ಮುಧೋಳ – ಪಂಚಭಾಷಾ ನಟಿ. ಚಿತ್ರ ರಂಗದ ದ್ರುವತಾರೆ ಡಾ.ಸರೋಜಾದೇವಿ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ, ಚಿತ್ರರಂಗವು ಬಡವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷರ. ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ತಾಲೂಕಿನ ಮುಗಳಖೋಡದ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಕಾಯಾ೯ಲಯದಲ್ಲಿ “ನುಡಿ-ನಮನ” ಸಲ್ಲಿಸಿ ಮಾತನಾಡಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪದ್ಮಭೂಷಣ, ಪದ್ಮಶ್ರೀ .ಡಾ. ಸರೋಜಾ ದೇವಿ ಅವರು ನಟಸಾರ್ವಭೌಮ, ವರನಟ ಡಾ.ರಾಜಕುಮಾರ ಅವರಿಗೆ ಅಪರೂಪದ ಜೋಡಿಯಾಗಿದ್ಧರು ಎಂದ ಅವರು ರಂಗಭೂಮಿಯಲ್ಲಿ ಎಂದೆಂದೂ ಬಿ.ಸರೋಜಾದೇವಿ ಅಮರರು ಎಂದರು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಎಲ್.ಶಾಮಲಾ ಕಲಾವಿದರಾದ ಶಿವಲಿಂಗವ್ವ ಪೋಲಿಸ್ ನಿಂಗವ್ವ ಕನ್ನೋಳಿ .ಬಸವ ಜಾನಪದ ಸಂಸ್ಥೆಯ ಅಧ್ಯಕ್ಷ ರಮೇಶ ಸೋಲೋನಿ.ಪಿ.ಕೆ.ಪಿ.ಎಸ್. ಸದಸ್ಯ ಮುತ್ತಣ್ಣ ಪೋಳ.ಸೇರಿದಂತೆ ಅನೇಕರು ನುಡಿ-ನಮನದಲ್ಲಿ ಭಾಗವಹಿಸಿದ್ದರು.

