Belgaum News: ವಿದೇಶದಲ್ಲಿ ಉದ್ಯೋಗದ ಹೆಸರಿನಲ್ಲಿ ವಂಚನೆ ಓರ್ವನ ಬಂಧನ

Must Read

ಯುವಕರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಮೋಸ ಮಾಡುತ್ತಿದ್ದ ನಕಲಿ ಜಾಬ್ ಕನ್ಸಲ್ಟನ್ಸಿ ಸೆಂಟರ್ ಮೇಲೆ ಬೆಳಗಾವಿ ನಗರ ಪೊಲೀಸರು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಇಲ್ಲಿನ ಶಾಹುನಗರದ ನಿವಾಸಿ ಇಮ್ತಿಯಾಜ್ ಯರಗಟ್ಟಿ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಉಮರ್ ಫಾರೂಖ್ ಎಂಬಾತ ಪೊಲೀಸರಿಂದ‌ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಇಬ್ಬರು ಆರೋಪಿಗಳು ಬೆಳಗಾವಿಯ ದರ್ಬಾರ್ ಗಲ್ಲಿಯ ಟ್ರಾವೆಲ್ ವರ್ಲ್ಡ್ ಜಾಬ್ ಕನ್ಸಲ್ಟಂಟ್ಸ್ ಹಾಗೂ ಶೆಟ್ಟಿ ಗಲ್ಲಿಯ ಸ್ಟ್ಯಾಂಡರ್ಡ್ ಗ್ರೂಪ್ ಆಫ್ ಎಂಟರ್‌ಪ್ರೈಸ್ ಎಂಬ ಹೆಸರಿನ ಎರಡು ಪ್ರತ್ಯೇಕ ನಕಲಿ ಜಾಬ್ ಕನ್ಸಲ್ಟನ್ಸಿ ಸೆಂಟರ್ ಗಳನ್ನು ನಡೆಸುತ್ತಿದ್ದರು. ಅದಕ್ಕಾಗಿ ಪಾಂಪ್ಲೆಟ್, ವಿಸಿಟಿಂಗ್ ಕಾರ್ಡ್ ತಯಾರಿಸಿ ಅವುಗಳನ್ನು ಹಂಚಿ ಪ್ರಚಾರ ಮಾಡಿ, ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರು.

ಲಾಕ್ ಡೌನ್ ನಲ್ಲಿ ಉದ್ಯೋಗ ಕಳೆದುಕೊಂಡ ಯುವಕರೇ ಮೊದಲ ಟಾರ್ಗೆಟ್ ಆಗಿದ್ದರು. ಈ‌ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಗಳಿಂದ 1.13 ಲಕ್ಷ ಹಣ, 315 ಪಾಸ್‌ಪೋರ್ಟ್, ಐದು ಕಂಪ್ಯೂಟರ್, ಮೂರು ಮೊಬೈಲ್, ಪಾಂಪ್ಲೆಟ್, ಲೀಸ್ ಅಗ್ರಿಮೆಂಟ್ ಸೇರಿ ಹಲವು ದಾಖಲಾತಿ ಜಪ್ತಿ ಮಾಡಿಕೊಂಡಿದ್ದು, ತನಿಖೆ ಮುಂದುವರೆದಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group