ಹುನಗುಂದ: ತಾಲೂಕಿನ ಬಿಸಲದಿನ್ನಿ ಗ್ರಾಮದ ಶಿಕ್ಷಕ ಬಸನಗೌಡ ಎಂ. ಗೌಡರ ಅವರು ಗೋವಾ ರಾಜ್ಯದಲ್ಲಿ ಕನ್ನಡಉಳಿಸಿ, ಬೆಳೆಸುತ್ತಿರುವ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅವರಿಗೆ ಇತ್ತೀಚೆಗೆ ಗೋವಾ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಸನಗೌಡ ಗೌಡರ ಅವರು ಗೋವಾ ರಾಜ್ಯದಲ್ಲಿ ಕನ್ನಡ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಗೋವಾ ರಾಜ್ಯದಲ್ಲೂ ಕನ್ನಡ ಭಾಷೆಯನ್ನು ಕೃಷಿಗೊಳಿಸುವ ಕೆಲಸವನ್ನು ಮಾಡುತ್ತಿರುವುದನ್ನು ಅಲ್ಲಿನ ಜುವಾರಿ ನಗರ ಕನ್ನಡ ಸಂಘ ಮತ್ತು ಗೋವಾ ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕಗಳು ಗುರುತಿಸಿ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಕನ್ನಡ ಭಾಷೆಯ ಉಳಿಸುವ ಕಾಯಕದ ಜೊತೆಗೆ ಕನ್ನಡ ಪರ ಸಂಘಟನೆಗಳಿಗೆ ಸಹಾಯ ಸಹಕಾರ ಮಾಡುತ್ತಿರುವ ಹಾಗೂ ಕನ್ನಡ ಭಾಷೆಗೆ ವಿಶಿಷ್ಟವಾದ ಸೇವೆಯನ್ನು ಸಲ್ಲಿಸುತ್ತಿರುವ ಇವರ ಭಾಷಾ ಪ್ರೇಮ, ಅಭಿಮಾನಕ್ಕೆ ಗೋವಾ ರಾಜ್ಯದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಇನ್ನಿತರ ಸಂಘ ಸಂಸ್ಥೆಗಳು ಇವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೂಡಾ ನೀಡಿ ಗೌರವಿಸಿದ್ದಾರೆ
ಗೋವಾ ರಾಜ್ಯದಲ್ಲಿ ಕನ್ನಡದ ಕಂಪನ ಹರಿಸಿ ಕನ್ನಡ ಭಾಷೆಯನ್ನು ಅನ್ಯ ರಾಜ್ಯದಲ್ಲಿ ಬೆಳೆಸಿ ಪ್ರಶಸ್ತಿ ಪುರಸ್ಕೃತರಿಗೆ ಬಿಸಲದಿನ್ನಿ ಗ್ರಾಮಸ್ಥರು ಹಾಗೂ ಹುನಗುಂದ ತಾಲೂಕಿನ ಅನೇಕ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡದ ಮನಸ್ಸುಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ

