ಭಾರತೀಯ ರಿಸರ್ವ್ ಬ್ಯಾಂಕ್ ಲೋಕಪಾಲರು ಬೆಂಗಳೂರು ಇವರಿಂದ ಬ್ಯಾಂಕ್ ಗ್ರಾಹಕರ ಜನಜಾಗೃತಿ ಕಾರ್ಯಕ್ರಮ ನಡೆಯಿತು
ಚಾಮರಾಜನಗರ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿಂಗ್ ಲೋಕಪಾಲಕರು ಬೆಂಗಳೂರು ಕಚೇರಿ ವತಿಯಿಂದ ಬ್ಯಾಂಕು ಮತ್ತುಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಗ್ರಾಹಕರ ಅನುಕೂಲಕ್ಕಾಗಿ ಜನಜಾಗೃತಿ ಕಾರ್ಯಕ್ರಮವನ್ನು ಡಾಕ್ಟರ್ ರಾಜಕುಮಾರ್ ಭವನದಲ್ಲಿ ಏರ್ಪಡಿಸಲಾಗಿತ್ತು.
ಶ್ರೀಮತಿ ಮಂಗಳಂ ವೆಂಕಟರಮನ್, ವ್ಯವಸ್ಥಾಪಕರು ನಡೆಸಿಕೊಟ್ಟರು ಗ್ರಾಹಕರ ದೂರುಗಳ ಪರಿಹಾರ ಸಂಬಂಧ ಬ್ಯಾಂಕುಗಳಿಗೆ ಆರ್ ಬಿ ಐ ನೀಡಿರುವ ಸೂಚನೆಗಳು ಮತ್ತು ತಮ್ಮ ದೂರುಗಳನ್ನು ಕಾಲಮಿತಿಯಲ್ಲಿ ಪರಿಹರಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಏಕೀಕೃತ ಲೋಕಪಾಲ ಯೋಜನೆ 2021ರ ಅಡಿಯಲ್ಲಿ ಇರುವ ಪರಿಹಾರ ವಿಧಾನಗಳ ಬಗ್ಗೆಯೂ ತಿಳಿಸಿಕೊಟ್ಟರು.
ದೂರುಗಳನ್ನು ಆರ್‌ಬಿಐನ ಸಿಎಂಎಸ್ ಪೋರ್ಟಲ್ ಮತ್ತು ಯೋಜನೆಯ ಇತರ ಮಾಧ್ಯಮಗಳ ಮೂಲಕ ಹೇಗೆ ಸಲ್ಲಿಸಬೇಕು ಎಂಬುದರ ಬಗ್ಗೆಯೂ ಮಾಹಿತಿ ನೀಡಿದರು
ನಾನಾ ವಿಧದ ವಂಚನೆಗಳನ್ನು ತಡೆಯುವುದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಸುಮಾರು 150 ಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ಪ್ರಶ್ನೋತ್ತರ ಅವಧಿಯನ್ನೂ ಸಹ ಏರ್ಪಡಿಸಲಾಗಿತ್ತು
ಸಭಿಕರ ಪ್ರಶ್ನೆಗಳಿಗೆ ಶ್ರೀಮತಿ ಶಾಹಿನ್ ಕೌಸರ್ ಖಾನ್,ಶ್ರೀ ವಿನೋದ್ ನಾಯಕ್ ಮತ್ತು ಶ್ರೀ ರಾಯ್ ಶಿವಕುಮಾರ್ ಉತ್ತರಿಸಿದರು. ಕರ್ನಾಟಕ ಬ್ಯಾಂಕ್ ವತಿಯಿಂದ ಬಂದಂತಹ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಿಸರ್ವ್ ಬ್ಯಾಂಕ್ ಏಕೀಕೃತ ಲೋಕಪಾಲ ಯೋಜನೆ 2021 ರ ಬಗ್ಗೆ ಸಂಬಂಧಿಸಿದ ಕರಪತ್ರ ಮತ್ತು ಕಿರು ಹೊತ್ತಿಗೆಗಳನ್ನು ಅಧಿಕ ರಿಗೆ ಹಂಚಲಾಯಿತು ಭಾಗವಹಿಸಿದ ಎಲ್ಲರೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು.