ಭವಾನಿ ತಾಯಿಯ ಪಲ್ಲಕ್ಕಿ ಉತ್ಸವ; ಕೊಟಗ್ಯಾಳ ಗ್ರಾಮದಲ್ಲಿ ಹಬ್ಬದ ಸಂಭ್ರಮದ ವಾತಾವರಣ

Must Read

ಬೀದರ್ – ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟಗ್ಯಾಳ ಗ್ರಾಮದಲ್ಲಿ 17ನೇ ನವರಾತ್ರಿ ಮಹೋತ್ಸವ ಕಾರ್ಯಕ್ರಮ ಇಂದು ಸಂಭ್ರಮದಿಂದ ನಡೆಯಿತು.

ಕೊಟಗ್ಯಾಳ ಗ್ರಾಮದ ಭವಾನಿ ತಾಯಿಯ ಇತಿಹಾಸ ಪುಟ ತಿರುಚಿ ನೋಡಿದಾಗ ಮಹಾರಾಷ್ಟ್ರ ತುಳಜಾಪೂರ ಭವಾನಿ ಮೂರ್ತಿ ಮತ್ತು ಕೊಟಗ್ಯಾಳ ಗ್ರಾಮದ ಭವಾನಿ ತಾಯಿಯ ಮೂರ್ತಿ ಒಂದೇ ಇರಬಹುದು ಎಂದು ಕೊಟಗ್ಯಾಳ ಗ್ರಾಮದ ಹಿರಿಯರು ಹೇಳುತ್ತಾರೆ.

ಕೊಟಗ್ಯಾಳ ಗ್ರಾಮದ ಭವಾನಿ ತಾಯಿಯ ಪವಾಡ ರಹಸ್ಯವಾಗಿದ್ದು ಭಕ್ತರ ಸಂಖ್ಯೆ ವರ್ಷಕ್ಕೆ ವರ್ಷಕ್ಕೆ ಹೆಚ್ಚಾಗುತ್ತದೆ ಎಂದರೆ ಭವಾನಿ ತಾಯಿ ಆಶಿರ್ವಾದ ಸಿಗುತ್ತದೆ ಭಕ್ತರಿಗೆ ಎಂದರ್ಥ. ತಾಯಿಯ ಆಶಿರ್ವಾದ ಪಡೆಯಲು ಹುಣ್ಣಿಮೆ ದಿವಸ ತಾಯಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ ಪಲ್ಲಕ್ಕಿ ಉತ್ಸವಕ್ಕೆ ರಾಜ್ಯ ಮತ್ತು ಹೊರ ರಾಜ್ಯದ ಭವಾನಿ ತಾಯಿಯ ಭಕ್ತರ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮ ಪಡುತ್ತಾರೆ. ಕೊಟಗ್ಯಾಳ ಗ್ರಾಮದ ಪ್ರಮುಖ ರಸ್ತೆ ಮೂಲಕ ಪಲ್ಲಕ್ಕಿ ಮೆರವಣಿಗೆ ಮಾಡಲಾಗುತ್ತದೆ.

ಪಲ್ಲಕ್ಕಿ ಉತ್ಸವದಲ್ಲಿ ನೃತ್ಯ ಸಂಗೀತ ಹಾಡು ಕುಣಿತ ಮತ್ತು ಚಿಕ್ಕ ಮಕ್ಕಳು ಮತ್ತು ಹೆಣ್ಣು ಮಕ್ಕಳು ಕುಣಿಯುತ್ತ ಗ್ರಾಮದ ಪ್ರಮುಖ ರಸ್ತೆ ಮೂಲಕ ಮೆರವಣಿಗೆ ಮಾಡಲಾಗುತ್ತದೆ. ಈ ಉತ್ಸವ ಸಾಯಂಕಾಲ ಏಳು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆ ಒಳಗೆ ಪಲ್ಲಕ್ಕಿ ಉತ್ಸವ ಮುಗಿಯುತ್ತದೆ ಎಂದು ಕೊಟಗ್ಯಾಳ ಗ್ರಾಮದ ಜನರು ಹೇಳಿಕೆ ನೀಡಿದರು.

ಧನರಾಜ ಪೂಜಾರಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕೂಡ್ಲಿ ಗ್ರಾಮದ ಒಂದೇ ಕುಟುಂಬದ ಸೂರ್ಯಕಾಂತ ಪಂಚಾಳ, ಸುನೀಲ ಪಾಂಚಾಳ, ವಾಸಂತಿ ಪಂಚಾಳ, ರಾಘವೇಂದ್ರ ಪಂಚಾಳ, ದಯಾನಂದ ಪಂಚಾಳ ಸಂಗೀತ ಸೇವೆ ಒದಗಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group