ಫೆಬ್ರುವರಿ 6 ರಂದು ಬೆಳಗಾವಿ ಜಿಲ್ಲಾ ಕಸಾಪ ಧ್ವಜ ಹಸ್ತಾಂತರ ಕಾರ‍್ಯಕ್ರಮ

Must Read

ಬೆಳಗಾವಿ: ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯಕಾರಿ ಸಮಿತಿಗೆ ಧ್ವಜ ಹಸ್ತಾಂತರ ಕಾರ‍್ಯಕ್ರವನ್ನು ರವಿವಾರ ದಿನಾಂಕ 6 ರಂದು ಮಧ್ಯಾಹ್ನ 3 ಘಂಟೆಗೆ ನಗರದ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ‍್ಯಕ್ರಮದ ದಿವ್ಯಸಾನಿಧ್ಯವನ್ನು ಗುರುಶಾಂತೇಶ್ವರ ಹಿರೇಮಠ ಹುಕ್ಕೇರಿ-ಬೆಳಗಾವಿಯ ಪೂಜ್ಯ ಶ್ರೀ.ಷ.ಬ್ರ..ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು ಕೆ.ಎಲ್.ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಶ್ರೀಮತಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಬಸವೇಶ್ವರ ಗವಿಮಠ, ಡಾ. ಬಸವರಾಜ ಜಗಜಂಪಿ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಗೋಕಾಕನ ಹಿರಿಯ ಸಾಹಿತಿ ಪ್ರೋ.ಚಂದ್ರಶೇಖರ ಅಕ್ಕಿ, ಹಿರಿಯ ಸಾಹಿತಿ ಪತ್ರಕರ್ತ ಡಾ.ಸರಜೂ ಕಾಟ್ಕರ, ಅಥಣಿಯ ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರೆ, ಸವದತ್ತಿಯ ಹಿರಿಯ ಸಾಹಿತಿ ಬಿ.ವಿ.ನರಗುಂದ, ಬೆಳಗಾವಿಯ ಹಿರಿಯ ಸಾಹಿತಿ ಡಾ.ಎಸ್.ಎಸ್.ಅಂಗಡಿ, ಸಂಕೇಶ್ವರದ ಹಿರಿಯ ಸಾಹಿತಿ ಪ್ರೊ. ಎಲ್. ವಿ. ಪಾಟೀಲ, ಹಾರೂಗೇರಿಯ ಹಿರಿಯ ಸಾಹಿತಿ ವಿ.ಎಸ್.ಮಾಳಿ, ಬೆಳಗಾವಿಯ ಹಿರಿಯ ಸಾಹಿತಿಗಳಾದ ಸ.ರಾ.ಸುಳಕೂಡೆ, ಡಾ.ರಾಮಕೃಷ್ಣ ಮರಾಠೆ, ಶ್ರೀಮತಿ ರಂಜನಾ ನಾಯಕ, ಡಾ.ಹೆಚ್.ಆಯ್. ತಿಮ್ಮಾಪೂರ, ಡಾ.ಸ್ಮೀತಾ ಸುರೇಬಾನಕರ, ಖಾನಾಪೂರದ ಹಿರಿಯ ಸಾಹಿತಿ ಡಾ.ಹೆಚ್.ಬಿ.ಕೋಲಕಾರ, ಮೂಡಲಗಿಯ ಹಿರಿಯ ಸಾಹಿತಿ ಬಾಲಶೇಖರ ಬಂದಿ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಶೈಲಜಾ ಬಿಂಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲೆಯ ಎಲ್ಲಾ ಕಾರ‍್ಯಕಾರಿ ಸಮಿತಿ ಸದಸ್ಯರುಗಳು , ಸಾಹಿತಿಗಳು, ಕಲಾವಿದರು ಹಾಗೂ ಕನ್ನಡ ಪ್ರೇಮಿಗಳು ಈ ಕಾರ‍್ಯಕ್ರಮದಲ್ಲಿ ತಪ್ಪದೇ ಬಾಗವಹಿಸಿ ಕಾರ‍್ಯಕ್ರಮ ಯಶಸ್ವಿಗೊಳಿಸಲು ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿ ಕಾರ‍್ಯಕ್ರಮದಲ್ಲಿ ಸಮಸ್ತರು ಮುಖ ಕವಚ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ ನಿಯಮಗಳನ್ನು ಪಾಲಿಸುವಂತೆ ವಿನಂತಿಸಿದ್ದಾರೆ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group