ಬೀದರ – ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಭರ್ಜರಿ ಗೆಲುವು ಸಾಧಿಸಿದ್ದಾರೆ.
20,449 ಮತಗಳ ಅಂತರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಮಾಲಾ ನಾರಾಯಣರಾವ್ ಅವರನ್ನು ಸೋಲಿಸಿದ್ದಾರೆ.
ಅನುಕಂಪದ ಅಲೆ ಬಸವಕಲ್ಯಾಣದಲ್ಲಿ ಕೆಲಸ ಮಾಡಲಿಲ್ಲ. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಮತಗಳನ್ನು ಸೆಳೆದಿರುವದು ಬಿಜೆಪಿಗೆ ಲಾಭವಾಗಿದೆ ಎನ್ನಲಾಗಿದೆ.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಟಿಕೆಟ್ ದೊರೆಯದ ಕಾರಣ ಸ್ವತಂತ್ರರಾಗಿ ಸ್ಪರ್ಧಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಕ್ಷೇತ್ರದ ಮತದಾರರು ಖೂಬಾ ಅವರನ್ನು ಸಂಪೂರ್ಣ ಕೈಬಿಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಮುಂದೆ ಕಾದು ನೋಡಬೇಕು ಬಸವಕಲ್ಯಾಣ ಯಾವ ರೀತಿ ಅಭಿವೃದ್ಧಿ ಹೊಂದುತ್ತದೆ ಎಂಬುದು ರಾಜ್ಯದ ನಾಯಕರು ಉಪಚುನಾವಣೆ ಯಲ್ಲಿ ಬಸವಕಲ್ಯಾಣ ಜನರಿಗೆ ಭರವಸೆ ನೀಡಿದರು ಆ ಭರವಸೆಗಳು ಎಷ್ಟರಮಟ್ಟಿಗೆ ಈಡೇರುತ್ತವೆಯೆಂಬುದನ್ನು ಕಾದು ನೋಡಬೇಕಾಗಿದೆ.