Homeಸುದ್ದಿಗಳುಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ - ಲಯನ್ ರಾಜಶೇಖರ ಹಿರೇಮಠ

ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ – ಲಯನ್ ರಾಜಶೇಖರ ಹಿರೇಮಠ

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಪದಗ್ರಹಣ

ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ’ ಎಂದು ಡಿಸ್ಟ್ರಿಕ್ಟ್ ಲಯನ್ಸ್ ಪಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಬೆಳಗಾವಿಯ ರಾಜಶೇಖರ ಹಿರೇಮಠ ಹೇಳಿದರು.

ಇಲ್ಲಿಯ ಎಸ್‌ಎಸ್‌ಆರ್ ಪ್ರೌಢ ಶಾಲೆಯ ಕಲ್ಮೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ೨೦೨೫-೨೬ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜ ಸೇವೆ ಮಾಡಲು ನಿತ್ಯ ಸಾಕಷ್ಟು ಅವಕಾಶಗಳಿದ್ದು, ಸೇವೆಯು ಜನರಿಗೆ ತಲುಪುವಂತೆ ಕಾರ್ಯಮಾಡಬೇಕು ಎಂದರು.

ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್‌ವು ಸದ್ಯ ವಿಶ್ವ ವ್ಯಾಪ್ತಿಯಲ್ಲಿ ೧.೪ ಮಿಲಿಯನ ಸದಸ್ಯರನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ ೧.೫ ಮಿಲಿಯನ್ ಸದಸ್ಯರೊಂದಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದರು.

ಮೂಡಲಗಿ ಲಯನ್ಸ್ ಕ್ಲಬ್‌ದವರು ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

೨೦೨೫-೨೬ನೇ ಸಾಲಿಗೆ ಅಧ್ಯಕ್ಷರಾಗಿರುವ ವಿಶಾಲ ಶೀಲವಂತ, ಕಾರ್ಯದರ್ಶಿ ಗಿರೀಶ ಆಸಂಗಿ, ಖಜಾಂಚಿಯಾಗಿರುವ ಡಾ. ಪ್ರಶಾಂತ ಬಾಬಣ್ಣವರ ಹಾಗೂ ಉಳಿದ ಪದಾಧಿಕಾರಿಗಳಿಗೆ ಪದಗ್ರಹಣದೊಂದಿಗೆ ಪ್ರಮಾಣ ವಚನ ಬೋಧಿಸಿದರು.

ಲಯನ್ಸ್ ಜೋನಲ್ ಅಧ್ಯಕ್ಷ ಡಾ. ರಮೇಶ ಶೆಟ್ಟರ, ನಿರ್ಗಮಿತ ಅಧ್ಯಕ್ಷ ಸಂಜಯ ಮೋಕಾಶಿ, ನೂತನ ಅಧ್ಯಕ್ಷ ವಿಶಾಲ ಶೀಲವಂತ ಮಾತನಾಡಿದರು.

ನಿರ್ಗಮಿತ ಅಧ್ಯಕ್ಷ ಸಂಜಯ ಮೋಕಾಶಿ, ಕಾರ್ಯದರ್ಶ ಸೋಮಶೇಖರ ಹಿರೇಮಠ ಮತ್ತು ಖಜಾಂಚಿ ಕೃಷ್ಣಾ ಕೆಂಪಸತ್ತಿ ಮತ್ತು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅನ್ನದಾಸೋಹ ಮಾಡಿರುವ ಮಹನೀಯರಿಗೆ ಸನ್ಮಾನಿಸಿದರು. ಪ್ರಾರಂಭದಲ್ಲಿ ಕಾಲೇಜು ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟರು.

ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಈ ವರೆಗೆ ೧೦೨ ಅನ್ನದಾಸೋಹ ಮತ್ತು ಹಲವಾರ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಮಾಡಿರುವ ಬಗ್ಗೆ ತಿಳಿಸಿದರು.

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಈರಣ್ಣ ಕೊಣ್ಣೂರ, ಡಾ. ಅನಿಲ ಪಾಟೀಲ, ಶಿವಾನಂದ ಗಾಡವಿ, ಪುಲಕೇಶ ಸೋನವಾಲಕರ, ಮಹಾಂತೇಶ ಹೊಸೂರ, ಸಂಜಯ ಮಂದ್ರೋಳಿ, ಸಂದೀಪ ಸೋನವಾಲಕರ, ಶಿವಬೋಧ ಯರಝರವಿ, ಶ್ರೀಶೈಲ ಲೋಕನ್ನವರ, ಸುರೇಶ ನಾವಿ, ಪ್ರಮೋದ ಪಾಟೀಲ, ರಾಜಕುಮಾರ ವಾಲಿ, ಅಪ್ಪಣ್ಣ ಬಡಿಗೇರ, ಡಾ. ಪ್ರಕಾಶ ನಿಡಗುಂದಿ, ಸಂಗಮೇಶ ಕೌಜಲಗಿ, ಡಾ. ತಿಮ್ಮಣ್ಣ ಗಿರಡ್ಡಿ, ಶಿವಬಸು ಈಟಿ, ಡಾ. ಯಲ್ಲಾಲಿಂಗ ಮುಳವಾಡ, ವೆಂಕಟೇಶ ಪಾಟೀಲ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ರವಿ ಕಂಕಣವಾಡಿ, ಡಾ. ಲಕ್ಷö್ಮಣ ಕಂಕಣವಾಡಿ, ಮಲ್ಲಿಕಾರ್ಜುನ ಸಸಾಲಟ್ಟಿ ಇದ್ದರು.

ಗೋಪಾಲ ದರೂರ ಪ್ರಾರ್ಥಿಸಿದರು, ಡಾ. ಅನಿಲ ಪಾಟೀಲ ಪರಿಚಯಿಸಿದರು, ಈರಣ್ಣ ಕೊಣ್ಣೂರ ಸ್ವಾಗತಿಸಿದರು, ಶಿವಾನಂದ ಕಿತ್ತೂರ, ಮಹಾವೀರ ಸಲ್ಲಾಗೋಳ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group