ಪ್ರವಾಸಿ ಮಂದಿರದ ಕಾಮಗಾರಿ ವೀಕ್ಷಿಸಿದ ಬಾಲಚಂದ್ರ ಜಾರಕಿಹೊಳಿ

Must Read

ಗುರ್ಲಾಪೂರ–  ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರದ ಪ್ರವಾಸಿ ಮಂದಿರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕೊಠಡಿಗಳ ಕಾಮಗಾರಿಯನ್ನು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು  ಪರಿಶೀಲಿಸಿದರು.

ನಂತರ ಮಾತನಾಡುತ್ತಾ,  ಈ  ಪ್ರವಾಸಿ ಮಂದಿರವು ಒಂದು ನೂರುವರ್ಷದ ಇತಿಹಾಸವನ್ನು ಹೊಂದಿರುತ್ತದೆ ಆದ್ದರಿಂದ ಈ ಪ್ರವಾಸಿ ಮಂದಿರವನ್ನು ಮಾದರಿ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಆರು ವಿಶ್ರಾಂತಿ ಗೃಹ  ಹಾಗೂ ಸಭಾ ಭವನ ನಿರ್ಮಾಣ ಮಾಡಲಾಗುತ್ತಿದೆ ಆದಷ್ಟು ಬೇಗನೆ ಹೊಸ ಕಟ್ಟಡ ಕಾಮಗಾರಿ ಮುಗಿಸಲಾಗುವುದು ಎನ್ನುತ್ತಾ, ಸಾರ್ವಜನಿಕರು ಗುರ್ಲಾಪೂರ ರಸ್ತೆ ಬಗ್ಗೆ  ವಿಚಾರಿಸಿದಾಗ ಈ ವರ್ಷದ ಕಬ್ಬು ನುರಿಸುವ ಹಂಗಾಮು ಮುಗಿದ ಬಳಿಕ ಗುರ್ಲಾಪೂರದ ರಾಜ್ಯ ಹೆದ್ದಾರಿಯಿಂದ ಇಟನಾಳದವರೆಗೆ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ, ಸದಸ್ಯ ಆನಂದ ಟಪಾಲದಾರ, ಶಿವು ಚಂಡಕಿ, ಹುಸೇನ ಶೇಖ, ಭೀಮಶಿ ಮಗದುಮ್ಮ, ಹಣಮಂತ ತೇರದಾಳ, ಮರೆಪ್ಪ ಮರೆಪ್ಪಗೋಳ, ಪುರಸಭೆ ಮಾಜಿ ಅಧ್ಯಕ್ಷರಾದ ರಾಮಣ್ಣಾ ಹಂದಿಗುಂದ, ಪ್ರಕಾಶ ಮುಗಳಖೋಡ, ರವಿ ಸಾಬಣ್ಣವರ, ಮಹಾಲಿಂಗ ಮುಗಳಖೋಡ, ಕೃಷ್ಣ ಶಾಬಣ್ಣವರ, ಲಕ್ಷ್ಮಣ ಗೌರಾಣಿ, ಅನ್ವರ ನದಾಫ,  ಚೇತನ ನಿಶಾನಿಮಠ ಹಾಗೂ ಗ್ರಾಮಸ್ಥರು ಆಗಮಿಸಿದ್ದರು.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group