ಬೆಳಗಾವಿ; 2032 ರ ಹೊತ್ತಿಗೆ 49 ಸಾವಿರ ದೇಶೀಯ ಗ್ಯಾಸ್ ಸಂಪರ್ಕ

Must Read

ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ 31.10.2023 ರಂತೆ ಪೈಪ್‍ಲೈನ್‍ಗಳ ಮೂಲಕ 28421 (ಪಿಎನ್‍ಜಿ) ನ್ಯಾಚುರಲ್ ಗ್ಯಾಸ್ (ದೇಶೀಯ) ಸಂಪರ್ಕವನ್ನು ಒದಗಿಸಲಾಗಿದೆ ಮತ್ತು 2032ರ ಹೊತ್ತಿಗೆ 49193 ಪ್ರಸ್ತಾವಿತ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯದ ರಾಜ್ಯ ಸಚಿವ ರಾಮೇಶ್ವರ ತೇಲಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯಸಭೆಯ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೈಪ್‍ಲೈನ್‍ಗಳ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಳವೆ ಮಾರ್ಗಗಳ ಪೈಪಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಮಾಡುವದು ನಗರ ಭಾಗದ ಅಭಿವೃದ್ಧಿಗೆ ಪೂರಕವಾದ ಭಾಗವಾಗಿದೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಂತ್ರಣದಂತಹ ಇತರೆ ಮಂಡಳಿಗಳು ಸಹ ಇದೇ ವಿಧಾನಗಳನ್ನು ಅನುಸರಿಸುತ್ತಿವೆ. 

11ಡಿ ಸುತ್ತಿನ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಂಡ ಬಳಿಕ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಸುಮಾರು  98% ಜನಸಂಖ್ಯೆಯನ್ನು ಒಳಗೊಂಡಿರುವ 300 ಭೌಗೋಳಿಕ ಪ್ರದೇಶಗಳಲ್ಲಿ ಈ ಪೈಪಲೈನ್ ಅನಿಲ ಪೂರೈಕೆಯನ್ನು ಹಂಚಿಕೆ ಮಾಡಿದೆ ಮತ್ತು  ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್‍ವರ್ಕ್‍ನ ಅಭಿವೃದ್ಧಿಗಾಗಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಒಟ್ಟು 630 ಜಿಲ್ಲೆಗಳ 88% ಭೌಗೋಳಿಕ ಭಾಗದಲ್ಲಿ  ಪೈಪಲೈನ್ ಹಂಚಿಕೆ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಪೈಪ್‍ಲೈನ್‍ಗಳ ಮೂಲಕ 415034 (ಪಿಎನ್‍ಜಿ) ನ್ಯಾಚುರಲ್ ಗ್ಯಾಸ್ (ದೇಶೀಯ) ಸಂಪರ್ಕವನ್ನು ಒದಗಿಸಲಾಗಿದೆ ಮತ್ತು 2032ರ ಹೊತ್ತಿಗೆ 9239529 ಪ್ರಸ್ತಾವಿತ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದರು.

Latest News

ಕಾಂಗ್ರೆಸ್ ಶಾಸಕರ ಮಾತುಗಳು ಹೇಸಿಗೆ ತರಿಸುತ್ತವೆ – ಭಗವಂತ ಖೂಬಾ

ಬೀದರ - ಪ್ರಸಕ್ತ ಮುಖ್ಯಮಂತ್ರಿ ಗಳು, ಮಂತ್ರಿಗಳು, ಶಾಸಕರು ಸದನದಲ್ಲಿ ಆಡುವ ಭಾಷೆ ಹೇಸಿಗೆ ತರುವಂತಿದೆ. ನನ್ನ ರಾಜಕೀಯ ಜೀವನದಲ್ಲಿ ಇಂಥಾ ಭಾಷೆಯನ್ನು ನೋಡಿಲ್ಲ. ಒಬ್ಬ...

More Articles Like This

error: Content is protected !!
Join WhatsApp Group