ಭದ್ರಾವತಿ – ಭದ್ರಾವತಿ ತಾಲ್ಲೂಕು ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ಏಪ್ರಿಲ್ ೧೬ ರಂದು ಭಾನುವಾರ ಶ್ರೀ ರಾಮ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಹೊಸಳ್ಳಿ ದಾಳೇಗೌಡರ ಸರ್ವಾಧ್ಯಕ್ಷತೆಯಲ್ಲಿ ದಿನವಿಡಿ ಸಡಗರ ಸಂಭ್ರಮದಿಂದ ನಡೆಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಕಸಾಸಾಂ ವೇದಿಕೆ ಅಧ್ಯಕ್ಷರಾದ ಸುಧಾಮಣಿ, ಸುಮತಿ ಕಾರಂತ, ಕಜಾಪ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಮೋಹನ್ ಕುಮಾರ್, ಬಿ. ಎಚ್. ಪ್ರಶಾಂತ ಅನ್ನಪೂರ್ಣ ಸತೀಶ್, ಕಸಾಪ ಕಾರ್ಯದರ್ಶಿಗಳಾದ ಎಚ್. ತಿಮ್ಮಪ್ಪ, ಎಂ. ಇ. ಜಗದೀಶ್, ಕೋಶಾಧ್ಯಕ್ಷರಾದ ಹಿರಿಯೂರು ಪ್ರಸನ್ನ, ನಿಕಟ ಪೂರ್ವ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಕಮಲಾಕರ, ನಾಗೋಜಿರಾವ್, ಭದ್ರಾವತಿ ಗುರು, ವೆಂಕಟೇಶ, ಪ್ರಕಾಶ್, ಹಿರಿಯೂರು ಸಿದ್ದೋಜಿರಾವ್, ಮಂಜುನಾಥ, ಬಸವರಾಜ್, ಕೂಡ್ಲಿಗೆರೆ ಅಧ್ಯಕ್ಷರಾದ ಕೆ. ಎಸ್. ರೇವಪ್ಪ, ಹೊಳೆಹೊನ್ನೂರು ಹೋಬಳಿ ಅಧ್ಯಕ್ಷರಾದ ಎಸ್. ಬಿ. ಸಿದ್ದಪ್ಪ, ವೆಂಕಟೇಶ್, ಎಂ. ಉಮರ್ ಕೋಯಾ, ವೈ. ಎನ್. ಶ್ರೀಧರಗೌಡರು, ಜಿ. ಸುರೇಶಯ್ಯ, ಹೇಮಾವತಿ ವಿಶ್ವನಾಥ, ಮಾಯಮ್ಮ, ಆಶಾ ಪುಟ್ಟಸ್ವಾಮಿ, ಗಂಗಾನಾಯ್ಕ, ಶೈಲೇಶ್ ಕೋಠಿ, ಭಾಗ್ಯಮ್ಮ, ಜಂಬುಸ್ವಾಮಿ, ಎಂ. ಅನಿಲ್ ಕುಮಾರ್ ಸೇರಿದಂತೆ ಹಲವಾರು ಮನಸ್ಸುಗಳು ಸಮ್ಮೇಳನ ಯಶಸ್ವಿಯಾಗಲು ಶ್ರಮಿಸಿದ್ದಾರೆ.
ಕಾರ್ಯಕ್ರಮ ನಡೆಯಲು ಸಭಾಂಗಣ ಸೇರಿದಂತೆ ಹಲವು ಸಹಕಾರ ನೀಡಿದ ಮಾನ್ಯ ಪ್ರಭಾಕರ್ ಭೀರಯ್ಯ ಮತ್ತು ಅವರ ಸಮಿತಿಗೆ, ಸಂತೃಪ್ತ ಊಟ, ತಿಂಡಿ ವ್ಯವಸ್ಥೆ ಮಾಡಿದ ಮಾನ್ಯ ಮಹೇಶ್ ಕುಮಾರ್ ಅವರಿಗೆ, ನೆರವಾದ ಎಲ್ಲಾ ಕನ್ನಡ ಮನಸ್ಸುಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆಗಳು ಮತ್ತು ಕೃತಜ್ಞತೆ ಸಲ್ಲಿಸುತ್ತದೆ.
ಡಿ. ಮಂಜುನಾಥ, ಶಿವಮೊಗ್ಗ