ಬಾಳರಶ್ಮಿ ಕವನ ಸಂಕಲನ ಲೋಕಾಪ೯ಣೆ

Must Read

 

ಬೆಳಗಾವಿ – ತನ್ಮಯ ಚಿಂತನ ಚಾವಡಿ ಬೆಳಗಾವಿ ವತಿಯಿಂದ ಮಹೇಶ ಪಿ ಯೂ ಕಾಲೇಜ್ ಮಹಾಂತೇಶ ನಗರ ದಲ್ಲಿ ದಿ 08.01.2024ರಂದು ಡಾ ಜಯಾನಂದ ಧನವಂತ ಇವರ ಕವನ ಸಂಕಲನ ‘ ಬಾಳ ರಶ್ಮಿ’ ಯನ್ನು ಎಸ್ ಆರ್ ಹಿರೇಮಠ ನಿವೃತ್ತ ಪ್ರಾಚಾಯ೯ರು ಬಿಡುಗಡೆ ಮಾಡಿದರು.

ಧನವಂತ ಅವರ ಬಾಳಿನಲ್ಲಿ ಅನುಭವ ಕವನಗಳು ಮೂಡಿ ಬಂದಿವೆ ಇವರಿಂದ ಇನ್ನೂ ಕೃತಿಗಳು ಬರಲಿ ಎಂದು ಹಾರೈಸಿದರು.

ಪ್ರಾಂಶುಪಾಲ ಮಂಜುನಾಥ ಭಟ್  ಇವರ ಕವನ ಸಂಕಲನ ಪರಿಚಯ ಮಾಡಿದರು. 201 ಕವನಗಳು ವಸ್ತು ವಿನ್ಯಾಸ, ಪದ ಬಳಕೆ, ಅಭಿವ್ಯಕ್ತಿಯ ರಸಭರಿತ ಪ್ರೇಮ ಕವನಗಳು, ಪರಿಸರ, ಶಿಕ್ಷಣ, ಪಶು ಪಕ್ಷಿ, ಕೋವಿಡ್. ಹಬ್ಬಗಳು ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಕವಿಗಳು ಉತ್ತಮ ರೀತಿಯಲ್ಲಿ ಮೂಡಿ ಬಂದಿವೆ ಎಂದರು.

ಮೃತ್ಯುಂಜಯಸ್ವಾಮಿಗಳು ಹಿರೇಮಠ ಅವರು ಸಾನ್ನಿಧ್ಯವಹಿಸಿ ಶುಭ ಹಾರೈಸಿದರು.   

ಅಧ್ಯಕ್ಷತೆ ವಹಿಸಿದ್ದ ಸ ರಾ ಸುಳಕೂಡೆ ಅವರು ತನ್ಮಯ ಚಿಂತನ ಚಾವಡಿ ಕಾಯ೯ಗಳು ಹಾಗೂ ಡಾ ಜಯಾನಂದ ಧನವಂತರಿಂದ ಉತ್ತರೋತ್ತರವಾಗಿ ಕವನ ಸಂಕಲನಗಳು ಸಾರಸ್ವತ ಲೋಕಕ್ಕೆ ನೀಡಲೆಂದು ಹಾರೈಸಿದರು. ನಿವೃತ್ತ ನ್ಯಾಯಾಧೀಶರು ಯೋಗಿ ಕರಗುದ್ರಿ ಅವರು ಮಾತನಾಡಿದರು. 

ವಿಜಯ ಮುಚಳಂಬಿ ಪ್ರಧಾನ ಸಂಪಾದಕರು ಹಸಿರುಕ್ರಾಂತಿ ದಿನಪತ್ರಿಕೆ ಸುರೇಶ ಹಂಜಿ ಕ ಸಾ ಪ ಬೆಳಗಾವಿ ತಾಲೂಕ ಅಧ್ಮಕ್ಷರು ಅತಿಥಿಗಳಾಗಿ ಉಪಸ್ಥಿತರಿದ್ದರು ರಶ್ಮಿ ಧನವಂತ ಪ್ರಕಾಶಕರು ಅನುಭಾವನಾ ಪ್ರಕಾಶನ ರಾಮತಿಥ೯ನಗರ, ಎಫ್ ವೈ ತಳವಾರ, ಬಿ ಬಿ ಮಠಪತಿ, ಎಸ್ ಎಸ್ ತಲ್ಲೂರ, ಶಿವಾನಂದ ತಲ್ಲೂರ, ಅಶೋಕ ಉಳಾಗಡ್ಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ  ಜಗದೀಶ ಶಂಕರ, ಪ್ರವೀಣ ವಾಣಿ, ಸಿದ್ದವ್ವ, ಶಕುಂತಲಾ, ಸವಿತಾ, ಜಗದೀಶ ಬಾಗನವರ, ಸಿ ಕೆ ಕಟಾಪೂರಿಮಠ, ಬಿ ಬಿ ಕಮತೆ, ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಎಂ ವೈ ಮೆಣಸಿನಕಾಯಿ ಅವರು ನಿರೂಪಿಸಿದರು. ಬಾಳಗೌಡ ದೊಡಬಂಗಿ ಕೊನೆಯಲ್ಲಿ ವಂದಿಸಿದರು

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group