ಬೀದರ – ಔರಾದ ತಾಲ್ಲೂಕಿನ ಸಂತಪುರ ಪೊಲೀಸರಿಂದ ಕಳ್ಳರ ಭರ್ಜರಿ ಬೇಟೆ ನಡೆದಿದ್ದು 592 ಕೆಜಿ ಗಾಂಜಾ ಜಪ್ತಿ ಮಾಡಿ ನಾಲ್ವರ ಬಂಧನ ಮಾಡಿದ್ದಾರೆ.
ಹೈದರಾಬಾದ್ ನಿಂದ ಕಮಲ ನಗರ ಕಡೆ ಹೊರಟಿದ್ದ ಟೆಂಪೋದಲ್ಲಿ ಗಾಂಜಾ ಇರುವ ಬಗ್ಗೆ ಖಚಿತ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದ್ದು ಅಕ್ರಮವಾಗಿ ಸಾಗಿಸುತ್ತಿದ್ದ 592 ಗಾಂಜಾ ಜಪ್ತಿ ಮಾಡಿರುವ ಔರಾದ್ ತಾಲ್ಲೂಕಿನ ಸಂತಪುರ ಠಾಣೆ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಮುಟ್ಟುಗೋಲು ಹಾಕಿಕೊಂಡಿರುವ ಗಾಂಜಾದ ಮೌಲ್ಯ ₹ 59.20 ಲಕ್ಷ ಎಂದು ಅಂದಾಜಿಸಲಾಗಿದೆ.ಬಂಧಿತರನ್ನು ಓಂಕಾರ್ ಹಳೆಂಬೊರೆ ಸಾ ಮುರಾಳ. ಅನಿಲ್ ಕುಮಾರ್ ತಂದೆ ದಶರಥ ಪುಲೆ ಕೊನಮೇಳಕುಂದಾ , ಹಾಜಿಪಾಶಾ ತಂದೆ ರಶೀದ್ ಮಿಯ್ಯಾ ಖುರೇಶಿ ಕಮಲ ನಗರ, ಅಸ್ಲಾಂ ತಂದೆ ಗೌಸೊದ್ದಿನ ಜನ್ನತನಗರ ಭಾಲ್ಕಿ ಬಂಧಿತರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದ್ದು ಈ ವರ್ಷದ ದಾಖಲೆ ಎನಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಿ ಎಲ್ ನಾಗೇಶ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್ ಇಲಾಖೆ ಮೂಲದಿಂದ ಮಾಹಿತಿ ದೊರೆತಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ