ಸಿಂದಗಿ: ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಕೊಡ ಮಾಡುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪದ್ಮವಿಭೂಷಣ ಭಾರತೀಯ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಅವರಿಗೆ ಡಿ.೨೪ರಂದು ಸಾಯಂಕಾಲ ೪ಗಂಟೆಗೆ ಸಾರಂಗಮಠದಲ್ಲಿ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ತಿಳಿಸಿದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಸಾರಂಗಮಠ-ಗಚ್ಚಿನಮಠದ ಪೀಠಾಧಿಪತಿಗಳಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳಲಿದ್ದಾರೆ. ಸಮ್ಮುಖವನ್ನು ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸುವರು. ಅಧ್ಯಕ್ಷತೆಯನ್ನು ಸಿಂದಗಿ ಶಾಸಕ ಅಶೋಕ ಎಂ.ಮನಗೂಳಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರಿನ ಸಿಎಫ್‌ಟಿಆರ್‌ಐ ನಿವೃತ್ತ ಉಪನಿರ್ದೇಶಕ ಪರಮಹಂಸ ವಿ.ಸಾಲಿಮಠ ಇರಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಪ ಶಾಸಕ ಅರುಣ ಶಹಾಪುರ ಭಾಗವಹಿಸಲಿದ್ದಾರೆ.
ಈ ಪ್ರಶಸ್ತಿಯನ್ನು ಭಾರತದ ಟಾಪ್‌ಟೆನ್ ಅಂತರ್‌ರಾಷ್ಟ್ರೀಯ ಪೈನ್‌ಆರ್ಟ್ ಕಲಾವಿದ ಈರಣ್ಣ ಗೋಲಪ್ಪ ರುಕುಂಪುರ ಹಾಗೂ ಪತ್ನಿ ಪೂಜಾ ಪ್ರಶಸ್ತಿ ದಾನಿಗಳಾಗಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಖ್ಯಾತ ಖಗೋಳಶಾಸ್ತ್ರಜ್ಞ ಭಾಸ್ಕರಾಚಾರ್ಯ-೨ ಅವರ ಸ್ಮರಣೆಗಾಗಿ ಸಾರಂಗಮಠದ ಲಿಂ.ಚೆನ್ನವೀರ ಮಹಾಸ್ವಾಮಿಗಳ ಜಯಂತ್ಯೋತ್ಸವ ನಿಮಿತ್ತವಾಗಿ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯು ೧ ಲಕ್ಷ ರೂ.ನಗದು, ಪ್ರಶಸ್ತಿ ಹಾಗೂ ಸನ್ಮಾನ ಒಳಗೊಂಡಿದೆ.
ಇಲ್ಲಿಯವರೆಗೆ ದೇಶದ ಖ್ಯಾತ ವಿಜ್ಞಾನಿಗಳಾದ ಸಿ.ಎನ್.ಆರ್.ರಾವ್, ಯು.ಆರ್.ರಾವ್, ಡಾ.ಎ.ಎಸ್.ಪಾಟೀಲ, ಕೆ.ಕಸ್ತೂರಿರಂಗನ್, ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ, ಕೃಷಿ ತಜ್ಞ, ಭಾರತೀಯ ಸಂಶೋಧನಾ ಮಂಡಳಿಯ ಮಾಜಿ ಪ್ರಧಾನ ನಿರ್ದೇಶಕ, ಪ್ರದ್ಮಶ್ರೀ ಸುಬ್ಬಯ್ಯ ಅಯ್ಯಪ್ಪನ್ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಬಾರಿ ಪದ್ಮವಿಭೂಷಣ, ಭಾರತೀಯ ಪರಮಾಣು ವಿಜ್ಞಾನಿ ಮತ್ತು ಭಾರತ ಅಣುಶಕ್ತಿ ಆಯೋಗದ ಅಧ್ಯಕ್ಷರು, ಮುಂಬೈನ ಬಿಎಆರ್‌ಸಿ ನಿರ್ದೇಶಕ ಡಾ.ಅನೀಲ ಕಾಕೋಡ್ಕರ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು
ಸಮಾರಂಭದಲ್ಲಿ ಡಾ.ಪರಮಹಂಸ ಸಾಲಿಮಠ, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪೂರ ಅವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಶೋಕ ವಾರದ, ಗಂಗಾಧರ ಜೋಗೂರ, ಅಶೋಕ ಮಸಳಿ ಡಾ.ಬಿ.ಜಿ.ಮಠ ಸೇರಿದಂತೆ ಇತರರು ಇದ್ದರು.

