ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಸುಣಗಾರಗೆ ಸನ್ಮಾನ

Must Read

ಬೆಳಗಾವಿ :- ಬೆಳಗಾವಿ ನಗರದ ರಾಮದೇವ ಹೋಟೆಲ್ ದ ಸಭಾಂಗಣದಲ್ಲಿ ಶನಿವಾರ ಜರುಗಿದ  ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಅಧ್ಯಕ್ಷರಾದ ಪ್ರಾಥಮಿಕ ಶಾಲಾ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಫಕೀರಪ್ಪ ಸುಣಗಾರ ರವರನ್ನು ಪಬ್ಲಿಕ್ ಟಿವಿ ಯ ಜಿಲ್ಲಾ ಮುಖ್ಯ ವರದಿಗಾರರಾದ ದಿಲೀಪಕುಮಾರ ಕುರಂದೆವಾಡೆ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಅವರ ಸಾಮಾಜಿಕ ಶೈಕ್ಷಣಿಕ ಕಾರ್ಯಗಳಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ  ಸಿದ್ದಗೌಡ ಸುಣಗಾರ, ಹಿರಿಯ ವಕೀಲರಾದ ಸಂಜಯ ಪಾಟೀಲರು, ಮಾಜಿ ಮಹಾಪೌರರಾದ ಅಪ್ಪಾಸಾಬ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಮಲ್ಲಪ್ಪಣ್ಣ ಮುರಗೋಡ ರವರ, ಮಾಜಿ ಉಪತಹಸೀಲ್ದಾರರಾದ ಎಸ್ ಸಿ ಗಂಗಾಪುರ ರವರು, ಜೀವನ ಶಿರಗೆ ಯವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಬಸವರಾಜ ಸುಣಗಾರ ರನ್ನು ಅಭಿನಂದಿಸಿದರು

ಬಸವರಾಜ ಸುಣಗಾರ ರವರು ಸಾಹಿತಿಗಳು ಸಂಘಟಕರು ಆಗಿದ್ದು, ಹಲವಾರು ಸಂಘ ಗಳಲ್ಲಿ ಕಾರ್ಯ ಮಾಡಿದ್ದು, ಸದ್ಯ ಕರ್ನಾಟಕ ರಾಜ್ಯ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ ಉಪಾಧ್ಯಕ್ಷರಾಗಿರುವರು. ಸದ್ಯ ಹೊಸ ಕಾರ್ಯದಲ್ಲಿ ಯಶಸ್ಸು ಗಳಿಸಲೆಂದು ಗೆಳೆಯರ ಬಳಗ ಹಾರೈಸಿ ಅಭಿನಂದಿಸಿದೆ

ಧನ್ಯವಾದಗಳು :-ಕಾರ್ಯಕ್ರಮ ಆಯೋಜನೆ ಮಾಡಿರುವ ಆತ್ಮೀಯರು, ಪಬ್ಲಿಕ್ ಟಿವಿ ಯ ಮುಖ್ಯ ವರದಿಗಾರರಾದ ದಿಲೀಪಕುಮಾರ ಕುರಂದೆವಾಡೆಯವರಿಗೆ ಹಾಗೂ ರಾಜ್ಯಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರಿಗೆ ಬಸವರಾಜ ಫಕೀರಪ್ಪ ಸುಣಗಾರ ರವರು ಧನ್ಯವಾದಗಳನ್ನು ಹೇಳಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group