- Advertisement -
ಬೀದರ – ಜಿಲ್ಲೆಯಲ್ಲಿ ನಿನ್ನೆ ಹುಲಸೂರು ಪಟ್ಟಣದ ರಸ್ತೆ ಬದಿಯಲ್ಲಿ ಹೆಣ್ಣು ಭ್ರೂಣವೊಂದನ್ನು ದುರುಳರು ಎಸೆದು ಹೋಗಿರುವ ಪ್ರಕರಣದ ಹಿಂದೆಯೇ ಇನ್ನೊಂದು ಭ್ರೂಣ ಹತ್ಯೆಯಾಗಿರುವ ಪ್ರಸಂಗ ನಡೆದಿದೆ.
ಒಂದು ದಿನದ ಅಂತರದಲ್ಲಿ ಎರಡು ನವಜಾತ ಶಿಶು ರಸ್ತೆ ಚರಂಡಿಯಲ್ಲಿ ಪತ್ತೆಯಾಗಿದ್ದು ಬೀದರ್ ಜಿಲ್ಲೆಯಾದ್ಯಂತ ಸಾರ್ವಜನಿಕರು ತಲೆ ತಗ್ಗಿಸುವಂತ ಘಟನೆ ಇದಾಗಿದೆ.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಘಟನೆ ನಡೆದಿದ್ದು ನವಜಾತ ಶಿಶುವಿನ ಶವವನ್ನು ಪಾಪಿಗಳು ಬಸವೇಶ್ವರ ವೃತ್ತದ ಹತ್ತಿರವಿರುವ ಚರಂಡಿ ಪಕ್ಕದಲ್ಲಿ ಎಸೆದು ಹೋಗಿದ್ದಾರೆ.
- Advertisement -
ಬೀದರ್ ಜಿಲ್ಲೆಯ ಜನರಿಗೆ ಅಚ್ಚರಿಯ ಜೊತೆ ಆತಂಕವೂ ಮೂಡಿ ಬಂದಿದೆ. ಇಂಥ ಅನಾಗರಿಕತೆಗೆ ಕಾರಣರಾದ ವ್ಯಕ್ತಿಯನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಘಟನೆ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ