spot_img
spot_img

ಧನುರ್ಮಾಸ ಸಂಗೀತೋತ್ಸವ ಸಂಪನ್ನ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಸಾಹಿತಿ- ಸಂಘಟಕ ಡಾ.ಸಿಸಿರಾ ರವರಿಗೆ ‘ದತ್ತ ಸಾಮ್ರಾಟ್’ ಪ್ರಶಸ್ತಿ ಪ್ರದಾನ

Must Read

ಬೆಂಗಳೂರು–  ನಗರದ ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ದತ್ತಶ್ರೀ ಸಾಂಸ್ಕೃತಿಕ ವೇದಿಕೆ ವತಿಯಿಂದ ಧನುರ್ಮಾಸ ಸಂಗೀತೋತ್ಸವ  – ದತ್ತ ಸಾಮ್ರಾಟ್ ಪ್ರಶಸ್ತಿ ಪ್ರದಾನ- ನೃತ್ಯ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಲಾ ಸಮ್ಮಿಲನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತ ವಿಕಾಸ ಪರಿಷತ್ ಅಧ್ಯಕ್ಷ ರಘುನಾಥ್ , ಪತ್ರಕರ್ತ ನ.ಶ್ರೀ. ಸುಧೀಂದ್ರರಾವ್, ಕನ್ನಡ ಸಾಹಿತ್ಯ ಪರಿಷತ್ತು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ರ. ನರಸಿಂಹಮೂರ್ತಿ, ಜನಪದ ಸಂಶೋಧಕ  ಡಾ.ಕೆ.ಎನ್.ನಾಗೇಶ್ ವೇದಿಕೆಯ ಆಧ್ಯಕ್ಷ ಭಾಸ್ಕರ್ ಮೂರ್ತಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಸಾಹಿತಿ- ಸಂಘಟಕ ಡಾ.ಸಿಸಿರಾ ರವರಿಗೆ ‘ದತ್ತ ಸಾಮ್ರಾಟ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ.ಹೆಚ್.ಕುಮಾರ್ ರವರು ಪ್ರತಿ ಬಡಾವಣೆಯಲ್ಲೂ ಇಂತಹದೊಂದು ಸಾಂಸ್ಕೃತಿಕ ವೇದಿಕೆ ಮೂಲಕ ಎಲೆಮರೆಕಾಯಂತಿರುವ ಪ್ರತಿಭೆಗಳಿಗೆ ಅವಕಾಶ ನೀಡಿ ಶ್ರೀಮಂತ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು  ಎಂದು ಅಭಿಪ್ರಾಯಪಟ್ಟರು.

ಗುರು ಶ್ರೀಮತಿ ಮೋನಿಷಾ ನವೀನ್ ರವರ ನಾಟ್ಯ ಸನ್ನಿಧಿ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಂತವಾಣಿ ಸುಧಾಕರ್, ರಾಜೇಶ್ ಆನೇಕಲ್, ದತ್ತಶ್ರೀ , ರವಿ ಇಗ್ಗಲೂರು, ಚೈತ್ರ ಹೆಬ್ಬಗೋಡಿ, ವೀರೇಶ್,ನರಸಿಂಹ, ವಾಸುಕಿ ಪ್ರಸಾದ್ , ಭಾಗ್ಯಲಕ್ಷ್ಮಿ , ಸಾಯಿ ಪವನ್ ಹಾಗು ಸತ್ಯವತಿ ರವೀಂದ್ರ ರವರ ತಂಡದಿಂದ ಸುಮಧುರ ಗಾಯನ ಸಂಜೆ ಏರ್ಪಡಿಸಲಾಗಿತ್ತು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!