ಬೀದರ – ಬರಲಿರುವ ಬಸವ ಜಯಂತಿಯನ್ನು ಹಿಂದು ಮುಸ್ಲಿಮರು ಜಂಟಿಯಾಗಿ ಆಚರಿಸುವ ಮೂಲಕ ಬಸವಣ್ಣನವರ ಕರ್ಮ ಭೂಮಿ ಬೀದರ್ ನಲ್ಲಿ ಹಿಂದೂ ಮುಸ್ಲಿಂ ಧರ್ಮದ ಸೌಹಾರ್ದಕ್ಕೆ ನಾಂದಿ ಹಾಡಲು ಹೊರಟ ಬಸವ ಭಕ್ತರು.
ಬೀದರ್ ನಲ್ಲಿ ನಡೆಯಲಿರುವ 889 ನೇ ಬಸವ ಜಯಂತಿ ಹಿನ್ನೆಲೆಯಲ್ಲಿ ಹಿರಿಯ ಬಸವ ಭಕ್ತ ಬಸವ ಜಯಂತಿ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶಿವಶರಣಪ್ಪ ವಾಲಿ ಹೇಳಿಕೆಯೊಂದನ್ನು ನೀಡಿದ್ದು, ದಿ. 01-05-2022 ರಿಂದ 03-05-2022ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ನಗರದಲ್ಲಿ ಆಚರಿಸುವ 889ನೇ ಬಸವ ಜಯಂತಿಯು ಇಡೀ ರಾಷ್ಟ್ರಕ್ಕೆ ಮಾದರಿ ಯಾಗಲಿದೆ ಏಕೆಂದರೆ ಪ್ರಸ್ತುತ ದೇಶದಲ್ಲಿ ಕೋಮು ಗಲಭೆಗಳು ಹೆಚ್ಚಾಗಿವೆ. ಮೆರವಣಿಗಗೆಗಳ ಮೇಲೆ ಕಲ್ಲು ತೂರಾಟಗಳು ನಡೆದಿವೆ ಆದರೆ ಸರ್ವ ಧರ್ಮಗಳ ನಡುವೆ ಸೌಹಾರ್ದತೆ ಯನ್ನು ಕಾಣುವ ಬಸವಾದಿ ಶರಣರ ತತ್ವ ಗಳನ್ನು ಸಾರುವ ಬಸವಣ್ಣನ ಜಯಂತ್ಯುತ್ಸವ ಅಂದರೆ ಸರ್ವಧರ್ಮಗಳ ಸಂಗಮ ಎಂದೆ ಕರೆಯಲಾಗುವುದು. ಈ ಉತ್ಸವಕ್ಕೆ ಬೀದರ ನಗರದ ಮುಸ್ಲಿಂ ಸಮುದಾಯದ ಜನರು ಭವ್ಯ ಸ್ವಾಗತ ಮಾಡಿಕೊಳ್ಳುವದಾಗಿ ತಿಳಿಸಿದ್ದಲ್ಲದೆ ನಗರದ ಶಾಹಿನ್ ಶಿಕ್ಷಣ ಸಂಸ್ಥೆಯ ವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ದಾಸೋಹದ ವ್ಯವಸ್ಥೆ ಮಾಡುವುದಾಗಿ ಒಪ್ಪಿದ್ದಾರೆ ಎಂದು ಹೇಳಿದರು.
ಹಿಂದೂ ಮುಸ್ಲಿಂ ಧರ್ಮದ ಸಂಘರ್ಷಕ್ಕೆ ಅಂತ್ಯ ಹಾಡಲು ಹೊರಟ ಸೂಫಿ ಸಂತ ಮತ್ತು ಬಸವಾದಿ ಶರಣರ ಕರ್ಮ ಭೂಮಿಯಾದ ಬೀದರ ನಲ್ಲಿ ನಡೆಯುವ 889 ನೇ ಬಸವ ಜಯಂತ್ಯುತ್ಸವ ಇಡೀ ದೇಶದಾದ್ಯಂತ ಮಾದರಿ ಜಯಂತಿ ಆಗುತ್ತದೆ ಎಂದು ಅವರು ಹೇಳಿದರು.
ಉತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಹಾರೂಗೇರಿ ಅವರು ಮಾತನಾಡಿ, ದಿನಾಂಕ 01-05-2022ರಂದು ಬೈಕ್ ರ್ಯಾಲಿ ಮೂಲಕ ಆರಂಭ ವಾಗುವ ಬಸವಣ್ಣನವರ 889ನೇ ಜಯಂತ್ಯುತ್ಸವ ಬಸವಾದಿ ಶರಣ ಶರಣೆಯರ ವೇಷಧಾರಿ ಮಕ್ಕಳ ಮತ್ತು ಶರಣ ಸಾಹಿತ್ಯದ ಭವ್ಯ ಮೆರವಣಿಗೆ ಜರುಗಲಿದೆ. ಜಿಲ್ಲೆಯ ಸಮಸ್ತ ಬಸವಾದಿ ಶರಣರು ಭಕ್ತರು ಆಗಮಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸುವಂತೆ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧನ್ನೂರ್ ಕಾರ್ಯದರ್ಶಿ ಗಳಾದ ಕುಶಲರಾವ್ ಪಾಟೀಲ, ದೀಪ ವಾಲಿ ರಜಿನೀಶ ವಾಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.