Bidar: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಭೀಕರವಾಗಿ ಹತ್ಯೆಗೈದ ಪತಿ

Must Read

ಬೀದರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯು ಪತ್ನಿಯನ್ನೇ ಭೀಕರವಾಗಿ ಕೊಲೆಗೈದ ಘಟನೆ ಬೀದರ್ ತಾಲೂಕಿನ ಔರಾದ್ ಸಿರ್ಸಿ‌ ಗ್ರಾಮದಲ್ಲಿ‌ ನಡೆದಿದೆ.

ಲಕ್ಷ್ಮೀ (35) ಕೊಲೆಯಾದ ಮೃತ ದುರ್ದೈವಿ. ಪತ್ನಿಯನ್ನು ಭರ್ಬರವಾಗಿ ಕೊಲೆ ಮಾಡಿದ ಪತಿ ಅನಿಲಕುಮಾರ್. 12 ವರ್ಷಗಳ ಹಿಂದೆ ಲಕ್ಷ್ಮೀ ಜೊತೆ ಎರಡನೇ ವಿವಾಹವಾಗಿದ್ದ ಅನಿಲಕುಮಾರ್.

ಮೊದಲ‌ ಪತ್ನಿ ತೀರಿ‌ ಹೋದ‌ ಬಳಿಕ ಲಕ್ಷ್ಮಿ ಜೊತೆ ಎರಡನೇ ವಿವಾಹವಾಗಿದ್ದ. ತವರು‌ ಮನೆಯಿಂದ ವಾಪಸಾದ ಬಳಿಕ ಕ್ಷುಲ್ಲಕ ಕಾರಣಕ್ಕೆ ಆರಂಭವಾಗಿದ್ದ ಗಲಾಟೆ ವಿಕೋಪಕ್ಕೆ ತಿರುಗಿ ಮನೆಯಲ್ಲಿ‌‌ ಇದ್ದ ಮಚ್ಚಿನಿಂದಲೇ ಕೊಚ್ಚಿ ಕೊಂದ ಪತಿ.

ಮೃತಳ ಸಾವಿನಿಂದ ಎರಡು ಹೆಣ್ಣು ಮಕ್ಕಳು ಅನಾಥವಾಗಿವೆ. ಆರೋಪಿ ವಶಕ್ಕೆ ಪಡೆದ ಬಗದಲ್ ಠಾಣಾ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.


ವರದಿ: ನಂದಕುಮಾರ ಕರಂಜೆ,ಬೀದರ

Latest News

ಮನಕ್ಕೆ ಮುದ ನೀಡಿದ ಕಾಮನಬಿಲ್ಲು

ಮೂಡಲಗಿ : ಕಾಮನಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ !ಬಣ್ಣಗಳೇಳನು ತೋರಣ ಮಾಡಿದೆ ಕಂದನ ಕಣ್ಣಿಗೆ ಚೆಂದವನೂಡಿದೆ !ಎಂಬ ಕುವೆಂಪುರವರ ಕವಿತೆಯನ್ನು ನೆನಪಿಸುವಂತೆ ಮೂಡಲಗಿಯಲ್ಲಿ ಮೂಡಣದ ಆಗಸದಲ್ಲಿ ಸುಂದರವಾದ...

More Articles Like This

error: Content is protected !!
Join WhatsApp Group