್ನಿಧಾನದ ರವಿ ನೇಸುರ ಗುರುಸ್ವಾಮಿ, ಸದಾ ಗುಡ್ಲಮನಿ ಸ್ವಾಮಿ, ಬಾಳಯ್ಯಾ ಹಿರೇಮಠ, ಸುರೇಶ ಪತ್ತಾರ, ಕೃಷ್ಣಾ ಗಿರೆಣ್ಣವರ, ಸುರೇಶ ಸವಸುದ್ದಿ, ಮಲ್ಲು ಬೊಳನ್ನವರ, ಯಲ್ಲಪ್ಪ ಪೂಜೇರಿ ಮತ್ತು ಸನ್ನಿಧಾನದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇದ್ದರು.