ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಇತಿಹಾಸ ಪುಟ ತಿರುವಿ ನೋಡಿದರೆ ಮೊಟ್ಟ ಮೊದಲು ಪಾರ್ಲಿಮೆಂಟ್ ಬಸವಕಲ್ಯಾಣದಲ್ಲಿ ಇದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ತನ್ನ ಭಾಷಣದಲ್ಲಿ ಬಸವಕಲ್ಯಾಣ ಬಸವಣ್ಣನವರು ನೆನಪು ಮಾಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷದ ರಾಜ್ಯದ ನಾಯಕರು ಮಾಡುವ ಕೆಲಸ ಇಡೀ ರಾಜ್ಯ ನೋಡಿ ತಲೆ ತಗ್ಗಿಸಬಹುದು..
ಬಸವಣ್ಣ ಬಡವರ ಮತ್ತು ಸತ್ಯಕ್ಕಾಗಿ ನ್ಯಾಯಕ್ಕಾಗಿ ದುಡಿದ ಬಸವಣ್ಣನವರು ನಡೆದಾಡಿದ ಬಸವಕಲ್ಯಾಣದಲ್ಲಿ ನಡೆದ ಬಾರದ ಆರೋಪ ಪ್ರತಿ ಆರೋಪ ರಾಜ್ಯ ರಾಜಕೀಯ ನಾಯಕರು ಮಾಡಿದ ನೋಡಿದರೆ ಈ ಬಸವಕಲ್ಯಾಣ ಉಪಚುಣಾವಣೆಯಲ್ಲಿ ನಡೆದ ಹೋಗಿದೆ. ಏಪ್ರೀಲ್ 17 ರಂದು ನಡೆಯಲಿರುವ ಮತದಾನಕ್ಕೆ ದಿನಗಣನೆ ಆರಂಭ ಹಿನ್ನಲೆ ಶರಣರ ನಾಡು ಬಸವಕಲ್ಯಾಣದಲ್ಲಿ ಶುರುವಾಗಿದೆ ಬಿಜೆಪಿ ಪಕ್ಷದಿಂದ ಹಣದ ಹೊಳೆ. !.?
ಬಿಜೆಪಿ ಅಭ್ಯರ್ಥಿ ಶರಣು ಸಲಗರರಿಂದ ಹಣ ಹಂಚಿಕೆ..!?ಸಚಿವರು ಇರುವ ಮನೆ ಬಳಿ ಹಣ ಹಂಚಿಕೆಯಾಗುತ್ತಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಆರೋಪ ಆರೋಪ ಮಾಡಿದ್ದಾರೆ.
ಗಂಗಾ ಕಾಲೋನಿಯಲ್ಲಿರುವ ರಾಜು ಮಂಠಾಳಕರ ಮನೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ,ವಸತಿ ವಿ.ಸೋಮಣ್ಣ, ಉಸ್ತುವಾರಿ ಸಚಿವ ಪ್ರಭು ಚಹ್ವಾಣ್ ಉಪಸ್ಥಿತಿಯಲ್ಲಿ ಸಚಿವರು ಇರುವ ಮನೆಯಲ್ಲಿ ಕೋಟಿ ಕೋಟಿ ರೂ. ತಂದಿಟ್ಟಿದ್ದಾರೆಂದು ಗಂಭೀರ ಆರೋಪ ಮಾಡಿದ್ದು, ಚುನಾವಣೆಯಲ್ಲಿ ಹಂಚಲು ಕೋಟಿ ಕೋಟಿ ಈ ಮನೆಯಲ್ಲಿ ತಂದಿಟ್ಟಿದ್ದಾರೆ, ಪ್ರತಿಯೊಬ್ಬ ಮತದಾರರಿಗೆ ೧ ಸಾವಿರ ರೂಪಾಯಿಯಂತೆ ಹಣ ಹಂಚಲು ಕೋಟಿ ಕೋಟಿ ಕೋಟಿ ತಂದಿಟ್ಟಿದ್ದಾರೆಂದು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಆರೋಪಿಸಿದ್ದಾರೆ.
ಇನ್ನೊಂದು ಗಂಭೀರ ಆರೋಪ ಮಾಡಿದ ಮಲ್ಲಿಕಾರ್ಜುನ ಖೊಬಾ ರಾಜ್ಯ ಬಿಜೆಪಿ ನಾಯಕರ ಯಿಂದ ನನಗೆ ಜೀವ ಬೆದರಿಕೆ ಇರುವುದು ಮತ್ತು ಚುನಾವಣಾ ಅಧಿಕಾರಿಗಳು ಬಿಜೆಪಿ ನಾಯಕರ ಕೈ ಗೊಂಬೆ ಆಗಿ ಕೆಲಸ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ