ಮೂಡಲಗಿ – ಈ ನಾಡಿನಲ್ಲಿ ಬಹುತೇಕ ಲೇಖಕರು ಕಾದಂಬರಿಗಳನ್ನು ಬರೆದಿದ್ದಾರೆ ಆದ್ರೆ ಬೈರಪ್ಪನವರ ಕಾದಂಬರಿಗಳನ್ನು ಓದುತ್ತಾ ಹೋದ್ರೆ ಈ ಮನುಷ್ಯ ಕಾದಂಬರಿ ಬರೆಯಲೆಂದೆ ಹುಟ್ಟಿದ್ದಾರೇನೊ ಎನ್ನುವಷ್ಟು ಅವರ ಬರವಣಿಗೆ ಸೊಗಸಾಗಿದೆ ಓದುಗರನ್ನು ಬಹುಬೇಗ ಹಿಡಿದಿಟ್ಟಕೊಳ್ಳುವಂಥ ಅವರ ಬರವಣಿಗೆ ಶೈಲಿ ಬಹಳ ಅದ್ಭುತವಾದ್ದು ಇಂತಹ ಮಹಾನ್ ಕಾದಂಬರಿಕಾರ ಈ ನಾಡಿನಲ್ಲಿ ಜನಿಸಿದ್ದು ಕನ್ನಡಿಗರ ಪುಣ್ಯ ಎಂದು ಯುವ ಲೇಖಕ ಶಿವಲಿಂಗ ದಾನನ್ನವರ ಹೇಳಿದರು.
ಅವರು ತಾಲೂಕಿನ ಖಾನಟ್ಟಿ ಗ್ರಾಮದ ಸಿರಿ ಸಂಗಮ ಸಮಿತಿ ಮತ್ತು ಶ್ರೀ ಸಾಯಿ ಸಿದ್ಧೇಶ್ವರ ಪೌಂಡೇಶನ್ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಿರಿ ಸಂಗಮ ಕಾರ್ಯಾಲಯದಲ್ಲಿ ಜರುಗಿದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಕನ್ನಡದ ಶ್ರೇಷ್ಠ ಕಾದಂಬರಿಕಾರನನ್ನು ಕಳೆದುಕೊಂಡು ಈ ನಾಡಿಗೆ ದೊಡ್ಡ ನಷ್ಟವಾಗಿದೆ ಕನ್ನಡ ಸ್ವಾರಸ್ವತ ಲೋಕದ ನಡುಗಂಬವೊಂದು ಮುರಿದಂತಾಗಿದೆ ಎಂದು ಹೇಳಿದರು
ಖಾನಟ್ಟಿಯ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಲಿಂಗ ನಿಂಗನೂರ ಮಾತನಾಡಿ, ಈಗಿನ ಮುಂದುವರೆದ ಕಾಲದಲ್ಲೂ ಬೈರಪ್ಪನವರಂತಹ ಕಾದಂಬರಿಕಾರರು ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವರು ಇಂತಹ ಅಪರೂಪದ ಬರಹಗಾರನ ಪುಸ್ತಕಗಳನ್ನು ಇಂದಿನ ಯುವ ಜನಾಂಗ ಓದಿ ಬೈರಪ್ಪನವರ ವಿಚಾರಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕೆಂದು ಹೇಳಿದರು.
ಇದೆ ಸಂದರ್ಭದಲ್ಲಿ ಖಾನಟ್ಟಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋಪಾಲ ನಿಂಗನೂರ, ಸತ್ಯಪ್ಪ ಡೋಣಿ ಶಂಕರ ಸಣಸಟ್ಟಿ ಇದ್ದರು. ಅಭಿಷೇಕ್ ಬಳಿಗಾರ ನಿರೂಪಿಸಿ ವಂದಿಸಿದರು.