- Advertisement -
ಬೆಳಗಾವಿ – ನಾಡಿನ ಎಲ್ಲ ಪತ್ರಿಕಾ ಮಾಧ್ಯಮದವರು, ಕರ್ನಾಟಕದ ಜನ ಸಾಮಾನ್ಯರು ತಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡ ಅಂಕಿಗಳನ್ನೇ ಬಳಸಲು ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಸುರೇಶ ದೇಸಾಯಿ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಅಂಕಿಗಳು ಕನ್ನಡ ತಾಯಿಯ ಕಣ್ಣುಗಳು ಎಂದು ಕರೆದಿರುವ ಅವರು, ಎಲ್ಲ ಪತ್ರಿಕೆಗಳಲ್ಲಿ ಇಂಗ್ಲೀಷ್ ಅಂಕಿಗಳು ರಾರಾಜಿಸುತ್ತಿವೆ. ಎಲ್ಲಾ ಪತ್ರಿಕಾ ಮಾಧ್ಯಮದವರು ಕನ್ನಡ ಅಂಕಿಗಳನ್ನೇ ಮರೆತಿದ್ದಾರೆ. ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಅಂಕಿಗಳನ್ನು ಬಳಸಬೇಕು. ನೆರೆ ರಾಜ್ಯಗಳನ್ನಾದರೂ ನಾವು ನೋಡಿ ಕಲಿಯಬೇಕು ಎಂದಿದ್ದಾರೆ.
ಗಣಕ ಯಂತ್ರದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ಅಂಕಿಗಳು ಇವೆ. ಆದರೆ ನಮ್ಮ ಕನ್ನಡಿಗರಿಗೆ ಅಸಡ್ಡೆಯೋ, ಹಿಂಜರಿಕೆಯೋ ಅಥವಾ ಬೇರೆ ಏನಾದರೂ ಕಾರಣವೋ ಕನ್ನಡ ಅಂಕಿ ಬಳಸುತ್ತಿಲ್ಲ. ಇದು ನಿಲ್ಲಬೇಕು ಎಲ್ಲರೂ ಕನ್ನಡ ಅಂಕಿಗಳನ್ನು ಬಳಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.