ಬಿಜೆಪಿ ಮೂರನೇ ಬಾರಿಗೆ ಟಿಕೆಟ್ ಪಡೆದ ಹಾಲಿ ಕೆಂದ್ರ ಸಚಿವ ಭಗವಂತ ಖೊಖಾ
ಬೀದರ – ಸ್ಥಳೀಯ ನಾಯಕರ ವಿರೋಧದ ನಡುವೆಯೂ ಭಾರತೀಯ ಜನತಾ ಪಕ್ಷದ ಟಿಕೆಟ್ ಪಡೆದಿದ್ದಾರೆ ಭಗವಂತ ಖೂಖಾ.
ಇದರಿಂದಾಗಿ ಔರಾದ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಹಾಗೂ ಬಸವಕಲ್ಯಾಣ ಕ್ಷೇತ್ರದ ಶರಣು ಸಲಗರ ಅವರಿಗೆ ಭಾರಿ ಮುಖಭಂಗವಾದಂತಾಗಿದೆ.
ಭಗವಂತ ಖೂಬಾ ಅವರಿಗೆ ಟಿಕೆಟ್ ಕೊಡುವುದನ್ನು ಸ್ಥಳೀಯ ಕೆಲವು ಬಿಜೆಪಿ ನಾಯಕರು ವಿರೋಧಿಸಿದ್ದರೆನ್ನಲಾಗಿದೆ.
ಖೂಖಾ ನಡೆದು ಬಂದ ದಾರಿ
- ಬೀದರ್ ಲೋಕಸಭಾ ಕ್ಷೇತ್ರ
- ಬಿಜೆಪಿ ಅಭ್ಯರ್ಥಿ: ಭಗವಂತ ಖೂಬಾ.
- ಆಕಾಂಕ್ಷಿ ಹಿನ್ನೆಲೆ: ಹಾಲಿ ಸಂಸದ ಹಾಗು ಕೇಂದ್ರ ಸಚಿವರು. ಎರಡು ಬಾರಿ ಸಂಸದರು, ಒಂದು ಬಾರಿ ಕೇಂದ್ರ ಸಚಿವರಾಗಿ ಕಾರ್ಯ.
- ಲಿಂಗಾಯತ ನಾಯಕ.
- ಬಿಇ ಮೆಕ್ಯಾನಿಕಲ್, ಸಮಾಜಸೇವೆ.
- ಮೊ.ನಂಬರ್ : 9448115926
2014ರಲ್ಲಿ ಮಾಜಿ ಸಿಎಂ ಎನ್ ಧರ್ಮಸಿಂಗ್ ವಿರುದ್ದ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ವಿರುದ್ದ 92 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿ ಸಂಸತ್ ಪ್ರವೇಶ ಪಡೆದಿದ್ದರು. ಈ ಮೂಲಕ ಮಾಜಿ ಸಿಎಂ ಧರ್ಮಸಿಂಗ್‌ಗೆ ಭಾರಿ ಮುಖಭಂಗ ಆಗಿತ್ತು.
2019ರಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ವಿರುದ್ದ 1,16,834 ಮತಗಳ ಅಂತರದಿಂದ ಗೆಲ್ಲುವ ಮೂಲಕ ಎರಡನೇ ಬಾರಿ ಸಂಸದರಾಗಿ ಸಂಸತ್‌ಗೆ ಪ್ರವೇಶ ಪಡೆದು, ಬೀದರ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದರು.
ಈಗ ಮತ್ತೆ ಮೂರನೆ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿದಿದ್ದು, ಸ್ಥಳೀಯ ನಾಯಕರ ವಿರೋಧದ ನಡುವೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
2019 ರ ಲೋಕಸಭಾ ಚುನಾವಣೆ ಫಲಿತಾಂಶ
- ಭಗವಂತ್ ಖೂಬಾ (BJP)– 585471 (ಗೆಲುವು)
- ಈಶ್ವರ್ ಖಂಡ್ರೆ (INC) – 468637 (ಸೋಲು)
- 116834 ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು.
2014 ರ ಲೋಕಸಭಾ ಚುನಾವಣೆ ಫಲಿತಾಂಶ
- ಭಗವಂತ್ ಖೂಬಾ (BJP): 459290 (ಗೆಲುವು)
- ಎನ್.ಧರ್ಮಸಿಂಗ್ (INC): 367068 (ಸೋಲು.)
- ಅಂತರ -92222
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಹಾಗೂ ಅಲ್ಲಿನ ಶಾಸಕರು)
- ಬೀದರ್: ರಹೀಂ ಖಾನ್ (ಕಾಂಗ್ರೆಸ್.)
- ಬೀದರ್ ದಕ್ಷಿಣ: ಶೈಲೇಂದ್ರ ಬೇಲ್ದಾಳೆ…(ಬಿಜೆಪಿ)
- ಹುಮನಾಬಾದ್: ಸಿದ್ದು ಪಾಟೀಲ್…(ಬಿಜೆಪಿ)
- ಬಸವಕಲ್ಯಾಣ: ಶರಣು ಸಲಗರ್….(ಬಿಜೆಪಿ)
- ಔರಾದ್: ಪ್ರಭು ಚೌಹಾಣ್….(ಬಿಜೆಪಿ)
- ಭಾಲ್ಕಿ: ಈಶ್ವರ ಖಂಡ್ರೆ….(ಕಾಂಗ್ರೆಸ್.)
- ಚಿಂಚೋಳಿ: ಅವಿನಾಶ್ ಜಾಧವ್….(ಬಿಜೆಪಿ)
- ಆಳಂದ: ಬಿ.ಆರ್.ಪಾಟೀಲ್….(ಕಾಂಗ್ರೆಸ್)
ವರದಿ: ನಂದಕುಮಾರ ಕರಂಜೆ, ಬೀದರ