ಮುನವಳ್ಳಿ: ಸಮೀಪದ ಸಿಂದೋಗಿ ಗ್ರಾಮದಲ್ಲಿ ಬುಧವಾರ ೨೯ ರಂದು ಮಧ್ಯಾಹ್ನ ೨ ಗಂಟೆಗೆ ಅಯ್ಯಪ್ಪಸ್ವಾಮಿ ಜ್ಯೋತಿ ಮೆರವಣಿಗೆಯು ಭಕ್ತರ ಸಮೂಹದಲ್ಲಿ ಮಲಪ್ರಭಾ ನದಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಸಾಗುವ ಮೂಲಕ ಸಂಜೆ ೬ ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಮ್ಮಿನಬಾವಿಯ ನಾರಾಯಣ ಗುರುಸ್ವಾಮಿಗಳ ನೇತೃತ್ವದಲ್ಲಿ ಮುನವಳ್ಳಿ, ಚುಂಚನೂರ, ತೋರಣಗಟ್ಟಿ, ಉಜ್ಜಿನಕೊಪ್ಪ, ಕಟಕೋಳ, ಬೆನಕಟ್ಟಿ,ತಲ್ಲೂರ, ಉಗರಗೋಳ, ಹೂಲಿ, ತೆಗ್ಗಿಹಾಳ, ಹೂಲಿಕಟ್ಟಿ, ಭಂಡಾರಹಳ್ಳಿ, ಗುರುಸ್ವಾಮಿಗಳಿಂದ ಮಹಾಪೂಜೆ, ಎಣ್ಣೆಸೇವೆ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಗುವುದು ಎಂದು ಸಿಂದೋಗಿ ಗ್ರಾಮದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಸದ್ಬಕ್ತರು ತಿಳಿಸಿರುವರು.
ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ತನು ಮನ ಧನದಿಂದ ಪಾಲ್ಗೊಂಡು ಸೇವೆಗೈಯಲು ಕರೆ ನೀಡಿರುವರು.