ಮೂಡಲಗಿ: ಲಯನ್ಸ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿ ಶೈಕ್ಷಣಿಕ ವಲಯದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಮತ್ತು ಎಂಜಿನೀಯರ್ ದಿನಾಚರಣೆ ಅಂಗವಾಗಿ ಉತ್ತಮ ಎಂಜಿನೀಯರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸ್ಥಳೀಯ ಕುರುಹಿನಶೆಟ್ಟಿ ಅರ್ಬನ ಕೋ.ಆಪ್ ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶಾಲ ಶೀಲವಂತ ಅಧ್ಯಕ್ಷತೆಯಲ್ಲಿ ಜರುಗಿತು.
ಹೊನಕುಪ್ಪಿ ವೈ.ಎಫ್. ಬನಾಜ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ ಪೂಜೇರ, ಬಳೋಬಾಳದ ಬೆಳವಿ ತೋಟದ ಸರ್ಕಾರಿ ಹಿರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಹಾದೇವಿ ಮೋರೆ, ನಲ್ಲಾನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಲ್ಲಪ್ಪ ಪೂಜೇರಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಜಮಖಂಡಿಯ ಜಿಲ್ಲಾ ಪಂಚಾಯ್ತಿ ಗ್ರಾಮೀಣ ನೀರು ಸರಬುರಾಜು ವಿಭಾಗದ ಎಂಜಿನೀಯರ್ ಸಿಕಂದರ ಬಾಗವಾನ ಅವರಿಗೆ ‘ಉತ್ತಮ ಎಂಜಿನೀಯರ್’ ಪ್ರಶಸ್ತಿ ನೀಡಿ ಗೌರವಿಸಿದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಕಳೆದ ೧೦ ವರ್ಷಗಳಿಂದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಿರುವೆವು ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಿರೀಶ ಆಸಂಗಿ, ಖಜಾಂಚಿ ಡಾ. ಪ್ರಶಾಂತ ಬಾಬಣ್ಣವರ ವೇದಿಕೆಯಲ್ಲಿದ್ದರು.
ಕೃಷ್ಣಾ ಕೆಂಪಸತ್ತಿ, ಡಾ. ಯಲ್ಲಾಲಿಂಗ ಮುಳವಾಡ, ಶಿವಬೋಧ ಯರಝರ್ವಿ, ಸಂಜಯ ಮೋಕಾಶಿ, ಸುರೇಶ ನಾವಿ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ, ಡಾ. ಸಂಜಯ ಶಿಂಧಿಹಟ್ಟಿ, ಪ್ರಮೋದ ಪಾಟೀಲ, ಅಪ್ಪಣ್ಣ ಬಡಿಗೇರ, ನಲ್ಲಾನಟ್ಟಿ ಸಿಅರ್‌ಪಿ ಜಗದೀಶ ಕೊಲ್ಲಾರ, ಹಳ್ಳೂರ ಸಿಆರ್‌ಪಿ ಎನ್.ಜಿ. ಹೆಬ್ಬಳ್ಳಿ, ಮೂಡಲಗಿ ಸಿಆರ್‌ಪಿ ಎಸ್.ಎನ್. ದಬಾಡಿ ಹಾಗೂ ಶಿಕ್ಷಕರು ಇದ್ದರು.
ಶಿವಾನಂದ ಕಿತ್ತೂರ ಸ್ವಾಗತಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು.

