ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ಶ್ರೀ ಅಯ್ಯಪ್ಪಸ್ವಾಮಿ “ಮಹಾಪೂಜೆ/ಉತ್ಸವ” ದಿನಾಂಕ 01 ರಂದು ಪ್ರತಿ ವರ್ಷ ಜರುಗುತ್ತದೆ. ಅದೆ ರೀತಿಯಾಗಿ ಈ ವರ್ಷವೂ ಸಹ ಜನವರಿ 01, 2025 ರಂದು ನಡೆಯುವ ಉತ್ಸವದಲ್ಲಿ ಸಹಸ್ರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪಾಲ್ಗೊಳ್ಳುವರು.
ಗುರ್ಲಾಪೂರದಲ್ಲಿ ಹದಿನೆಂಟು ಮೆಟ್ಟಿಲು ಇರುವ ಉತ್ತರ ಕರ್ನಾಟಕದ ಮೊದಲು ದೇವಸ್ಥಾನವಿದೆ. ಎದುರಿಗೆ ಹರಿಯುವ ಮಿನಿ ಪಂಪೆ ಎಂದು ಭಕ್ತರು ಕರೆಯುತ್ತಾರೆ.
ಅಯ್ಯಪ್ಪ ಸ್ವಾಮಿ ದೇವರಷ್ಟೇ ಅಲ್ಲದೇ ಗಣಪ, ಸುಬ್ರಮಣ್ಯ, ನಾಗರಾಜ ಮತ್ತು ಮಾಳಗಿಪುರತಂ ದೇವರ ದರ್ಶನ ಕೂಡಾ ಇಲ್ಲಿ ಮಾಡಬಹುದು.
ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗುವವು. ನಸುಕಿನಲ್ಲಿ ಭಕ್ತರು ತಣ್ಣೀರ ಸ್ನಾನ ಮಾಡಿ ಸನ್ನುಧಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವರು. ಸಂಜೆೆ 6 ಗಂಟೆಗೆ ಅಯ್ಯಪ್ಪನ ಕನ್ನಿಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು, ಮುತ್ತೈದೆಯರು ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪನ ಭಾವಚಿತ್ರ ಮೆರವಣಿಗೆ ಹಾಗು ಅಯ್ಯಪ್ಪನ ಪಲ್ಲಕ್ಕಿ ಉತ್ಸವ ಸಕಲ ವಾದ್ಯವೃಂದದೊಂದಿಗೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬಂದು ತಲುಪುವುದು. ಸಂಜೆ 6-30ಕ್ಕೆ “ಅಗ್ನಿ ಪೂಜೆ” ಇರುವುದು.
ಭಕ್ತರಿಂದ ಅಯ್ಯಪ್ಪ ಸ್ವಾಮಿ ದರ್ಶನ ಮಹಾಮಂಗಳಾರತಿ ನಂತರ ಮಹಾಪ್ರಸಾದ ನೆರವೇರುವುದು.