Homeಸುದ್ದಿಗಳುಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ

ಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ

ಮೂಡಲಗಿ: ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ಜರುಗಿದ ಭಜನಾ ಕಾರ್ಯಕ್ರಮದಲ್ಲಿ ಪ್ರತಿದಿನ ಪಾಲ್ಗೊಂಡ ಮೂರು ವರ್ಷದ ಅಮೀತ್ ಶಿವಾನಂದ ಮಡಿವಾಳರ ಎಂಬ ಬಾಲಕನನ್ನು ಭಜನಾ ಮಂಡಳಿಯವರು ಸತ್ಕರಿಸಿ ಗೌರವಿಸಿದರು.

ಮುನ್ಯಾಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ದಿವಸ ಮುಂಜಾನೆ ಮತ್ತು ರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು. ಪ್ರತಿದಿನ ಬೆಳಗಿನ ಜಾವ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಿಂದ ಗ್ರಾಮದ ವಿವಿಧ ಗಲ್ಲಿಯ ಮುಖಾಂತ ಮರಳಿ ದೇವಸ್ಥಾನಕ್ಕೆ ತಲುಪುವ ಓಂಕಾರ ಭಜನೆಯಲ್ಲಿ ಮೂರು ವರ್ಷದ ಬಾಲಕ ಅಮೀತ್ ಶಿವಾನಂದ ಮಡಿವಾಳರ ಪ್ರತಿ ದಿನ ಭಜನಾ ಮಂಡಳಿಯವರೊಂದಿಗೆ ಕೂಡಿ ದಮಡಿ ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಭಜನಾ ಮಂಡಳಿಯವರು ಮೂರು ವರ್ಷದ ಬಾಲಕ ಅಮೀತನ್ನು ಭಜನಾ ಸಮಾರೋಪ ದಿನದಂದು ಸತ್ಕರಿಸಿ ಗೌರವಿಸಿದರು.

ಈ ಸಮಯದಲ್ಲಿ ಭಜನಾ ಕಲಾವಿದರಾದ ಅರ್ಜುನ್ ಚಿವಟಗುಂಡಿ, ಸಂಗಪ್ಪ ಮುರಗೋಡ, ಹಣಮಂತ ಸನದಿ, ಪಾಂಡಪ್ಪ ಢವಳೇಶ್ವರ, ಸದಾಶಿವ ಗೋಡಿಗೌಡ್ರ, ವಿಠ್ಠಲ ಮಡಿವಾಳರ, ಬಾಳಪ್ಪ ನಾಯಿಕ, ಸಿದ್ದಾರೂಢ ಬಡಿಗೇರ, ಉಮೇಶ ಕೌಜಲಗಿ, ಲಕ್ಷ್ಮೀ ಮಡಿವಾಳರ, ಕಾಳವ್ವ ಮಡಿವಾಳರ, ಮಹಾದೇವಿ ಬಾಲಾಮಸಿ, ವಿನಾಯಕ ಮಡಿವಾಳರ ಮತ್ತಿತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group