ಸಮೀಪದ ಗುರ್ಲಾಪೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಡಾ ಬಿ ಆರ್ ಅಂಬೇಡ್ಕರ ಸೇನೆ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸೇನೆ ಯವರ ಮುಂದಾಳತ್ವದಲ್ಲಿ ವೇದಮೂರ್ತಿಗಳಾದ ಚಿದಾನಂದ ಹಿರೇಮಠ ಹಾಗು ಶಿವಾನಂದ ಹಿರೇಮಠ ಇವರ ಸಾನ್ನಿಧ್ಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 133 ನೇ ಜಯಂತಿ ಆಚರಿಸಿದರು.
ಗ್ರಾಮದ ಹಿರಿಯರಾದ ಶಿವಬಸು ಹಂಚಿನಾಳ ಡಾ.ಬಿ ಆರ್.ಅಂಬೇಡ್ಕರ ನಡೆದು ಬಂದ ದಾರಿ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಹೇಳಿದರು.
ಆರಂಭದಲ್ಲಿ ಕಾಶಿನಾಥ ಅಂಬಿಗೇರ ಇವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ, ಸಂವಿಧಾನ ಶಿಲ್ಪಿ ಅಂಬೇಡ್ಕರವರು ಮಹಿಳೆಯ ಮೇಲೆ ಆಗುವ ದಬ್ಬಾಳಿಕೆ ಜಾತಿಪದ್ದತಿ, ಅಸ್ಪೃಶ್ಯತೆ, ಅನಕ್ಷರತೆ ಸಮಾಜದಲ್ಲಿ ನಡೆಯುವ ಅನಿಷ್ಟ ಪದ್ಧತಿಗಳ ಹೊಡೆದೋಡಿಸಲು ಮಾಡಿದ ಕಾರ್ಯಗಳ ಬಗ್ಗೆ ಹೇಳುತ್ತಾ ಸರ್ವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ನಾಮ ನಿರ್ದೇಶಕರಾದ ವ್ಹಿ ಬಿ ಮುಗಳಖೋಡ, ಎ.ಡಿ ಗಾಣಿಗೇರ, ಎ.ಬಿ ಕುಲಕರ್ಣಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಡಲಗಿ ತಾಲೂಕ ಘಟಕದ ಉಪಾಧ್ಯಕ್ಷರಾದ ಶಿವಾನಂದ ಮರಾಠೆ, ಈರಪ್ಪ ನಾವಿ, ಪರಶುರಾಮ ಬಂಗೆನ್ನವರ, ಪ್ರಕಾಶ ಗಾಡಿವಡ್ಡರ, ಮಹಾದೇವ ನಡವಿನಕೇರಿ, ಕಲ್ಲೊಳೆಪ್ಪ ಬಂಗೆನವರ, ಹನಮಂತ ಬಂಗೆನವರ, ಬಸಪ್ಪ ಮಾದರ, ಬಾಗವ್ವ ಗಾಡಿವಡ್ಡರ, ತಿಮ್ಮವ್ವ ಗಾಡಿವಡ್ಡರ, ಸಾವಿತ್ರಿ ಬಂಗೇನವರ, ಮಹಾದೇವಿ ಬಂಗೇನವರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.