- Advertisement -
ಬೀದರ – ಬೀದರ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈವರೆಗೆ ೧೭೨ ಸಾವು ಸಂಭವಿಸಿವೆ ೧೦೪೨ ಪ್ರಕರಣಗಳು ಆಕ್ಟಿವ್ ಆಗಿವೆ ಆದರೂ ಜಿಲ್ಲಾಡಳಿತ ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೆ ಕೊರೋನಾ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಾಗಿ ಕೇಳಿಬರುತ್ತಿದೆ.
ಇಷ್ಟರಲ್ಲಿಯೇ ಉಪಚುನಾವಣೆಯೂ ಜಿಲ್ಲೆಯಲ್ಲಿ ನಡೆಯುತ್ತಿದ್ದು ಯಾವ ಪಕ್ಷದವರೂ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದೆ ಜನರು ರಾಜಾರೋಷವಾಗಿ ತಿರುಗುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು ಮುಂದೆ ದೊಡ್ಡ ಅಪಾಯ ಕಾದಿದೆ ಎಂಬ ಭೀತಿ ಕಾಣುತ್ತಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ