Homeಸುದ್ದಿಗಳುಎಸ್ ಪಿ ಎಮ್ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಎಸ್ ಪಿ ಎಮ್ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಬೆಳಗಾವಿ: ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದ ಸರಕಾರಿ ಎಸ್‍ಪಿಎಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಕಲಾ ವಿಭಾಗದಲ್ಲಿ ನೀಲಾಂಬಿಕಾ ಅಂಗಡಿ ಶೇ 95.66 ಪ್ರಥಮ ಸ್ಥಾನ. ಮಲ್ಲವ್ವ ಶಿವನಾಯ್ಕರ ಶೇ 92.83 ದ್ವಿತೀಯ ಹಾಗೂ ಸವಿತಾ ನಾಯ್ಕ ಶೇ 90.16 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ನಾಗರಾಜ ಮೆಳವಂಕಿ ಶೇ 93.13 ಪ್ರಥಮ ಸ್ಥಾನ. ಶ್ವೇತಾ ಮಠದ ಶೇ 93 ತೇಜಸ್ವಿನಿ ಹಟ್ಟಿ ಶೇ 92.57 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. 

ಇದಲ್ಲದೇ ರುದ್ರವ್ವ ಬೈಲವಾಡ ಮತ್ತು ಸಹನಾ ಗದಗ ಲೆಕ್ಕಶಾಸ್ತ್ರದಲ್ಲಿ 100 ಕ್ಕೆ 100ರಷ್ಟು ಅಂಕ ಗಳಿಸಿದ್ದಾರೆ. ಅಂತೆಯೇ ನೀಲಾಂಬಿಕಾ ಅಂಗಡಿ ಸಮಾಜಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾಳೆ.

ಅತ್ಯಧಿಕ ಅಂಕ ಗಳಿಸಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜು ಅಭಿವೃದ್ಧಿ ಸಮೀತಿಯ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group