ಬೀದರ: 1972 ರಿಂದ ಬೀದರ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂದು ಶಶಿ ಪಾಟೀಲ ಅವರು ಈಗಿನಿಂದಲೇ ಫೀಲ್ಡಿಗೆ ಇಳಿದಿದ್ದು ಗಡಿ ಜಿಲ್ಲೆ ಬೀದರ ನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷೆ ಯಿಂದ ಗಿಫ್ಟ್ ರಾಜಕೀಯ ಆರಂಭವಾಗಿದೆ.
ಬೀದರ್ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷೆ ಹೊಂದಿದ್ದ ಶಶಿ ಪಾಟೀಲ ಇವಾಗಿನಿಂದಲೇ ಮತದಾರರಿಗೆ ಗಡಿಯಾರ ಮತ್ತು ಕ್ಯಾಲೆಂಡರ್ ನೀಡುತ್ತಿರುವುದು. ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆದರೆ ಇದೇ ಸಂದರ್ಭದಲ್ಲಿ ವಿಪರ್ಯಾಸಕರ ಘಟನೆಯೊಂದು ನಡೆದಿದ್ದು ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ವೇದಿಕೆ ಮೇಲೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೀದರನ ಗಣೇಶ ಮೈದಾನದಲ್ಲಿ ಟಿಕೆಟ್ ಆಕಾಂಕ್ಷೆ ಹೊಂದಿದ್ದ ಶಶಿ ಪಾಟೀಲ ಹೂವು ಗುಚ್ಛ ನೀಡಲು ಬಂದಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಹೂ ಗುಚ್ಛವನ್ನು ಕೆಳಗೆ ಎಸೆದರು ಅಂದಿನಿಂದ ಬೀದರ ಜಿಲ್ಲಾದ್ಯಂತ ಶಶಿ ಪಾಟೀಲ ಚರ್ಚೆಯಲ್ಲಿ ಇದ್ದಾರೆನ್ನಬಹುದು
ಈ ಸಂದರ್ಭದಲ್ಲಿ ಮಾತನಾಡಿದ ಅವರು, 1972 ರಿಂದ ಬೀದರ ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ರಿಗೆ ಟಿಕೆಟ್ ನೀಡುತ್ತ ಬಂದಿದೆ. ಈ ಸಲ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುತ್ತಾರೆ, ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಲ್ಲ ಎಂದು ನಾ ಭಾವಿಸಿದ್ದೆ. ಒಂದು ವೇಳೆ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಲಿಲ್ಲ ಅಂದರೆ ದೊಡ್ಡ ಅನಾಹುತ ಆಗುತ್ತದೆ ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರೆ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.
ವರದಿ: ನಂದಕುಮಾರ ಕರಂಜೆ, ಬೀದರ